ಆಂತರಿಕ ಸಮೀಕ್ಷೆ : ಎನ್ಡಿಎಗೆ 360ಕ್ಕೂ ಅಧಿಕ ಸ್ಥಾನ!

ನವದೆಹಲಿ, ಸೆಪ್ಟೆಂಬರ್ 13: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ 300ಕ್ಕೂ ಅಧಿಕ ಸ್ಥಾನ ಲಭಿಸುವ ಸಾಧ್ಯತೆಯಿದೆ ಎಂದು ಎಂದು ಪಕ್ಷದ ಆಂತರಿಕ ಸಮೀಕ್ಷೆ ತಿಳಿಸಿದೆ.

ಬಿಜೆಪಿಯೇ 300 ಸೀಟು ಗೆಲ್ಲಲಿದೆ, ಎನ್ಡಿಎಗೆ ಶೇ.51ಕ್ಕೂ ಹೆಚ್ಚು ಶೇಕಡಾವಾರು ಮತ ಸಿಗಲಿದ್ದು, ಇದು 2014ರ ಚುನಾವಣೆಗಿಂತ ಶೇ.12 ಅಧಿಕ ಎಂದು ಸಮೀಕ್ಷೆಯ ವರದಿ ಹೇಳಿದೆ.

ದೇಶದ ಜನರ ಮನಸ್ಥಿತಿ ಬಗ್ಗೆ ನಡೆಸಲಾದ ಸಮೀಕ್ಷೆಯಂತೆ, ಕೇಂದ್ರ ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳು, ಶೇ.90 ಗ್ರಾಮೀಣ ಭಾರತಕ್ಕೆ ತಲುಪಿದೆ. ಇದರಿಂದಾಗಿ ಬಿಜೆಪಿ ಬಗ್ಗೆ ಜನರಿಗೆ ಒಲವಿದೆ ಎಂದು ಸಮೀಕ್ಷಾ ತಂಡದಲ್ಲಿದ್ದ ಮುಖಂಡರೊಬ್ಬರು ಹೇಳಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ ಎಲ್ಲವೂ ಈಗಲೂ ಪ್ರಮುಖ ಸಮಸ್ಯೆಗಳಾಗಿ ಕಾಡುತ್ತಿವೆ.

2014ರ ಚುನಾವಣೆಯಲ್ಲಿ 543 ಲೋಕಸಭಾ ಸ್ಥಾನಗಳ ಪೈಕಿ ಎನ್ಡಿಎ 336 ಸ್ಥಾನ ಗಳಿಸಿದ್ದರೆ, ಬಿಜೆಪಿಗೆ 282 ಸ್ಥಾನ ಸಿಕ್ಕಿತ್ತು.

ಕ್ರೋಮಾ ಡೇಟಾ ಅನಾಲಿಟಿಕ್ಸ್ - ಟೈಮ್ಸ್ ನೌ ವಾಹಿನಿ

ಕ್ರೋಮಾ ಡೇಟಾ ಅನಾಲಿಟಿಕ್ಸ್ - ಟೈಮ್ಸ್ ನೌ ವಾಹಿನಿ

ದೇಶದ ಜನರ ಮನಸ್ಥಿತಿ ಹೇಗಿದೆ ಎಂಬುದನ್ನು ಅರಿತುಕೊಳ್ಳಲು 'ಕ್ರೋಮಾ ಡೇಟಾ ಅನಾಲಿಟಿಕ್ಸ್ - ಟೈಮ್ಸ್ ನೌ ವಾಹಿನಿ' ಜಂಟಿಯಾಗಿ 'ನಮೋ ಜನಪ್ರಿಯತೆಯ ಸಮೀಕ್ಷೆ' ವರದಿ

ಒಟ್ಟು 543 ಲೋಕಸಭಾ ಸ್ಥಾನಗಳಿವೆ. 2014ರಲ್ಲಿ ಚುನಾವಣೆ ನಡೆದಾಗ ಬಿಜೆಪಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಂದೊಮ್ಮೆ ಈಗ ಚುನಾವಣೆ ನಡೆದರೆ ಬಿಜೆಪಿ ಬರೋಬ್ಬರಿ 318 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ.

ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ

ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ

ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಜೊತೆ ಸೇರಿ ನಡೆಸಿದ ಸಮೀಕ್ಷೆ ವರದಿ

ಎನ್‌ಡಿಎ ಮೈತ್ರಿಕೂಟ 274, ಯುಪಿಎ ಮೈತ್ರಿಕೂಟ 164, ಇತರರು 105 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

ಎನ್‌ಡಿಎ ಮೈತ್ರಿಕೂಟ ಶೇ 37ರಷ್ಟು, ಯುಪಿಎ ಮೈತ್ರಿಕೂಟ ಶೇ 31ರಷ್ಟು, ಇತರರು ಶೇ 32ರಷ್ಟು ಮತಗಳನ್ನು ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿ ಓದಿ

India Today-Karvy ಮೂಡ್ ಆಫ್‌ ದಿ ನೇಷನ್ ಸಮೀಕ್ಷೆ

India Today-Karvy ಮೂಡ್ ಆಫ್‌ ದಿ ನೇಷನ್ ಸಮೀಕ್ಷೆ

India Today-Karvy ನಡೆಸಿದ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ ಹೀಗಿರಲಿದೆ. ಇದು ಚುನಾವಣಾ ಫಲಿತಾಂಶದ ಮೊದಲ ಸಾಧ್ಯತೆಯಾಗಿದೆ.
* ಎನ್‌ಡಿಎ 281 ಸೀಟು
* ಯುಪಿಎ 122 ಸೀಟು
* ಇತರರು 140 ಸೀಟುಗಳನ್ನು ಪಡೆಯಲಿದ್ದಾರೆ.
ಎನ್‌ಡಿಎ ಶೇ 36ರಷ್ಟು, ಯುಪಿಎ ಶೇ 31ರಷ್ಟು, ಇತರರು ಶೇ 33ರಷ್ಟು ವೋಟ್ ಶೇರ್ ಪಡೆಯಲಿದ್ದಾರೆ.

ಪ್ರಧಾನಿ ಹುದ್ದೆಗೆ ಯಾರು ಸೂಕ್ತ? ಇಲ್ಲಿದೆ ಉತ್ತರ

ಐ ಪ್ಯಾಕ್ ಸಮೀಕ್ಷೆಯಲ್ಲಿ ಮೋದಿಗೆ ಜಯ

ಐ ಪ್ಯಾಕ್ ಸಮೀಕ್ಷೆಯಲ್ಲಿ ಮೋದಿಗೆ ಜಯ

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(I-PAC) ನಡೆಸಿದ ಸಮೀಕ್ಷೆ ವರದಿಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮತ್ತೊಮ್ಮೆ ಮುನ್ನಡೆಸಲು ಸಮರ್ಥರು ಎಂದು ಜನತೆ ಅಭಿಪ್ರಾಯಪಟ್ಟಿದ್ದಾರೆ. ಶೇ 48ರಷ್ಟು ಮಂದಿ ಮೋದಿ ಪರ ಮತ ಹಾಕಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರ ಶೇ 11ರಷ್ಟು ಮತಗಳು ಬಂದಿವೆ.

#NationalAgendaForum ಎಂಬ ಹೆಸರಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 57 ಲಕ್ಷ ಮಂದಿ ಪಾಲ್ಗೊಂಡಿದ್ದರು. ದೇಶದ ಪ್ರಧಾನಿ, ಮುಖ್ಯಮಂತ್ರಿಗಳು, ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+