ಪ್ರಿಯಾಂಕಾ ಗಾಂಧಿ ಬಳಿಕ ದೆಹಲಿ ಸಿಎಂ ಅತಿಶಿ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

ದೆಹಲಿ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡೆಗಿದ್ದಾರೆ. ಬಿಜೆಪಿ ಕೂಡ ರಾಷ್ಟ್ರ ರಾಜಧಾನಿಯನ್ನು ಗೆಲ್ಲಲ್ಲು ಅಬ್ಬರದ ಪ್ರಚಾರ ಮಾಡುತ್ತಿದೆ. ಪ್ರಚಾರ ಮಾಡುವ ಭರದಲ್ಲಿ ಬಿಜೆಪಿ ನಾಯಕ ರಮೇಶ್ ಬಿಧುರಿ ಎಡವಟ್ಟು ಮಾಡಿಕೊಂಡಿದ್ದು ಪ್ರಿಯಾಂಕಾ ಗಾಂಧಿ ಮತ್ತು ದೆಹಲಿ ಸಿಎಂ ಅತಿಶಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ದೆಹಲಿಯ ಕಲ್ಕಾಜಿಯಲ್ಲಿರುವ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತೆ ಮಾಡಿಸುತ್ತೇನೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ರ್‍ಯಾಲಿಯಲ್ಲಿಯೇ ದೆಹಲಿ ಸಿಎಂ ಅತಿಶಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

bjp leader ramesh bidhuri controversy deilgi cm atishi name

ಭಾನುವಾರ ದೆಹಲಿ ರೋಹಿಣಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ, ಕೇಜ್ರಿವಾಲ್ ಭ್ರಷ್ಟ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರ. ದೆಹಲಿ ಸಿಎಂ ಅತಿಶಿ ತನ್ನ ತಂದೆಯನ್ನೇ ಬದಲಾಯಿಸಿದ್ದಾರೆ. ಮೊದಲು ಅತಿಶಿ ಮರ್ಲೆನಾ ಇದ್ದ ಹೆಸರು ಈಗ ಅತಿಶಿ ಸಿಂಗ್ ಆಗಿದೆ ಇದೇ ಅವರ ವ್ಯಕ್ತಿತ್ವ ಎಂದು ಹೇಳಿದ್ದಾರೆ.

ರಮೇಶ್ ಬಿಧುರಿ ಪ್ರಸ್ತುತ ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು ಆಮ್ ಆದ್ಮಿ ಪಕ್ಷದಿಂದ ಅತಿಶಿ ಕಣಕ್ಕಿಳಿದಿದ್ದಾರೆ. ಅತಿಶಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಅವರ ಹೆಸರು ಅತಿಶಿ ಮರ್ಲೆನಾ ಎಂದಿತ್ತು, ಈಗ ಅವರ ಹೆಸರು ಅತಿಶಿ ಸಿಂಗ್ ಆಗಿದೆ. ಅವರು ತನ್ನ ತಂದೆಯನ್ನೇ ಬದಲಾಯಿಸಿದ್ದಾರೆ ಎಂದಿದ್ದು ವಿವಾದಕ್ಕೆ ಕಾರಣವಾಗಿದೆ. ಅತಿಶಿ 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭಿರ್ ವಿರುದ್ಧ 4.7 ಲಕ್ಷ ಮತಗಳ ಅಂತರದಿಂದ ಸೋತಿದ್ದರು.

ಪ್ರಿಯಾಂಕ ಬಗ್ಗೆ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಬಿಧುರಿ

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಗ್ಗೆ ಮಾಡಿದ್ದ ಕಾಮೆಂಟ್ ಬಗ್ಗೆ ರಮೇಶ್ ಬಿಧುರಿ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಕೂಡ ಈ ಹಿಂದೆ ಇದೇ ರೀತಿ ಹೇಳಿದ್ದರು. ಹೇಮಾ ಮಾಲಿನಿ ಕೆನ್ನೆಯಂತೆ ಬಿಹಾರದ ರಸ್ತೆಗಳನ್ನು ಮಾಡಿಸುತ್ತೇನೆ ಎಂದಿದ್ದರು ಎನ್ನುವುದನ್ನು ನೆನಪಿಸಿಕೊಂಡರು.

ತಮ್ಮ ಮಾತುಗಳು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಲು ಮುಂದಾದರು. ಲಾಲೂ ಪ್ರಸಾದ್ ಇದೇ ರೀತಿ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಾಯಕರು ಸುಮ್ಮನಿದ್ದರು. ಆದರೂ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅದರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ, ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+