Get Updates
Get notified of breaking news, exclusive insights, and must-see stories!

Haryana Election 2024: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ವಿನೇಶ್ ಪೋಗಟ್ ವಿರುದ್ಧ ಟಿಕೆಟ್ ಯಾರಿಗೆ

ನವದೆಹಲಿ, ಸೆಪ್ಟಂಬರ್ 10: ಹರಿಯಾಣ ಹರಿಯಾಣ ವಿಧಾನಸಭೆ (Haryana Assembly Election 2024) ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ ಕಂಡು ಬರುವ ಸಾಧ್ಯತೆ ಇದೆ. ಇಂದು ಮಂಗಳವಾರ ಬಿಜೆಪಿ ಕಣ್ಣಕ್ಕಿಳಿಸಿರುವ ತನ್ನ 21 ಅಭ್ಯರ್ಥಿಗಳ ಹೆಸರುಗಳನ್ನು ಎರಡನೇ ಪಟ್ಟಿಯಲ್ಲಿ ಪ್ರಕಟಿಸಿದೆ.

ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿಗೆ ಪ್ರಸಕ್ತ ವರ್ಷದಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿಯು ಎರಡನೇ ಪಟ್ಟಿಯ ಬಿಡುಗಡೆ ಮೂಲಕ ವಿಧಾನಸಭೆಗೆ ಒಟ್ಟು 87 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಈ ಬಾರಿ ಜುಲಾನಾ ಕ್ಷೇತ್ರವು ಹೈವೋಲ್ಟೇಟ್‌ ಕ್ಷೇತ್ರವಾಗಿ ಬದಲಾಗಲಿದೆ. ಕಾರಣ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಕುಸ್ತಿಪಟು ವಿನಿಷ್ ಪೋಗಟ್ ಅವರು ಕಣಕ್ಕಿಳಿದಿದ್ದಾರೆ.

BJP Candidate 2nd List Released of Haryana Election Vinesh Phogat Against Captain Yogesh Compete

ಅಜುಲಾನಾ ಕ್ಷೇದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಒಲಿಂಪಿಯನ್ ವಿನೇಶ್ ಫೋಗಟ್ ವಿರುದ್ಧ ಬಿಜೆಪಿಯು ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ತೀವ್ರ ಪೈಪೋಟಿ ಒಡ್ಡಲು ಕೇಸರಿಪಡೆ ಕಾರ್ಯತಂತ್ರ ರೂಪಿಸಿದೆ.

ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದ ಸಿಎಂ

ಈ ಹಿಂದೆ ಬಿಜೆಪಿಯು ಒಟ್ಟು 67 ಅಭ್ಯರ್ಥಿಗಳ ಹೆಸರಿನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷದ ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಕರ್ನಾಲ್‌ ಕ್ಷೇತ್ರದಿಂದ ಮತ್ತೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಅವರು ಲಾಡ್ವಾದಿಂದ ಸ್ಪರ್ಧಿಸಿದ್ದು, ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ಪಡೆಯಲು ತಂತ್ರಗಾರಿಕೆ ಹೆಣೆದಿದ್ದಾರೆ.

ನಯಾಬ್ ಸಿಂಗ್ ಸೈನಿ ಅವರು ಕಳೆದ ಎರಡು ಭಾರಿ ನಡೆದ ಲೋಕಸಭಾ ಚುನಾವಣೆ (2019 ಮತ್ತು 2024)ಯಲ್ಲಿ ಕುರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆದವರು. ಇನ್ನೂ ಬಿಜೆಪಿ ಮತ್ತೋರ್ವ ಮುಖಂಡರಾದ ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಅವರ ಕ್ಷೇತ್ರವನ್ನು ಪಕ್ಷದ ವರಿಷ್ಠರು ಬದಲಾಯಿಸಿದ್ದಾರೆ.

BJP Candidate 2nd List Released of Haryana Election Vinesh Phogat Against Captain Yogesh Compete

ಬಿಜೆಪಿ ಹಿರಿಯ ನಾಯಕರು ಆದ ಮಾಜಿ ರಾಜ್ಯ ಸಚಿವ ಅನಿಲ್ ವಿಜ್ ಅವರನ್ನು ಕೇಸರಿ ಪಡೆಯ ಭದ್ರಕೋಟೆಯಾಗಿರುವ ಅಂಬಾಲಾ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಬಿಜೆಪಿ ನಾಯಕರ ಕುಟುಂಬಸ್ಥರಿಗೆ ಟಿಕೆಟ್

ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿರುವ ಹಲವು ನಾಯಕರಿಗೆ ಹರಿಯಾಣ ಚುನಾವಣೆಯ ಟಿಕೆಟ್ ಲಭಿಸಿದೆ. ಈ ಹಿಂದೆ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ದೇವೆಂದರ್ ಸಿಂಗ್ ಬಬ್ಲಿ ಅವರು ತೋಹಾನಾ ಕ್ಷೇತ್ರದ ಟಿಕೆಟ್ ಪಡೆದುಕೊಂಡಿದ್ದಾರೆ. ಅದೇ ರೀತಿ ಹರಿಯಾಣದ ಮಾಜಿ ಸಿಎಂ ಬನ್ಸಿ ಲಾಲ್ ಅವರ ಮೊಮ್ಮಗಳು ಶ್ರುತಿ ಚೌಧರಿ ತೋಷಮ್ ಗೂ ಟಿಕೆಟ್ ಸಿಕ್ಕಿದೆ.

ಇನ್ನೂ ರಾವ್ ಇಂದರ್‌ಜಿತ್ ಸಿಂಗ್ ಅವರ ಪುತ್ರಿ ಆರತಿ ಸಿಂಗ್ ರಾವ್ ಅವರಿಗೆ ಅಟೆಲಿ ಸ್ಥಾನದ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವರ ಇತರ ಹಲವಾರು ನಿಷ್ಠಾವಂತ ನಾಯಕರ ಮಕ್ಕಳಿಗೆ ಟಿಕೆಟ್ ಲಭಿಸಿದೆ. ಈ ಮೂಲಕ ರಾಜ್ಯದ ದಕ್ಷಿನ ಭಾಗದಲ್ಲಿ ಕೇಸರಿ ಪಡೆ ಮತ್ತಷ್ಟು ಆಳವಾಗಿ ಬೇರೂರಲು ಪ್ಲಾನ್ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಅಕ್ಟೋಬರ್ 5 ರಂದು ಚುನಾವಣೆ

ಹರಿಯಾಣದಲ್ಲಿ ಮುಂದಿನ ತಿಂಗಳೂ ಅಕ್ಟೋಬರ್ 5 ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಬಾರಿ ಇಲ್ಲಿ ಬಿಜೆಪಿ ಗೆಲುವು ಸಾಧಿಸಿದ ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದಂತಾಗುತ್ತದೆ. ಆದರೆ ಇಲ್ಲಿ ಕಾಂಗ್ರೆಸ್‌ ಪಕ್ಷ ತೀವ್ರ ಪ್ರತಿ ಸ್ಪರ್ಧೆ ಒಡ್ಡಲು ಪ್ಲಾನ್ ಮಾಡಿಕೊಂಡಿದೆ. ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಹರಿಯಾಣದಲ್ಲಿನ ಗೆಲುವು ಪ್ರತಿಷ್ಠೆಯಾಗಿದೆ.

ಅಕ್ಟೋಬರ್ 5 ರಂದು ಚುನಾವಣೆ ನಡೆದರೆ, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣೆ ಆಯೋಗ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+