ಕೇರಳದ ಕೊಟ್ಟಾಯಂನಲ್ಲಿ ಹಕ್ಕಿಜ್ವರ: 6,000 ಕ್ಕೂ ಹೆಚ್ಚು ಕೋಳಿ, ಬಾತುಕೋಳಿಗಳ ಮಾರಣಹೋಮ
ತಿರುವನಂತಪುರಂ, ಡಿ. 25: ಕೇರಳದ ಕೊಟ್ಟಾಯಂನಲ್ಲಿ ಕಳೆದ ಕೆಲವು ದಿನಗಳಿಂದ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ತೀವ್ರ ಹಾನಿಯುಂಟಾಗಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಮೂರು ಪ್ರತ್ಯೇಕ ಪಂಚಾಯತ್‌ಗಳಲ್ಲಿ 6,000 ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲಾಗಿದೆ.
ಜಿಲ್ಲೆಯಲ್ಲಿ ಹಕ್ಕಿ ಜ್ವರ ಏಕಾಏಕಿ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಭೀತಿಯಲ್ಲಿರುವ ಜನರು 6,000 ಕ್ಕೂ ಹೆಚ್ಚು ಬಾತುಕೋಳಿಗಳು, ಕೋಳಿಗಳನ್ನು ಕೊಲ್ಲಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಜಿಲ್ಲೆಯ ವೇಚೂರು, ನೀಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ 6,017 ಪಕ್ಷಿಗಳು, ಅದರಲ್ಲಿ ಹೆಚ್ಚಾಗಿ ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಅಧಿಕೃತ ಮಾಹಿತಿಯ ಪ್ರಕಾರ, ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಪಿಟಿಐ ಉಲ್ಲೇಖಿಸಿ ವರದಿ ಮಾಡಿದೆ.
ಇತ್ತ, ಕೇರಳದಲ್ಲಿ ಹಕ್ಕಿಜ್ವರದ ಹರಡುವಿಕೆಯ ವರದಿಯಿಂದಾಗಿ ಲಕ್ಷದ್ವೀಪ ಆಡಳಿತವು ರಾಜ್ಯದಿಂದ ಕೋಳಿ ಆಮದನ್ನು ನಿಷೇಧಿಸಿದೆ.
ಭಾನುವಾರ ಮುಂಜಾನೆ, ರೈತರು ಕೊಳಗಳಿಂದ ಬಾತುಕೋಳಿಗಳನ್ನು ಹಿಡಿದು ಅವುಗಳನ್ನು ಕೊಲ್ಲಲು ಗೊತ್ತುಪಡಿಸಿದ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದರು.

ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ, ರಾಜ್ಯದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ವರದಿಯಾಗಿದೆ. ಹರಿಪಾಡು ಪುರಸಭೆಯಲ್ಲಿ ರೋಗ ಹರಡುವುದನ್ನು ತಡೆಯಲು ಕಾರ್ಯಾಚರಣೆ ನಡೆಸಿತ್ತು. ಆದರೆ, ನವೆಂಬರ್ ಆರಂಭದಲ್ಲಿ ಹಕ್ಕಿಜ್ವರ ಏಕಾಏಕಿ ಏರಿಕೆಯಾಗಿದೆ.
ಭಾರತದಲ್ಲಿ, ಹಕ್ಕಿ ಜ್ವರ ಅಥವಾ ಏವಿಯನ್ ಇನ್ಫ್ಲುಯೆಂಜಾ ಕಾಯಿಲೆ, ಮುಖ್ಯವಾಗಿ ಸೆಪ್ಟೆಂಬರ್ ಮತ್ತು ಮಾರ್ಚ್ ನಡುವಿನ ಚಳಿಗಾಲದ ತಿಂಗಳುಗಳಲ್ಲಿ ದೇಶಕ್ಕೆ ಬರುವ ವಲಸೆ ಹಕ್ಕಿಗಳಿಂದ ಹರಡುತ್ತದೆ.
ಈ ವೈರಸ್ ಸ್ವಾಭಾವಿಕವಾಗಿ ಪ್ರಪಂಚದಾದ್ಯಂತ ಕಾಡುಗಳಲ್ಲಿ ವಾಸಿಸು ಪಕ್ಷಿಗಳ ನಡುವೆ ಹರಡುತ್ತವೆ ಮತ್ತು ದೇಶೀಯ ಕೋಳಿ ಮತ್ತು ಇತರ ಪಕ್ಷಿ, ಪ್ರಾಣಿಗಳಿಗೆ ಸೋಂಕು ತರಬಹುದು. ಬರ್ಡ್ ಫ್ಲೂ ವೈರಸ್‌ಗಳು ಸಾಮಾನ್ಯವಾಗಿ ಮನುಷ್ಯರಿಗೆ ತಗುಲುವುದಿಲ್ಲ. ಆದರೆ ಕೆಲವೊಮ್ಮೆ ಮನುಷ್ಯರಿಗೂ ಹಕ್ಕಿ ಜ್ವರ ವೈರಸ್ ತಗುಲಿರುವುದು ಕಂಡುಬಂದಿದೆ.












Click it and Unblock the Notifications