ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ, ಕಾರ್ಯಕರ್ತರಿಂದ ವಿಜಯೋತ್ಸವ
ಲಖನೌ, ಮಾರ್ಚ್. 11 : ಕೂಸು ಹುಟ್ಟು ಮುನ್ನ ಕುಲಾಯಿ ಹೊಲಿಸಿದರು ಎನ್ನುವಂತೆ ಇನ್ನು ಫಲಿತಾಂಶ ಪ್ರಕಟವಾಗಿಲ್ಲ ಆಗಲೇ ಉತ್ತರ ಪ್ರದೇಶದ ಲಖನೌ ನಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಮುಗಿಲು ಮುಟ್ಟಿದೆ.
403 ಸ್ಥಾನಗಳಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು 202 ಸ್ಥಾನಗಳ ಅಗತ್ಯವಿದ್ದು ಸಧ್ಯ ಬಿಜೆಪಿ 262 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುಮತ ಗಳಿಸುವ ಎಲ್ಲಾ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಇದರಿಂದ ಕಾರ್ಯಕರ್ತರು ಈಗಾಲೇ ಸಿಹ ಹಂಚಿ ಸಂಭ್ರಮಚಾರಣೆ ಆಚರಣೆಯಲ್ಲಿ ತೊಡಗಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

BJP leading in Uttar Pradesh: Party workers celebrate in Lucknow #ElectionResults pic.twitter.com/SmmoBRNKSV
— ANI UP (@ANINewsUP) March 11, 2017
ಬಿಜೆಪಿ 251 ರಿಂದ 279 ಸ್ಥಾನಗಳನ್ನು ಗಳಿಸಲಿದೆ ಎಂದು ಇನ್ ಇಂಡಿಯಾ ಟುಡೇ ಮತ್ತು ಅಕ್ಸಿಸ್ ಸಮೀಕ್ಷೆ ಹೇಳಿವೆ. ಇನ್ನು ಸಮಾಜವಾದಿ ಪಕ್ಷ 88 ರಿಂದ 112 ಸ್ಥಾನಗಳಿಸಿದರೆ ಬಹುಜನ ಸಮಾಜ ಪಕ್ಷ ಕೇವಲ 28-45 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.












Click it and Unblock the Notifications