ಬಿಜೆಪಿ 250 ಅಭ್ಯರ್ಥಿಗಳ ಹೆಸರು ಅಂತಿಮ: ಅಡ್ವಾಣಿ, ಜೋಶಿ ಸ್ಪರ್ಧೆ ಇಲ್ಲ?

Recommended Video

      Lok Sabha Election 2019: ಬಿಜೆಪಿ 250 ಅಭ್ಯರ್ಥಿಗಳ ಹೆಸರು ಅಂತಿಮ | Oneinida Kannada

      ನವದೆಹಲಿ, ಮಾರ್ಚ್ 21: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಸುಮಾರು 250 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದ್ದು, ಎಲ್ ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದಂತೆ ಅನೇಕ ಹಿರಿಯರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡುವುದರ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.

      ಪಕ್ಷದ ಮೂಲಗಳ ಪ್ರಕಾರ ಬಿಜೆಪಿ ಸಂಸದೀಯ ಮಂಡಳಿ ಸುಮಾರು 250 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಇದರಲ್ಲಿ ಹಿರಿಯ ನಾಯಕರ ಹೆಸರುಗಳಿಲ್ಲ.

      ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಕೋಶಿಯಾರಿ ಮತ್ತು ಬಿಸಿ ಖಂಡೂರಿ ಚುನಾವಣಾ ಸ್ಪರ್ದೆಯಿಂದ ಹಿಂದೆ ಸರಿದಿದ್ದು, ಯುವ ರಾಜಕಾರಣಿಗಳಿಗೆ ಅವಕಾಶ ನೀಡಲು ಬಯಸಿದ್ದಾರೆ.

      BJP finalised 250 candidates name veterans may not contest including lk advani murli manohar joshi

      2014ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ದಿಯೋರಿಯಾದಿಂದ ಆಯ್ಕೆಯಾಗಿದ್ದ ಮಾಜಿ ಸಚಿವ ಕಲ್ರಾಜ್ ಮಿಶ್ರಾ ಮತ್ತು ಲೋಕಸಭೆಯ ಮಾಜಿ ಉಪಾಧ್ಯಕ್ಷ ಕರಿಯಾ ಮುಂಡಾ ಕೂಡ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಹಿರಿಯರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಅವರೂ ಚುನಾವಣಾ ರಾಜಕೀಯದಲ್ಲಿ ಉಳಿಯುವ ಸಾಧ್ಯತೆ ಕ್ಷೀಣಿಸಿದೆ ಎನ್ನಲಾಗಿದೆ.

      91 ವರ್ಷದ ಅಡ್ವಾಣಿ ಅವರನ್ನು ಮುರಳಿ ಮನೋಹರ್ ಜೋಶಿ ಅವರೊಂದಿಗೆ ಪಕ್ಷದ 'ಮಾರ್ಗದರ್ಶನ ಮಂಡಲ'ದಲ್ಲಿ ಸದಸ್ಯರನ್ನಾಗಿ ಒತ್ತಾಯಪೂರ್ವಕವಾಗಿ ಇರಿಸಲಾಗಿತ್ತು. ಇದಕ್ಕೆ 75 ವರ್ಷ ಮೇಲ್ಪಟ್ಟ ಸಂಸದರಿಗೆ ಸಚಿವ ಸ್ಥಾನದ ಹೊಣೆಗಾರಿಕೆಗಳನ್ನು ನೀಡಬಾರದು ಎಂಬ ಸಂಘ ಪರಿವಾರದ ನಿಯಮ ಕಾರಣ ಎನ್ನಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+