ಇದೇ ಮೊದಲ ಬಾರಿಗೆ ಕಾಂಗ್ರೆಸ್ ಗಿಂತ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಸ್ಪರ್ಧೆ

ನವದೆಹಲಿ, ಏಪ್ರಿಲ್ 25: ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗಿಂತ ಹೆಚ್ಚು ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತಿದೆ. 543+2 ಸದಸ್ಯ ಬಲದ ಲೋಕಸಭೆಯ ಪೈಕಿ 437 ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಜನ ಸಂಘ ಎಂಬ ಹೆಸರಿನಿಂದ ಬಿಜೆಪಿ ಆಗಿ 1980ರಲ್ಲಿ ಬದಲಾದ ನಂತರದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಇದು ಸೂಚಿಸುತ್ತಿದೆ. ಅಷ್ಟೇ ಅಲ್ಲ, ಎಷ್ಟು ಕಡೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯಲಾಗಿದೆ ಎಂಬುದು ಕೂಡ ಇಲ್ಲಿ ಗಣನೆಗೆ ಬರುತ್ತದೆ. ಉದಾಹರಣೆ ಆಂಧ್ರಪ್ರದೇಶದಲ್ಲಾಗಲೀ, ತೆಲಂಗಾಣದಲ್ಲಾಗಲಿ ಬಿಜೆಪಿಯು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿಲ್ಲ. ಅಲ್ಲಿನ ಎಲ್ಲ, ಅಂದರೆ 42 ಸ್ಥಾನಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ವಿವಿಧ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿರುವುದರಿಂದ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನದಲ್ಲಿದೆ. 2009ರ ಚುನಾವಣೆಯಲ್ಲಿ ಬಿಜೆಪಿ 433 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 440 ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿತ್ತು. ಕೊನೆಗೆ ಬಿಜೆಪಿ 116 ಸ್ಥಾನಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ 206 ಸ್ಥಾನಗಳಲ್ಲಿ ಜಯಿಸಿ, ಇತರ ಪಕ್ಷಗಳ ಜತೆಗೂಡಿ ಯುಪಿಎ ಸರಕಾರ ರಚಿಸಿತ್ತು.

BJP contests more LS seats than Congress for the first time

ಆ ನಂತರದ ಚುನಾವಣೆ 2014ರಲ್ಲಿ ನಡೆದಿದ್ದು. ಬಿಜೆಪಿಯು 428 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 282 ಸ್ಥಾನಗಳಲ್ಲಿ ಜಯಿಸಿತ್ತು. ಕಾಂಗ್ರೆಸ್ ಪಕ್ಷವು 464 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 44 ಸ್ಥಾನಗಳನ್ನು ಜಯಿಸಿತ್ತು. 1996ನೇ ಇಸವಿಯ ಚುನಾವಣೆ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ.

ಈ ಬಾರಿ ಚುನಾವಣೆಯಲ್ಲಿ 423 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಆ ಸಂಖ್ಯೆ ಇನ್ನು ಸ್ವಲ್ಪ ಹೆಚ್ಚಾಗಬಹುದು. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿರುವುದು ಬಹುಜನ ಸಮಾಜ ಪಕ್ಷ. ರಾಷ್ಟ್ರ ಮಟ್ಟದಲ್ಲಿ ಹೆಜ್ಜೆ ಗುರುತನ್ನು ಮೂಡಿಸುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದು, ಮತದಾನ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಉತ್ತರಪ್ರದೇಶದಲ್ಲೇ ತನ್ನ ನೆಲೆ ಕಳೆದುಕೊಂಡಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಒಂದು ಸ್ಥಾನ ಕೂಡ ಜಯಿಸಲಿಲ್ಲ. ಸ್ಪರ್ಧೆ ಮಾಡಿದ್ದು 503 ಕ್ಷೇತ್ರಗಳಲ್ಲಿ. 2009ರಲ್ಲಿ 500 ಸ್ಥಾನಗಳ ಪೈಕಿ 21ರಲ್ಲಿ ಜಯ ಕಂಡಿತ್ತು. ಕಳೆದ ಎರಡು ಚುನಾವಣೆಯೂ ಸೇರಿ, ಯಾವ ಪಕ್ಷಗಳು ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಿದ್ದವು ಎಂಬುದರ ವಿವರ ಇಲ್ಲಿದೆ.

ಬಿಜೆಪಿ: 437 (2019), 428 (2014), 433 (2009)

ಕಾಂಗ್ರೆಸ್: 423 (2019), 464 (2014), 440 (2009)

ಬಹುಜನ ಸಮಾಜ ಪಕ್ಷ: 139 (2019) ಭಾಗಶಃ ಪಟ್ಟಿ ಮಾತ್ರ, 503 (2014), 500 (2009)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+