ದೆಹಲಿಯಲ್ಲಿ ಗದ್ದಿಗೆಗೆ ಏರಲು ಬಿಜೆಪಿಗೆ ಮೂರೇ ಗೇಣು

ನವದೆಹಲಿ, ಸೆ 6: ದೆಹಲಿ ಅಸೆಂಬ್ಲಿಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಲೆ. ಗವರ್ನರ್ ಸರಕಾರ ರಚನೆಗೆ ಆಹ್ವಾನ ನೀಡಿ, ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ದೆಹಲಿ ಅಸೆಂಬ್ಲಿಯಲ್ಲಿ ಸರಕಾರ ರಚನೆಯ ಕಸರತ್ತು ಆರಂಭವಾಗಿದೆ.

ಸರಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅನುಮತಿ ಕೋರಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಪತ್ರ ಬರೆದಿದ್ದಾರೆ.

ಲೆ. ಗವರ್ನರ್ ಅವರ ಶಿಫಾರಸು ಪತ್ರವನ್ನು ರಾಷ್ಟ್ರಪತಿಗಳು ಕೇಂದ್ರ ಗೃಹ ಇಲಾಖೆಗೆ ರವಾನಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸರಕಾರ ರಚನೆಯ ನಿರ್ಧಾರ ಆಗಬೇಕಾಗಿದೆ.

49 ದಿನಗಳ ಕಾಲ ಅಧಿಕಾರ ನಡೆಸಿದ್ದ ಆಮ್ ಆದ್ಮಿ ಪಕ್ಷ, ಜನಲೋಕಪಾಲ್ ಮಸೂದೆ ಅನುಷ್ಠಾನಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲವೆಂದು ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಬಿಜೆಪಿ ಬಹುಮತ ಸಾಬೀತು ಪಡಿಸಲು ಬೇರೆ ಪಕ್ಷದ ಸಹಕಾರ ಅತ್ಯಗತ್ಯ.

ಸುಪ್ರೀಂ ಮುಂದೆ ಅರ್ಜಿ ವಿಚಾರಣೆ

ಸುಪ್ರೀಂ ಮುಂದೆ ಅರ್ಜಿ ವಿಚಾರಣೆ

ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಬಾರದು. ದೆಹಲಿಯಲ್ಲಿ ಹೊಸದಾಗಿ ಚುನಾವಣೆ ನಡೆಯಬೇಕು ಎಂದು ಕೋರಿ ಆಪ್ ಮುಖಂಡ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ. ಈ ಅರ್ಜಿಯ ವಿಚಾರಣೆ ಗುರುವಾರದಂದು (ಸೆ 11) ವಿಚಾರಣೆಗೆ ಬರಲಿದೆ. (ಪಿಟಿಐ, ಸಂಗ್ರಹ ಚಿತ್ರ)

ಆಮ್ ಆದ್ಮಿ ಭಾರೀ ವಿರೋಧ

ಆಮ್ ಆದ್ಮಿ ಭಾರೀ ವಿರೋಧ

ಬಿಜೆಪಿಗೆ ಸರಕಾರ ರಚಿಸಲು ಬಹುಮತವಿಲ್ಲ. ಇದು ಲೆ.ಗವರ್ನರ್ ನಜೀಬ್ ಅವರಿಗೆ ಅರಿತಿದೆ. ಅವರು ಪಕ್ಷಪಾತಿಯಂತೆ ವರ್ತಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ - ಆಪ್. (ಪಿಟಿಐ, ಸಂಗ್ರಹ ಚಿತ್ರ)

ಬಿಜೆಪಿಯ ಎಚ್ಚರಿಕೆಯ ನಡೆ

ಬಿಜೆಪಿಯ ಎಚ್ಚರಿಕೆಯ ನಡೆ

ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಇದರಲ್ಲಿ ಪಕ್ಷ ಅವಸರದ ನಡೆಯನ್ನು ಇಡುವುದಿಲ್ಲ ಎಂದು ಬಿಜೆಪಿ ವಕ್ತಾರ ಸತೀಶ್ ಉಪಾಧ್ಯಾಯ ಸ್ಪಷ್ಟ ಪಡಿಸಿದ್ದಾರೆ. (ಪಿಟಿಐ, ಸಂಗ್ರಹ ಚಿತ್ರ)

2013ರಲ್ಲಿ ಪಕ್ಷಗಳ ಬಲಾಬಲ ಈ ರೀತಿಯಿದೆ

2013ರಲ್ಲಿ ಪಕ್ಷಗಳ ಬಲಾಬಲ ಈ ರೀತಿಯಿದೆ

ಒಟ್ಟು ಸ್ಥಾನ: 70
ಬಿಜೆಪಿ : 31
ಆಪ್ : 28
ಕಾಂಗ್ರೆಸ್ : 08
ಜೆಡಿಯು : 01
ಶಿರೋಮಳಿ ಅಕಾಲಿದಳ : 01
ಪಕ್ಷೇತರರು : 01 (ಪಿಟಿಐ, ಸಂಗ್ರಹ ಚಿತ್ರ)

ಲೆಕ್ಕಾಚಾರ ಹೇಗಿದೆಯೆಂದರೆ

ಲೆಕ್ಕಾಚಾರ ಹೇಗಿದೆಯೆಂದರೆ

ಬಹುಮತ ಸಾಬೀತು ಪಡಿಸಲು 35 ಶಾಸಕರ ಅವಶ್ಯಕತೆಯಿದೆ. ಬಿಜೆಪಿ 31 ಸ್ಥಾನವನ್ನು ಗೆದ್ದಿದ್ದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೂವರು ಹಾಲಿ ಸಂಸದರಾಗಿರುವುದರಿಂದ ಸದ್ಯ ಬಿಜೆಪಿಯ ಬಲ 28. (ಪಿಟಿಐ, ಸಂಗ್ರಹ ಚಿತ್ರ)

ಲೆಕ್ಕಾಚಾರ ಹೇಗಿದೆಯೆಂದರೆ

ಲೆಕ್ಕಾಚಾರ ಹೇಗಿದೆಯೆಂದರೆ

28 + 1 (ಶಿರೋಮಣಿ ಅಕಾಲಿದಳ) ಶಾಸಕರ ಬೆಂಬಲ ಬಿಜೆಪಿಗಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರ ಬೆಂಬಲ ದೊರೆತರೂ ಐದು ಶಾಸಕರ ಬೆಂಬಲವನ್ನು ಬಿಜೆಪಿ ಹೇಗೆ ಪಡೆಯಲಿದೆ ಎನ್ನುವುದೇ ಕುತೂಹಲ. ಕಾಂಗ್ರೆಸ್, ಜೆಡಿಯು ಪಕ್ಷ ಬಿಜೆಪಿಗೆ ಬೆಂಬಲಿಸುವುದು ಕಷ್ಟ. ಹಾಗಾಗಿ, ಆಮ್ ಆದ್ಮಿ ಪಕ್ಷದ ಕುದುರೆ ವ್ಯಾಪಾರದ ಆರೋಪ ಸತ್ಯವೋ, ಮಿಥ್ಯವೋ.. ಕಾದು ನೋಡಬೇಕಿದೆ. (ಪಿಟಿಐ, ಸಂಗ್ರಹ ಚಿತ್ರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+