Get Updates
Get notified of breaking news, exclusive insights, and must-see stories!

Bird Flu: ಚೆನ್ನೈನಲ್ಲಿ ಹಕ್ಕಿ ಜ್ವರ: ನೂರಾರು ಕಾಗೆಗಳು ಸಾವು, ಕರ್ನಾಟಕಕ್ಕೂ ಭೀತಿ

ಚೆನ್ನೈ: ಚೆನ್ನೈನಲ್ಲಿ ಹಕ್ಕಿ ಜ್ವರ (H5N1) ಎಚ್ಚರಿಕೆ ನೀಡಲಾಗಿದೆ. ಹಕ್ಕಿ ಜ್ವರದಿಂದ ನೂರಾರು ಕಾಗೆಗಳು ಸತ್ತಿರುವುದು ಕಂಡು ಬಂದಿದೆ. ಇದು ಕರ್ನಾಟಕದಲ್ಲೂ ಆತಂಕಕ್ಕೆ ಕಾರಣವಾಗಿದೆ. ಭೋಪಾಲ್‌ನ ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (NIHSAD) ನಲ್ಲಿ ಪ್ರಯೋಗಾಲಯದ ಮಾದರಿಗಳ ಪರೀಕ್ಷೆಯ ನಂತರ, ತಮಿಳುನಾಡಿನ ಕಾಗೆಗಳಲ್ಲಿ ಹೆಚ್ಚು ರೋಗಕಾರಕ ಹಕ್ಕಿ ಜ್ವರ ಅಥವಾ ಏವಿಯನ್ ಇನ್‌ಫ್ಲುಯೆನ್ಸ (H5N1) ಇರುವುದನ್ನು ಕೇಂದ್ರ ಸರ್ಕಾರವು ದೃಢಪಡಿಸಿದೆ. ಚೆನ್ನೈನ ಕೆಲವು ಸ್ಥಳಗಳಲ್ಲಿ ಕಾಗೆಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದು ಕರ್ನಾಟಕದಲ್ಲೂ ಆತಂಕಕ್ಕೆ ಕಾರಣವಾಗಿದೆ.

ಜನವರಿ 22 ರಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ತಮಿಳುನಾಡು ಸರ್ಕಾರಕ್ಕೆ ಕಾಂಚೀಪುರಂನಲ್ಲಿ ಪ್ರಾಣಿ ರೋಗ ಗುಪ್ತಚರ ಘಟಕವು ಸಲ್ಲಿಸಿದ ಕಾಗೆಯಿಂದ ಬಂದ ಮಾದರಿಗಳಲ್ಲಿ (ಕಾಗೆಯ ರಕ್ತ /ಅವಶೇಷಗಳ ಮಾದರಿಗಳು) H5N1 ವೈರಸ್ ಪತ್ತೆಯಾಗಿದೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಸತ್ತ ಪಕ್ಷಿಗಳನ್ನು ಭೂಮಿಯ ಆಳದಲ್ಲಿ ಹೂಳುವ ಮೂಲಕ ಸರಿಯಾಗಿ ವಿಲೇವಾರಿ ಮಾಡಲು, ಕಣ್ಗಾವಲು ಹೆಚ್ಚಿಸಲು ಮತ್ತು ಅನುಮಾನಾಸ್ಪದವಾಗಿ ಮೃತಪಟ್ಟ ಪಕ್ಷಿ ಮರಣದ ಬಗ್ಗೆ ತಕ್ಷಣ ವರದಿ ಮಾಡಲು ಸೂಚನೆ ನೀಡಲಾಗಿದೆ. ನಿರ್ದಿಷ್ಟವಾಗಿ ಸತ್ತ ಪಕ್ಷಿಗಳ ಶವವನ್ನು ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. ಪ್ರಾಣಿ, ವನ್ಯಜೀವಿ ಮತ್ತು ಆರೋಗ್ಯ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲಾಗುತ್ತಿದೆ.

