ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ?

By Gururaj
|
Google Oneindia Kannada News

ಬೆಂಗಳೂರು, ಮೇ 25 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 4 ವರ್ಷಗಳನ್ನು ಪೂರೈಸಿದೆ. ಈಗ ಚುನಾವಣೆ ನಡೆದರೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಬಹುದು? ಎಂದು ಸಮೀಕ್ಷೆ ನಡೆಸಲಾಗಿದೆ.

ಶುಕ್ರವಾರ ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಜೊತೆ ಸೇರಿ ನಡೆಸಿದ ಸಮೀಕ್ಷೆ ವರದಿ ಬಹಿರಂಗವಾಗಿದೆ. ದೇಶದ ಸುಮಾರು 60 ಸಾವಿರ ಜನರನ್ನು ಸಂದರ್ಶನ ಮಾಡಿ ಈ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ.

ಟೈಮ್ಸ್ ನೌ ಸಮೀಕ್ಷೆ: ಈಗ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಬಹುಮತಟೈಮ್ಸ್ ನೌ ಸಮೀಕ್ಷೆ: ಈಗ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಬಹುಮತ

ಸಮೀಕ್ಷೆಯ ವರದಿಯ ಪ್ರಕಾರ ಈಗ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 274, ಯುಪಿಎ ಮೈತ್ರಿಕೂಟ 164, ಇತರರು 105 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಡಿಮೆ ಮತಗಳನ್ನು ಪಡೆಯಲಿದೆ.

ಇಂಡಿಯಾ ಟುಡೇ ಸಮೀಕ್ಷೆ : ಯುಪಿಯಲ್ಲಿ ಎನ್‌ಡಿಎ ಮತಗಳಿಕೆ ಕಡಿಮೆ!ಇಂಡಿಯಾ ಟುಡೇ ಸಮೀಕ್ಷೆ : ಯುಪಿಯಲ್ಲಿ ಎನ್‌ಡಿಎ ಮತಗಳಿಕೆ ಕಡಿಮೆ!

ಎನ್‌ಡಿಎ ಮೈತ್ರಿಕೂಟ ಶೇ 37ರಷ್ಟು, ಯುಪಿಎ ಮೈತ್ರಿಕೂಟ ಶೇ 31ರಷ್ಟು, ಇತರರು ಶೇ 32ರಷ್ಟು ಮತಗಳನ್ನು ಪಡೆಯಲಿದ್ದಾರೆ. ಲೋಕಸಭೆ ಚುನಾವಣೆಗೆ 1 ವರ್ಷ ಬಾಕಿ ಇದೆ. 2019ರ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ...

ಯಾರ ಮತಗಳಿಕೆ ಎಷ್ಟು?

ಯಾರ ಮತಗಳಿಕೆ ಎಷ್ಟು?

  • ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಸಮೀಕ್ಷೆಯ ವರದಿ ಪ್ರಕಾರ ರಾಜಸ್ಥಾನದಲ್ಲಿ ಎನ್‌ಡಿಎ ಶೇ 39, ಯುಪಿಎ ಶೇ 44ರಷ್ಟು, ಇತರರು ಶೇ 17ರಷ್ಟು ಮತಗಳನ್ನು ಪಡೆಯಲಿವೆ.
  • ಮಹಾರಾಷ್ಟ್ರದಲ್ಲಿ ಎನ್‌ಡಿಎ ಶೇ 48ರಷ್ಟು, ಯುಪಿಎ ಶೇ 40 ರಷ್ಟು, ಇತರರು ಶೇ 12ರಷ್ಟು ಮತಗಳನ್ನು ಪಡೆಯಲಿದ್ದಾರೆ.
  • ಬಿಹಾರದಲ್ಲಿ ಎನ್‌ಡಿಎ ಶೇ 60ರಷ್ಟು, ಯುಪಿಎ ಶೇ 34ರಷ್ಟು, ಇತರರು ಶೇ 6ರಷ್ಟು ಮತಗಳನ್ನು ಪಡೆಯಲಿದ್ದಾರೆ.

