ಬಿಜೆಪಿ-ಎಎಪಿ ಪೋಸ್ಟರ್ ವಾರ್: ದೆಹಲಿಯಲ್ಲಿ ಕೇಜ್ರಿವಾಲ್ ವಿರುದ್ಧ ಪೋಸ್ಟರ್ ಪತ್ತೆ
ನವದೆಹಲಿ ಮಾರ್ಚ್ 23: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಯಾರಿಸಲಾಗಿದ್ದ ಪೋಸ್ಟರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ ಎರಡು ದಿನಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪದಚ್ಯುತಿಗೆ ಕರೆ ನೀಡುವ ಪೋಸ್ಟರ್‌ಗಳು ಇಂದು ಬೆಳಿಗ್ಗೆ ದೆಹಲಿಯಲ್ಲಿ ಕಾಣಿಸಿಕೊಂಡಿವೆ.
"ಮೋದಿ ಹಠಾವೋ, ದೇಶ್ ಬಚಾವೋ (ಮೋದಿಯನ್ನು ತೊಲಗಿಸಿ, ದೇಶವನ್ನು ಉಳಿಸಿ)" ಎಂಬ ಘೋಷಣೆಯನ್ನು ಹೊಂದಿರುವ ಸಾವಿರಾರು ಪೋಸ್ಟರ್‌ಗಳನ್ನು ಪೊಲೀಸರು ಮಂಗಳವಾರ ಬೃಹತ್ ಕಾರ್ಯಾಚರಣೆಯಲ್ಲಿ ವಶ ಪಡಿಸಿಕೊಂಡರು. ಘಟನೆಯ ನಂತರ ಪ್ರಿಂಟಿಂಗ್ ಪ್ರೆಸ್‌ನ ಇಬ್ಬರು ಮಾಲೀಕರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಮತ್ತು ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಇಂದು ಮತ್ತೆ ದೆಹಲಿಯ ಹಲವೆಡೆ ಪೋಸ್ಟರ್‌ಗಳನ್ನು ಹಾಕಲಾಗಿದ್ದು. ಇವುಗಳಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬರೆಯಲಾಗಿದೆ. ಪೋಸ್ಟರ್‌ಗಳಲ್ಲಿ ಕೇಜ್ರಿವಾಲ್ ಅವರನ್ನು "ಅಪ್ರಾಮಾಣಿಕ, ಭ್ರಷ್ಟ ಸರ್ವಾಧಿಕಾರಿ" ಎಂದು ಟೀಕಿಸಲಾಗಿದೆ. ಜೊತೆಗೆ "ಅರವಿಂದ್ ಕೇಜ್ರಿವಾಲ್ ಅವರನ್ನು ತೆಗೆದುಹಾಕಿ, ದೆಹಲಿಯನ್ನು ಉಳಿಸಿ" ಎಂಬ ಘೋಷಣೆಯನ್ನು ಹೊತ್ತಿದೆ. ಪೋಸ್ಟರ್‌ಗಳನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹಾಕಿದ್ದಾರೆ ಎಂದು ಹೇಳಲಾಗಿದೆ.
ಕೇಜ್ರಿವಾಲ್ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರವಿಂದ ಕೇಜ್ರಿವಾಲ್, ಅವರನ್ನು ಪದಚ್ಯುತಗೊಳಿಸುವಂತೆ ಪೋಸ್ಟರ್‌ಗಳನ್ನು ನೋಡಿದ್ದೇನೆ ಮತ್ತು ಪ್ರಜಾಪ್ರಭುತ್ವದಲ್ಲಿ ಅಂತಹ ಪೋಸ್ಟರ್‌ಗಳನ್ನು ಅಂಟಿಸಲು ಎಲ್ಲರಿಗೂ ಹಕ್ಕಿದೆ.

"ಇಂತಹ ಪೋಸ್ಟರ್‌ಗಳಿಂದ ನನಗೆ ಯಾವುದೇ ತೊಂದರೆ ಇಲ್ಲ, ಪ್ರಿಂಟಿಂಗ್ ಪ್ರೆಸ್ ಮಾಲೀಕ ಮತ್ತು ಪೋಸ್ಟರ್ ಅಂಟಿಸುತ್ತಿದ್ದ ಆರು ಬಡವರನ್ನು ನಿನ್ನೆ ಏಕೆ ಬಂಧಿಸಲಾಯಿತು ಎಂದು ನನಗೆ ಅರ್ಥವಾಗುತ್ತಿಲ್ಲ, ಇದು ಪ್ರಧಾನಿ ಹೆದರುತ್ತಿದ್ದಾರೆ ಎಂದು ತೋರಿಸುತ್ತದೆ. ಅವರ ಬಂಧನದಿಂದ ಏನು ವ್ಯತ್ಯಾಸ. ಜನರು ಅಂತಹ ಪೋಸ್ಟರ್‌ಗಳನ್ನು ಅಂಟಿಸುತ್ತಾರಾ? ಇಂತಹ ಶಕ್ತಿಶಾಲಿ ಪ್ರಧಾನಿ ಇದನ್ನು ಹೀಗೆ ನಿಭಾಯಿಸುವುದು ಒಳ್ಳೆಯದಲ್ಲ'' ಎಂದು ಅವರು ಹೇಳಿದರು.
ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ ನಂತರ ಬಿಜೆಪಿ-ಎಎಪಿ ಮುಖಾಮುಖಿಯ ಸರಣಿಯಲ್ಲಿ ಪೋಸ್ಟರ್ ವಾರ್ ಇತ್ತೀಚಿನದು.

