Assembly Election Results 2024: ಜಮ್ಮು-ಕಾಶ್ಮೀರ ಹಾಗೂ ಹರಿಯಾಣದಲ್ಲಿ ಬಿಜೆಪಿ ಮುನ್ನಡೆ-ತಲೆಕೆಳಗಾದ ಕೈ ಲೆಕ್ಕಾಚಾರ?
Assembly Election Results 2024: ಈಗಾಗಲೇ ಕಣಿವೆ ರಾಜ್ಯ ಜಮ್ಮು & ಕಾಶ್ಮೀರ ಹಾಗೂ ಹರಿಯಾಣದಲ್ಲಿ ವಿಧಾನಸಭೆಯ ಚುನಾವಣೆ ನಡೆದಿದೆ. ಇನ್ನು ಇಂದು (ಅಕ್ಟೋಬರ್ 08) ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಎರಡು ರಾಜ್ಯಗಳಲ್ಲೂ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ ಮುನ್ನಡೆ ಸಾಧಿಸಿದೆ.
ಜಮ್ಮು ಮತ್ತು ಕಾಶ್ಮೀರದ 90 ಹಾಗೂ ಹರಿಯಾಣದ 90 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಂದು (ಅಕ್ಟೋಬರ್ 08) ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಚುನಾವಣೆ ಆಯೋಗದ ಪ್ರಕಾರ, ಇದೀಗ ಹರಿಯಾಣದ 43 ಕ್ಷೇತ್ರಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ 23 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಮೂಲಕ ಆರಂಭಿಕವಾಗಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ಲೆಕ್ಕಾಚಾರ ತಲೆಕೆಳಗಾದಂತಾಗಿದೆ.

ಚುನಾವಣೆ ಆಯೋಗದ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ 43, ಕಾಂಗ್ರೆಸ್ 34, ಐಎನ್‌ಡಿ 5, ಐಎನ್‌ಎಲ್‌ಡಿ 1, ಬಿಎಸ್‌ಪಿ 1 ಸ್ಥಾನ. ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರಾದಲ್ಲಿ ಜೆಕೆಎನ್ 40, ಬಿಜೆಪಿ 23, ಐಎನ್‌ಡಿ 10, ಐಎನ್‌ಸಿ 8, ಜೆಕೆಪಿಡಿಪಿ 3 ಸ್ಥಾನ.
ಹರಿಯಾಣದಲ್ಲಿ ಶೇಕಡ 67.90 ಮತದಾನವಾಗಿದೆ. 90 ವಿಧಾನಸಭಾ ಸ್ಥಾನಗಳು, ಒಟ್ಟು 1,031 ಅಭ್ಯರ್ಥಿಗಳು ಕಣದಲ್ಲಿದ್ದರು. ಇಂದು ಆರಂಭದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಮುನ್ನಡೆ ಸಾಧಿಸಿತ್ತು. ಆದರೆ, ಇದೀಗ ಚುನಾವಣೆ ಆಯೋಗದ ಫಲಿತಾಂಶದ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಿತ್ತು, ಕೈ ಲೆಕ್ಕಾಚಾರ ಬುಡಮೇಲಾದಂತಿದೆ.
ಹಾಗೆಯೇ ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ನಡೆದಿದ್ದು, ಇಂದು (ಅಕ್ಟೋಬರ್ 08) ಮತ ಎಣಿಕೆ ಕಾರ್ಯ ನಡೆದಿದೆ. ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ ಇದೀಗ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಒಟ್ಟು 873 ಅಭ್ಯರ್ಥಿಗಳು ಕಣದಲ್ಲಿದ್ದರು.
ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ 700 ವೀಕ್ಷಕರನ್ನು ಸಹ ನಿಯೋಜಿಸಲಾಗಿದೆ. ಇದರೊಂದಿಗೆ 10,000ಕ್ಕೂ ಹೆಚ್ಚು ಹೆಚ್ಚುವರಿ ಭದ್ರತಾ ಪಡೆಗಳನ್ನು ಕೂಡ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಇನ್ನು ಇದೀಗ ಜಮ್ಮು ಕಾಶ್ಮೀರದಲ್ಲಿ 2014ರ ಬಳಿಕ ಕೈಗೊಂಡ ಮೊದಲ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯ ಗೊಂಡಿದ್ದು, ನ್ಯಾಷನಲ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ 48 ಸೀಟ್‌ಗಳು ಸಿಕ್ಕಿದ್ದು, ಬಿಜೆಪಿಗೆ 29 ಸ್ಥಾನಗಳನ್ನು ಪಡೆದಿದೆ.












Click it and Unblock the Notifications