ಬಿಜೆಪಿಗೆ ಐತಿಹಾಸಿಕ ಜಯ; ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಸಡಗರ

Posted By:
Subscribe to Oneindia Kannada

ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸಾಧಿಸಿರುವ ಐತಿಹಾಸಿಕ ಜಯದಿಂದ ಆ ಪಕ್ಷದ ಕಾರ್ಯಕರ್ತರಲ್ಲಿನ ಹುಮ್ಮಸ್ಸು ಇಮ್ಮಡಿಸಿತ್ತು. ಚುನಾವಣಾ ಫಲಿತಾಂಶ ಹೊರಹೊಮ್ಮುತ್ತಲೇ ಬೀದಿಗಿಳಿದ ಅವರೆಲ್ಲರೂ ನಾಳೆ ಆಚರಿಸಬೇಕಿರುವ ಹೋಳಿಯನ್ನು ಇಂದೇ ಆಚರಿಸಿದರು.

ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ಬಿಜೆಪಿಯ ಯಶಸ್ಸನ್ನು ಅಕ್ಕಪಕ್ಕದ ರಾಜ್ಯಗಳಲ್ಲಿನ ಬಿಜೆಪಿ ಕಾರ್ಯಕರ್ತರೂ ಸಂಭ್ರಮಸಿದರು. ಉತ್ತರಾಖಾಂಡ್ ಸೇರಿದಂತೆ ಎಲ್ಲೆಲ್ಲಿ, ಯಾವ್ಯಾವ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆಯೋ ಅಲ್ಲೆಲ್ಲಾ ಸಡಗರ ಪುಟಿದೆದ್ದಿತ್ತು.[ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ]

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ನವದೆಹಲಿ, ರಾಂಚಿ, ಪಟಿಯಾಲಾಗಳಲ್ಲಿ ಪರಸ್ಪರ ಸಿಹಿ ತಿನ್ನಿಸುತ್ತಾ, ಹೋಳಿ ಎರಚಿಕೊಳ್ಳುತ್ತಾ, ಡೋಲು ಬಾರಿಸುತ್ತಾ ಕುಣಿದು ಕುಪ್ಪಳಿಸಿ ಬಿಜೆಪಿ ಜಯವನ್ನು ಆಚರಿಸಿದರು. ಆ ಸಡಗರಗಳ ಕೆಲವಾರು ಛಾಯಾಚಿತ್ರಗಳು ಇಲ್ಲಿ ನಿಮಗಾಗಿ.[ಬಿಜೆಪಿ ಭರ್ಜರಿ ಜಯದ ಹಿಂದೆ ಅಮಿತ್ ಶಾ ತಂತ್ರಗಾರಿಕೆ ಹೀಗಿತ್ತು!]

ಗುವಾಹಟಿಯಲ್ಲಿ ಸಂಭ್ರಮ

ಗುವಾಹಟಿಯಲ್ಲಿ ಸಂಭ್ರಮ

ಉತ್ತರಾಖಾಂಡ್ ನಲ್ಲಿ ಬಿಜೆಪಿ ಯಶಸ್ಸು ಕಂಡಿದ್ದಕ್ಕೆ ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ ಪರಿ ಇದು.

ಜಾರ್ಖಂಡ್ ನಲ್ಲಿ ಖುಷಿ

ಜಾರ್ಖಂಡ್ ನಲ್ಲಿ ಖುಷಿ

ಉತ್ತರಾಖಾಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದಕ್ಕೆ ಜಾರ್ಖಂಡ್ ನ ರಾಂಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.

ಬಿಕಾನೇರ್ ನಲ್ಲಿ ರಂಗು

ಬಿಕಾನೇರ್ ನಲ್ಲಿ ರಂಗು

ಉತ್ತರ ಪ್ರದೇಶದಲ್ಲಿ ಬಿಜೆಪಿ ಸಾಧಿಸಿದ ಐತಿಹಾಸಿಕ ಜಯವನ್ನು ರಾಜಸ್ತಾನದ ಬಿಕಾನೇರ್ ನಲ್ಲಿನ ಬಿಜೆಪಿ ಕಾರ್ಯಕರ್ತರು ಖುಷಿಪಟ್ಟಿದ್ದು ಹೀಗೆ.