ಪೊಲೀಸರು ಹೇಳುವುದೇನು?
ಬಂಧಿತರನ್ನು ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸಿದ್ದಕ್ಕಾಗಿ ಬಂಧಿಸಲಾಗಿದೆ ಮತ್ತು ಪೋಸ್ಟರ್‌ಗಳು ಪ್ರಿಂಟಿಂಗ್ ಪ್ರೆಸ್‌ನ ಹೆಸರನ್ನು ಕಾನೂನಿನಡಿಯಲ್ಲಿ ಹೊಂದಿರಬೇಕು ಎಂದು ಪೊಲೀಸರು ತಮ್ಮ ಕ್ರಮವನ್ನು ವಿವರಿಸಿದರು. ದಾಖಲಾದ 138 ಪ್ರಕರಣಗಳಲ್ಲಿ 36 ಪ್ರಧಾನಿ ಮೋದಿ ವಿರೋಧಿ ಪೋಸ್ಟರ್‌ಗಳಿಗಾಗಿ ಎಂದು ಅವರು ಹೇಳಿದರು. ಕೇಜ್ರಿವಾಲ್ ಅವರು ಪೊಲೀಸರ ವಿವರಣೆಯನ್ನು ತಿರಸ್ಕರಿಸಿದರು ಮತ್ತು ಪ್ರಧಾನಿ "ಹೆದರಿದ್ದಾರೆ" ಎಂದು ಹೇಳಿದರು.
"ಪೋಸ್ಟರ್‌ಗಳ ಮೇಲೆ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಾಗಿದೆ. ಮೋದಿಜಿಗೆ ಏಕೆ ಇಷ್ಟು ಭಯ? ಈ ಪೋಸ್ಟರ್ ಅನ್ನು ಯಾರಾದರೂ ಹಾಕಬಹುದು. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹೆದರಿದ ಪ್ರಧಾನಿ, ಅಸುರಕ್ಷಿತ ಪ್ರಧಾನಿ ಮಾತ್ರ" ಎಂದು ಅವರು ಹೇಳಿದರು.
2,000 ಪೋಸ್ಟರ್ ವಶ
ಕಳೆದ ದಿನ ಎಎಪಿ ಕಚೇರಿಗೆ ವ್ಯಾನ್‌ನಲ್ಲಿ ತಲುಪಿಸುತ್ತಿದ್ದ ಸುಮಾರು 2,000 ಪೋಸ್ಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಎಪಿ ಟ್ವೀಟ್‌ನಲ್ಲಿ, ಈ ಪೋಸ್ಟರ್‌ಗಳಲ್ಲಿ ಆಕ್ಷೇಪಾರ್ಹ ಏನೆಂದು ತಿಳಿಯಲು ಪ್ರಯತ್ನಿಸಿದೆ. ಇದನ್ನು "ಮೋದಿ ಸರ್ಕಾರದ ಸರ್ವಾಧಿಕಾರದ ಶಿಖರ" ಎಂದು ಬಣ್ಣಿಸಿದೆ. ಪ್ರಧಾನಿಯವರ ಪದಚ್ಯುತಿಗೆ ಆಗ್ರಹಿಸಿ ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಘೋಷಿಸಿದೆ.
ಬಿಜೆಪಿ ಟೀಕೆ
ಪೋಸ್ಟರ್‌ಗಳನ್ನು ಹಾಕುವಾಗ ಎಎಪಿ ಕಾನೂನು ಉಲ್ಲಂಘಿಸಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ. "ಪ್ರತಿಭಟನೆಗಳನ್ನು ಮಾಡಿದ್ದೇವೆ ಎಂದು ಹೇಳುವ ಧೈರ್ಯ ಎಎಪಿಗೆ ಇಲ್ಲ, ಪೋಸ್ಟರ್ ಹಾಕುವಾಗ ಅವರು ಕಾನೂನು ಉಲ್ಲಂಘಿಸಿದ್ದಾರೆ" ಎಂದು ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ ಹೇಳಿದ್ದಾರೆ.
ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಹೆಸರನ್ನು ಹೊಂದಿರದಿದ್ದಕ್ಕಾಗಿ ಬಂಧಿಸಲಾದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಪೊಲೀಸರಿಗೆ 50,000 "ಮೋದಿ ಹಠಾವೋ, ದೇಶ್ ಬಚಾವೋ" ಪೋಸ್ಟರ್‌ಗಳನ್ನು ಮುದ್ರಿಸಲು ಆದೇಶವನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು ಎಂದು ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ ಹೇಳಿದ್ದಾರೆ.












Click it and Unblock the Notifications