ಹಾರ್ದಿಕ್ ಪಟೇಲ್ ಗೆ ಬಿಜೆಪಿಯ 'ನಕಲಿ ಸೆಕ್ಸ್ ಸಿಡಿ'ಯ ಆತಂಕ
ಅಹಮದಾಬಾದ್, ನವೆಂಬರ್ 5: ಗುಜರಾತ್ ವಿಧಾನಸಭೆಗೂ ಮುನ್ನ ನನ್ನ ತೇಜೋವಧೆಗೆ ಬಿಜೆಪಿ ನಕಲಿ ಸೆಕ್ಸ್ ಸಿಡಿ ಬಳಸಿಕೊಳ್ಳಬಹುದು ಎಂದು ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
"ಬಿಜೆಪಿ ತಿರುಚಿದ ಸೆಕ್ಸ್ ಸಿಡಿಯನ್ನು ತಯಾರಿಸಿದೆ. ಚುನಾವಣೆಗೂ ಮುನ್ನ ಈ ಸಿಡಿ ಬಿಡುಗಡೆಯಾಗಬಹುದು. ಬಿಜೆಪಿಯಿಂದ ಮತ್ತೇನನ್ನು ನಿರೀಕ್ಷಿಸಬಹುದು? ಹಾಗಾಗಿ ಸ್ವಲ್ಪ ತಡೆದುಕೊಳ್ಳಿ, ನೋಡಿ, ಎಂಜಾಯ್ ಮಾಡಿ," ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಶುಕ್ರವಾರ ಮಾತನಾಡಿದ ಹಾರ್ದಿಕ್ ಪಟೇಲ್ ಗೆ ನಿಮಗೆ ಹೇಗೆ ಸಿಡಿ ಬಗ್ಗೆ ಗೊತ್ತು ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಹಾರ್ದಿಕ್, "ಇದು ಬಿಜೆಪಿಯ ಕೀಳು ಕಾರ್ಯತಂತ್ರ," ಎಂದು ಹೇಳಿದ್ದಾರೆ.
ಇನ್ನು 3550 ವಿವಿಪ್ಯಾಟ್ ಗಳು ವಿಫಲವಾಗಿರುವದರ ಬಗ್ಗೆ ಮಾತನಾಡಿದ ಹಾರ್ದಿಕ್, "ಬಿಜೆಪಿ ಚುನಾವಣೆಗೆ ಅನೈತಿಕ ದಾರಿಯಲ್ಲಿ ಸ್ಪರ್ಧಿಸಿದಲಿದೆ," ಎಂದಿದ್ದಾರೆ.
ಇದರ ಜತೆಗೆ ಚುನಾವಣೆಗೂ ಮುನ್ನ ಬಿಜೆಪಿ ಕೋಮು ಭಾವನೆ ಕೆರಳಿಸುವುದಲ್ಲದೆ ಗಲಭೆಯನ್ನೂ ಹುಟ್ಟು ಹಾಕಬಹುದು ಎಂದು ಹಾರ್ದಿಕ್ ಎಚ್ಚರಿಸಿದ್ದಾರೆ.












Click it and Unblock the Notifications