80 ಸ್ಥಾನ ಹೊಂದಿರುವ ರಾಜ್ಯ

80 ಸ್ಥಾನ ಹೊಂದಿರುವ ರಾಜ್ಯ

80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ದೊಡ್ಡ ರಾಜ್ಯ ಉತ್ತರ ಪ್ರದೇಶ. ಸಮೀಕ್ಷೆಯ ಪ್ರಕಾರ

ಉತ್ತರ ಪ್ರದೇಶದಲ್ಲಿ ಎನ್‌ಡಿಯ ಮೈತ್ರಿಕೂಟ ಶೇ 35ರಷ್ಟು ವೋಟ್‌ ಶೇರ್‌ ಪಡೆಯಲಿದೆ. 2014ರಲ್ಲಿ ಮೈತ್ರಿಕೂಟ 43ರಷ್ಟು ವೋಟ್ ಶೇರ್ ಪಡೆದಿತ್ತು. ಅದಕ್ಕೆ ಹೋಲಿಕೆ ಮಾಡಿದಲ್ಲಿ ಮತಗಳಿಕೆ ಪ್ರಮಾಣ ಕಡಿಮೆಯಾಗಲಿದೆ.

ಯುಪಿಎ ಮೈತ್ರಿಕೂಟ ಶೇ 12ರಷ್ಟು ಮತಗಳಿಕೆಯನ್ನು ಉತ್ತರ ಪ್ರದೇಶದಲ್ಲಿ ಪಡೆಯಲಿದೆ. 2014ರಲ್ಲಿ ಶೇ 8ರಷ್ಟು ಮತಗಳಿಕೆ ಇತ್ತು. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಸೇರಿದಂತೆ ಇತರ ಪಕ್ಷಗಳು 2018ರಲ್ಲಿ ಶೇ 53ರಷ್ಟು ಮತಗಳನ್ನು ಪಡೆಯಲಿವೆ.

ಒಟ್ಟಾರೆ ಮತಗಳಿಕೆ ಎಷ್ಟು?

ಒಟ್ಟಾರೆ ಮತಗಳಿಕೆ ಎಷ್ಟು?

ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಸಮೀಕ್ಷೆಯ ವರದಿ ಪ್ರಕಾರ ಎನ್‌ಡಿಎ ಮೈತ್ರಿಕೂಟ ಶೇ 37ರಷ್ಟು, ಯುಪಿಎ ಮೈತ್ರಿಕೂಟ ಶೇ 31ರಷ್ಟು, ಇತರರು ಶೇ 32ರಷ್ಟು ಮತಗಳನ್ನು ಪಡೆಯಲಿದ್ದಾರೆ.

2014ರಲ್ಲಿ ಎನ್‌ಡಿಎ ಶೇ 36, ಯುಪಿಎ ಶೇ 25, ಇತರರು ಶೇ 39ರಷ್ಟು ಮತಗಳನ್ನು ಪಡೆದಿದ್ದರು.

ಯಾವ ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

ಯಾವ ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಸಮೀಕ್ಷೆಯ ವರದಿ ಪ್ರಕಾರ 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 274 ಸ್ಥಾನಗಳನ್ನು ಗೆಲ್ಲಲಿದೆ. ಯುಪಿಎ ಮೈತ್ರಿಕೂಟ 164, ಇತರರು 015 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

204ರ ಚುನಾವಣೆಯಲ್ಲಿ

  • ಎನ್‌ಡಿಎ 323
  • ಯುಪಿಎ 60
  • ಇತರರು 153 ಸ್ಥಾನವನ್ನು ಗೆದ್ದಿದ್ದರು.

English summary
According to the Indiatoday CSDS Lokniti mood of nation Survey 2018 The National Democratic Alliance (NDA) will get 274 seat. The United Progressive Alliance (UPA) will get 184 seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X