ಎಲ್ಲೆಲ್ಲೂ ಗೆಲುವಿನ ಅಮಲು

ಎಲ್ಲೆಲ್ಲೂ ಗೆಲುವಿನ ಅಮಲು

ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಮುಖವಾಡ ಧರಿಸಿ ಖುಷಿಪಟ್ಟಿದ್ದರು.

ವಾರಣಾಸಿಯಲ್ಲಿ ಕುಣಿದಾಡಿದ ಬೆಂಬಲಿಗರು

ವಾರಣಾಸಿಯಲ್ಲಿ ಕುಣಿದಾಡಿದ ಬೆಂಬಲಿಗರು

ಮೋದಿಯವರು ಸಂಸತ್ತನ್ನು ಪ್ರತಿನಿಧಿಸುವ ವಾರಣಾಸಿಯಲ್ಲಿ ಬಿಜೆಪಿ ಬೆಂಬಲಿಗರು ತಮ್ಮ ಪಕ್ಷದ ವಿಜಯವನ್ನು ಆಚರಿಸಿದ್ದು ಹೀಗೆ.

ಮತ ಎಣಿಕೆ ವೀಕ್ಷಣೆ

ಮತ ಎಣಿಕೆ ವೀಕ್ಷಣೆ

ಮುಖ್ಯ ಚುನಾವಣಾ ಆಯುಕ್ತ ನಾಜೀಮ್ ಜೈದಿ ಅವರು, ತಮ್ಮ ಕಚೇರಿಯಲ್ಲಿ ಮತ ಎಣಿಕೆ ನೇರ ಪ್ರಸಾರ ವೀಕ್ಷಿಸಿದರು. ಐದು ರಾಜ್ಯಗಳ 158 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆಯನ್ನು ಅವರು ಕಚೇರಿಯಲ್ಲಿ ನೋಡಿದರು.

ಮೊಬೈಲ್ ಪರದೆಯಲ್ಲಿ ವೀಕ್ಷಣೆ

ಮೊಬೈಲ್ ಪರದೆಯಲ್ಲಿ ವೀಕ್ಷಣೆ

ಲಖನೌನ ವಿಧಾನ ಸಭೆಯ ಮುಂದೆ ಮೊಬೈಲ್ ವ್ಯಾನಿನಲ್ಲಿ ಅಳವಡಿಸಲಾಗಿದ್ದ ದೊಡ್ಡ ಟಿವಿ ಪರದೆಯಲ್ಲಿ ಮತ ಎಣಿಕೆಯ ನೇರಪ್ರಸಾರ ವೀಕ್ಷಿಸುತ್ತಿರುವ ಸಾರ್ವಜನಿಕರು.

ಅಮರಿಂದರ್ ಸಿಂಗ್ ಜಯ

ಅಮರಿಂದರ್ ಸಿಂಗ್ ಜಯ

ಪಟಿಯಾಲಾಯದಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಕುಟುಂಬ ಸದಸ್ಯರು ಅಮರಿಂದರ್ ಅವರ ಜಯವನ್ನು ಸವಿದರು.

ಮತ ಎಣಿಕೆ ಹಿನ್ನೆಲೆಯಲ್ಲಿ

ಮತ ಎಣಿಕೆ ಹಿನ್ನೆಲೆಯಲ್ಲಿ

ಮತ ಎಣಿಕೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ, ಲಖನೌದಲ್ಲಿ ಪೊಲೀಸರ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕೆಲವೆಡೆ ಪೊಲೀಸರು ಅಶ್ವಾರೋಹಿಗಳಾಗಿ ನಗರ ಸುತ್ತುತ್ತಿದ್ದರು.

ವಿಜಯ ದುಂದುಭಿ

ವಿಜಯ ದುಂದುಭಿ

ಲಖನೌದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭೂತಪೂರ್ವ ಯಶಸ್ಸನ್ನು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The thumping win of BJP in Uttar Pradesh reflected all over the India on March 11, 2017. Other than Uttar Pradesh, in neighbouring states also BJP supporters celebrate thier party's victory.
Please Wait while comments are loading...