ಕೇರಳದ ಹಲವೆಡೆ ಸಿಪಿಎಂ ಹಾಗೂ ಬಿಜೆಪಿ ಕಾರ್ಯಕರ್ತರ ಮಾರಾಮಾರಿ

Posted By:
Subscribe to Oneindia Kannada

ತಿರುವನಂತಪುರಂ, ಜುಲೈ 28: ಕೇರಳದ ಬಿಜೆಪಿ ಕಚೇರಿ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ ಸುದ್ದಿ ಹಬ್ಬುತ್ತಿದ್ದಂತೆ, ರಾಜ್ಯದ ಹಲವೆಡೆ ಸಿಪಿಎಂ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಗುರುವಾರ ತಡರಾತ್ರಿ 1.20ರ ಸುಮಾರಿಗೆ ಬಿಜೆಪಿಯ ಕೇಂದ್ರ ಕಚೇರಿ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದರು.

ಸಿಪಿಎಂ ಮುಖಂಡ ಕೆ ಬಾಲಕೃಷ್ಣ, ಬಿಜೆಪಿ ರಾಜ್ಯಾಧ್ಯಕ್ಷ ಕುಮಾರಂ ರಾಜಶೇಖರನ್ ಅವರನ್ನು ಗುರಿಯನ್ನಾಗಿಸಿಕೊಂಡು ಹಲ್ಲೆ ನಡೆಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಹಲವೆಡೆ ಉಭಯ ಪಕ್ಷಗಳ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಕಚೇರಿ ಮುಂದೆ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ.

BJP-CPM workers go on rampage in Kerala, several leaders targeted

ಮನಕಾಡ್ -ಆಟುಕಳ್-ಚಾಲಾಯಿ ಪ್ರದೇಶದಲ್ಲಿ ಹೆಚ್ಚಿನ ಗಲಭೆಗಳು ಉಂಟಾಗಿವೆ. ರಾಜಕೀಯ ಮುಖಂಡರು, ವಾರ್ಡ್ ಕೌನ್ಸಿಲರ್ ಗಳು ಸೇರಿದಂತೆ 10ಕ್ಕೂ ಅಧಿಕ ಜನಪ್ರತಿನಿಧಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮನೆಗಳ ಮುಂದಿದ್ದ ವಾಹನಗಳ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಒಟ್ಟಾರೆ, ವಿವಿಧೆಡೆ ನಡೆದ ಗಲಭೆಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮನಕಾಡ್ ಪ್ರದೇಶದ ಸಿಐಟಿಯು ಕಾರ್ಯದರ್ಶಿ ಶ್ಯಾಮ್ ಎಂಬಾತನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಡಿವೈ ಎಫ್ ಐ ಕಾರ್ಯದರ್ಶಿ ಉನ್ನಿ ಅವರ ಮೇಲೂ ಹಲ್ಲೆ ಮಾಡಲಾಗಿದೆ. ರಾಜಕೀಯ ಪಕ್ಷಗಳ ಶೀತಲ ಸಮರದ ನಡುವೆ ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Several incidents of violence have been reported in Kerala and the BJP's state office too was vandalised. Since last night workers of both parties, BJP and CPM have gone on a rampage and attacked many houses of leaders.
Please Wait while comments are loading...