ಉತ್ತರ ಪ್ರದೇಶ: ಗುಂಡಿಕ್ಕಿ, ಇರಿದು ಬಿಜೆಪಿ ಮುಖಂಡನ ಸಹೋದರನ ಹತ್ಯೆ
ಬಂಡಾ, ಫೆಬ್ರವರಿ 2: ಅಪರಿಚಿತ ದುಷ್ಕರ್ಮಿಗಳು ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಸಹೋದರರೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶ ಬಂಡಾ ಜಿಲ್ಲೆಯ ಸಿಂಘಪುರ ಎಂಬಲ್ಲಿ ನಡೆದೆ.
ಮೃತರನ್ನು ಬಿಜೆಪಿ ಮುಖಂಡ ಅವ್ದೇಶ್ ತಿವಾರಿ ಎಂಬುವವರ ತಮ್ಮ ರಾಕೇಶ್ ತಿವಾರಿ ಎಂದು ಗುರುತಿಸಲಾಗಿದೆ. ಇಂದು(ಫೆ.2) ಬೆಳಿಗ್ಗೆ ಹೊಲಕ್ಕೆಂದು ಹೋಗಿದ್ದ ರಾಕೇಶ್, ಮರಳಿ ಬರುವ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಲ್ಲದೆ, ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.
ತೀವ್ರ ರಕ್ತಸ್ರಾವದಿಂದಾಗಿ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಲ್ಲಿನ ಬಿಸಾಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಆರೋಪಿಳ ಪತ್ತೆಗೆ ಪೊಲೀಸರು ಬಲೆಬಿಸೀದ್ದಾರೆ.

ಕೊಲೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ರಾಜಕೀಯ ವೈಷಮ್ಯವಿದ್ದೀತು ಎಂದು ಅನುಮಾನಿಸಲಾಗಿದೆ.












Click it and Unblock the Notifications