• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭಾ ಮೈತ್ರಿ: ಶಿವಸೇನೆಗೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ

|

ನವದೆಹಲಿ, ಜ 5: 2014ರಲ್ಲಿದ್ದಂತಹ ಪೂರಕ ವಾತಾವರಣ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಇಲ್ಲ ಎನ್ನುವುದನ್ನು ಅರಿತಿದ್ದರೂ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ತಮ್ಮ ಮಿತ್ರಪಕ್ಷ ಶಿವಸೇನೆಗೆ ಖಡಕ್ ಸಂದೇಶ ರವಾನಿಸಿದೆ.

ಹಿಂದೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದ್ದರೂ, ಶಿವಸೇನೆ ಕಳೆದ ಕೆಲವು ವರ್ಷಗಳಿಂದ ವಿರೋಧ ಪಕ್ಷದವರಿಗಿಂತ ಹೆಚ್ಚು ಬಿಜೆಪಿ, ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸುತ್ತಿದೆ.

ಹಲವು ಬಾರಿ ಅಮಿತ್ ಶಾ, ಶಿವಸೇನೆಯ ವರಿಷ್ಟ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರೂ, ಬಿಜೆಪಿಯನ್ನು ಟೀಕಿಸುವ ಕೆಲಸವನ್ನು ಉದ್ಧವ್ ಮುಂದುವರಿಸಿಕೊಂಡು ಬರುತ್ತಲೇ ಇದ್ದಾರೆ. ರಾಮಮಂದಿರ ನಿರ್ಮಾಣ ವಿಚಾರದಲ್ಲೂ, ಠಾಕ್ರೆ, ಮೋದಿ ವಿರುದ್ದ ಕಿಡಿಕಾರಿದ್ದರು.

ಮೋದಿ ಅನ್ಯಗ್ರಹಕ್ಕೂ ಹೋಗ್ತಾರೆ: ಶಿವಸೇನೆ ವ್ಯಂಗ್ಯ

ಮಹಾರಾಷ್ಟ್ರದ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಶಿವಸೇನೆ ನಮ್ಮ ಜೊತೆಗಿರಲಿ ಅಥವಾ ಬಿಡಲಿ, ನೀವು ಚುನಾವಣೆಗೆ ಸಿದ್ದರಾಗಿರಿ ಎನ್ನುವ ಮಾತನ್ನು ಹೇಳಿದ್ದಾರೆ. ಇದು, ಪರೋಕ್ಷವಾಗಿ ಶಿವಸೇನೆಗೆ ನೀಡಿದ ಖಡಕ್ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಪಕ್ಷಕ್ಕೆ ಹೆಚ್ಚಿನ ಸೀಟು ಮಹಾರಾಷ್ಟ್ರದಿಂದ ಬರುವುದು ಮುಖ್ಯ

ಪಕ್ಷಕ್ಕೆ ಹೆಚ್ಚಿನ ಸೀಟು ಮಹಾರಾಷ್ಟ್ರದಿಂದ ಬರುವುದು ಮುಖ್ಯ

ನವದೆಹಲಿಯಲ್ಲಿ ಮಹಾ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ನಮ್ಮ ಉದ್ದೇಶ. ಆದರೆ, ಅವರು ನಮ್ಮ ಜೊತೆಗೆ ಬರಲಿ ಬಿಡಲಿ, ನೀವು ಚುನಾವಣೆಗೆ ಸಿದ್ದರಾಗಿ, ಪಕ್ಷಕ್ಕೆ ಹೆಚ್ಚಿನ ಸೀಟು ಮಹಾರಾಷ್ಟ್ರದಿಂದ ಬರುವುದು ಮುಖ್ಯ - ಅಮಿತ್ ಶಾ.

ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!

ಎಲ್ಲಾ ವಿಚಾರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ

ಎಲ್ಲಾ ವಿಚಾರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ

ಮೈತ್ರಿಗೋಸ್ಕರ ಶಿವಸೇನೆ ಡಿಮಾಂಡ್ ಮಾಡುವ ಎಲ್ಲಾ ವಿಚಾರಗಳನ್ನು ಒಪ್ಪಿಕೊಳ್ಳಲು ಆಗುವುವಿಲ್ಲ. ಬಿಹಾರ ಮಾದರಿಯಲ್ಲಿ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೈತ್ರಿ ಮಾಡಿಕೊಳ್ಳುತ್ತೇವೆಯೋ, ಇಲ್ಲವೋ ಎನ್ನುವುದನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು - ಅಮಿತ್ ಶಾ.

ಮೋದಿ, ದೇವೇಂದ್ರ ಫಡ್ನವೀಸ್

ಮೋದಿ, ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರದಲ್ಲಿನ ನಮ್ಮ ಸಾಧನೆಯನ್ನು ಆಧರಿಸಿ ನಾವು ಮುಂಬರುವ ಚುನಾವಣೆಯಲ್ಲಿ ಜನತೆಯ ಮುಂದೆ ಹೋಗಬೇಕು ಎಂದು ಅಮಿತ್ ಶಾ, ಸಂಸದರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಭೆಯ ಮೂಲಕ, ಬಿಜೆಪಿ ಸೀಟು ಹೊಂದಾಣಿಕೆಗಾಗಿ ಶಿವಸೇನೆಯ ಹಿಂದೆ ಬೀಳುವುದಿಲ್ಲ ಎನ್ನುವ ಅತ್ಯಂತ ಸ್ಪಷ್ಟ ಸಂದೇಶವನ್ನು ಶಾ ರವಾನಿಸಿದ್ದಾರೆ.

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ರಾಮಮಂದಿರ ನಿರ್ಮಾಣದ ವಿಚಾರದಲ್ಲಿ, ಪ್ರಧಾನಿ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯನ್ನು ಟೀಕಿಸಿದ್ದ ಸೇನೆ, ಮೋದಿಗೆ ರಾಮನಿಗಿಂತ ಕಾನೂನೇ ದೊಡ್ಡದು, ಆದರೆ ಅಧಿಕಾರಕ್ಕೆ ಬರಲು ರಾಮನನ್ನು ಬಳಸಿಕೊಂಡರು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮೋದಿ ಇನ್ನು ಮುಂದೆ ಅನ್ಯಗ್ರಹಗಳ ಪ್ರವಾಸವನ್ನೂ ಮಾಡುತ್ತಾರೆ

ಮೋದಿ ಇನ್ನು ಮುಂದೆ ಅನ್ಯಗ್ರಹಗಳ ಪ್ರವಾಸವನ್ನೂ ಮಾಡುತ್ತಾರೆ

ನರೇಂದ್ರ ಮೋದಿ ಕೇವಲ ಸುಳ್ಳು ಭರವಸೆಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಮೋದಿ ಇನ್ನು ಮುಂದೆ ಅನ್ಯಗ್ರಹಗಳ ಪ್ರವಾಸವನ್ನೂ ಮಾಡುತ್ತಾರೆ. ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಇತ್ತೀಚೆಗೆ ಮಾಡುತ್ತಿದೆ. ಶಿವಸೇನೆಯು ಎನ್‌ಡಿಎ ಮೈತ್ರಿಕೂಟದಿಂದ ಜನವರಿಯಲ್ಲಿ ಹೊರಬಂದಿತ್ತು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gearing up the poll pitch, BJP president Amit Shah has told the Maharashtra unit of the party to start preparations for the 2019 elections on a war-footing “with or without” an alliance with the Shiv Sena.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more