ಎಲ್ಲ ಪರೀಕ್ಷೆಗಳಲ್ಲಿ ಸೋತ ಮಗು; ಈ ಪ್ರಕರಣವು I.N.D.I.A ಯಂತೆಯೇ ಇದೆಯೇ? ವಿಪಕ್ಷಗಳ ವಿರುದ್ಧ ನಡ್ಡಾ ವಾಗ್ದಾಳಿ

ದೆಹಲಿ,ಜುಲೈ 25: ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರಿಟ್ಟ ನಿರ್ಧಾರವನ್ನು ಮಗುವಿನ ಬಗ್ಗೆ ಗ್ರಹಿಕೆಯನ್ನು ಬದಲಾಯಿಸಲು ಮಗುವಿನ ಪೋಷಕರು ಹೆಸರನ್ನು ಬದಲಾಯಿಸಿದ ಪ್ರಕರಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೋಲಿಸಿದ್ದಾರೆ.

ವಿಪಕ್ಷಗಳ ವಿರುದ್ದ ಟ್ವೀಟ್‌ ಮೂಲಕ ಕಿಡಿಕಾರಿರುವ ಅವರು, ಒಂದು ಮಗು ತನ್ನ ಎಲ್ಲಾ ಪರೀಕ್ಷೆಗಳಲ್ಲಿ ಫೇಲ್ ಆಗಿತ್ತು. ಅವನನ್ನು ಸಹಪಾಠಿಗಳು ಮತ್ತು ನೆರೆಹೊರೆಯವರು ದ್ವೇಷಿಸುತ್ತಿದ್ದರು. ಆದ್ದರಿಂದ ಪೋಷಕರು ಅವನ ಗ್ರಹಿಕೆಯನ್ನು ಬದಲಾಯಿಸಲು ಅವನ ಹೆಸರನ್ನು ಬದಲಾಯಿಸಲು ಯೋಚಿಸಿದರು. ಈ ಪ್ರಕರಣವು I.N.D.I.A ಯಂತೆಯೇ ಅಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.

BJP President JP Nadda

ವಿಪಕ್ಷಗಳ ಮೈತ್ರಿ ಒಕ್ಕೂಟ ಇಂಡಿಯಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರುವಾಗ್ದಾಳಿ ನಡೆಸಿದ ಬೆನ್ನಲ್ಲೇ ನಡ್ಡಾ ಈ ರೀತಿ ಟ್ವೀಟ್ ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಯ ಕಾರ್ಯತಂತ್ರವನ್ನು ಚರ್ಚಿಸಲು ಕಳೆದ ವಾರ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿತ್ತು. ಇದನ್ನು ಟೀಕಿಸಿದ ಮೋದಿ ವಿಪಕ್ಷಗಳು ಇಂಡಿಯಾ ಎಂಬ ಹೆಸರಿಗಾಗಿ ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ ಎಂದು ಕಿಡಿಕಾರಿದ್ದಾರೆ.

ವಿರೋಧ ಪಕ್ಷಗಳ ಒಕ್ಕೂಟದ ರಚನೆ ಬಗ್ಗೆ ವ್ಯಂಗ್ಯವಾಡಿರುವ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳು ದಿಕ್ಕುತೋಚದಂತಹ ಪರಿಸ್ಥಿತಿಗೆ ತಲುಪಿವೆ. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎಂದರೆ ಇಂಡಿಯನ್ ಮುಜಾಹಿದ್ದೀನ್‌ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂದು ಕೂಡ ಆಗುತ್ತದೆ. ಇಂತಹ ದಿಕ್ಕುದೆಸೆಯಿಲ್ಲದಿರುವ ವಿರೋಧ ಪಕ್ಷಗಳನ್ನು ನಾನು ಎಂದಿಗೂ ನೋಡಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಎಂದು ಹಸರಿಟ್ಟುಕೊಂಡು ವಿಪಕ್ಷಗಳು ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇವುಗಳಲ್ಲೆಲ್ಲ ಇಂಡಿಯಾ ಎಂಬ ಹೆಸರಿದೆ. ಇಂಡಿಯಾ ಎಂಬ ಹೆಸರನ್ನು ಬಳಸುವುದರಿಂದ ಏನೂ ಆಗುವುದಿಲ್ಲ. ದೇಶದ ಹೆಸರನ್ನು ಬಳಸಿ ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+