Bird Flu Alert in Chennai

ಹಕ್ಕಿ ಜ್ವರ H5N1 ಹೆಚ್ಚಳ

ಇನ್ನು ತಮಿಳುನಾಡಿನ ವಿವಿಧ ಭಾಗದಲ್ಲಿ ಹಕ್ಕಿ ಜ್ವರ H5N1 ಏಕಾಏಕಿ ಹೆಚ್ಚಳವಾಗಿದೆ. ತ್ವರಿತ ಕಣ್ಗಾವಲು ಇನ್ನೂ ಪ್ರಾರಂಭವಾಗಿಲ್ಲ. ಪಶುವೈದ್ಯರು ಮತ್ತು ಪ್ರಾಣಿ ದಯಾ ಸಂಸ್ಥೆಗಳು ಚೆನ್ನೈನಲ್ಲಿ ಏಕಾಏಕಿ ಹಕ್ಕಿ ಜ್ವರ ಹರಡುವಿಕೆಯ ಪ್ರಮಾಣವು ಗಮನಾರ್ಹವಾಗಿರಬಹುದು ಎಂದು ಕಳವಳ ವ್ಯಕ್ತಪಡಿಸಿವೆ. ಕಳೆದ ಕೆಲವು ವಾರಗಳಲ್ಲಿ ನಗರದಲ್ಲಿ 1,000 ರಿಂದ 1,500 ಕಾಗೆಗಳು ಸಾವನ್ನಪ್ಪಿರಬಹುದು ಎಂದು ಬೆಸೆಂಟ್ ಸ್ಮಾರಕ ಪ್ರಾಣಿ ಚಿಕಿತ್ಸಾಲಯದ (BMAD) ಶ್ರವಣ್ ಕೃಷ್ಣನ್ ಅವರು ಅಂದಾಜಿಸಿದ್ದಾರೆ.

ನನ್ನ ಅಂದಾಜಿನ ಪ್ರಕಾರ, ಕನಿಷ್ಠ 1,500 ಕಾಗೆಗಳು ಸಾವನ್ನಪ್ಪಿವೆ. ಪ್ರತಿದಿನ ನಮಗೆ ಅಸಹಜವಾಗಿ ಕಾಗೆಗಳು ಸಾವನ್ನಪ್ಪುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಜನರು ಅನಾರೋಗ್ಯ ಪೀಡಿತ ಕಾಗೆಗಳನ್ನು ನಮ್ಮ ಸಂಸ್ಥೆಗೆ ನಿಯಮಿತವಾಗಿ ತರುತ್ತಿದ್ದಾರೆ. ಇಂದು ಮೂರು ಕಾಗೆಗಳನ್ನು ತಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರದೇಶಗಳಲ್ಲಿ ಹಕ್ಕಿ ಜ್ವರ H5N1 ಹೆಚ್ಚಳ

ತಮಿಳುನಾಡಿನ ಚೆನ್ನೈ ಸೇರಿದಂತೆ ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಾಚೇರಿ, ತಿರುವನ್ಮಿಯೂರ್ ಮತ್ತು ಇಸಿಆರ್ ಮತ್ತು ಒಎಂಆರ್‌ ಕಾರಿಡಾರ್‌ಗಳಲ್ಲಿ ಕಾಗೆಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿವೆ. ಈ ಬೆಳವಣಿಗೆಯು ಚೆನ್ನೈ ನಗರದಾದ್ಯಂತ ವೈರಸ್ ವ್ಯಾಪಕವಾಗಿ ಹರಡುತ್ತಿರಬಹುದು ಎಂದು ಹೇಳಲಾಗುತ್ತಿದೆ.

ನಮಗೆ ಇನ್ನೂ ಈ ವೈರಸ್ ತಳಿಯ ನಿಖರ ಸ್ವರೂಪ ತಿಳಿದಿಲ್ಲ. ರೋಗವು ಇತರ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಮೊದಲು ಹೆಚ್ಚಿನ ಮಾದರಿಗಳನ್ನು ತುರ್ತಾಗಿ ಪರೀಕ್ಷೆಗೆ ಕಳುಹಿಸಬೇಕು. ಸಹಾಯವಾಣಿ, ಪಕ್ಷಿಗಳ ಮೃತದೇಹಗಳನ್ನು ನಿರ್ವಹಿಸಲು ತ್ವರಿತ-ಪ್ರತಿಕ್ರಿಯೆ ತಂಡಗಳು ಮತ್ತು ಕಾರ್ಯಪಡೆಯನ್ನು ಸ್ಥಾಪಿಸುವುದು ಸೇರಿದಂತೆ ತುರ್ತು ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹಕ್ಕಿ ಜ್ವರ H5N1 ಸಾರ್ವಜನಿಕರಲ್ಲಿ ಜಾಗೃತಿ

ಮೃತಪಟ್ಟ ಪಕ್ಷಿಗಳ ಮೃತದೇಹಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆಳವಾಗಿ ಭೂಮಿಯಲ್ಲಿ ಹೂಳಬೇಕು. ಇದನ್ನು ಸಾರ್ವಜನಿಕರಿಗೆ ಮಾತ್ರ ಬಿಡುವುದು ಅಪಾಯಕಾರಿ ಎಂದು ಕೃಷ್ಣನ್ ಅವರು ಹೇಳಿದ್ದಾರೆ. ಅಧಿಕಾರಿಗಳು ಮೇಲ್ವಿಚಾರಣೆ ಮತ್ತು ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸುತ್ತಿದ್ದಾರೆ. ವಿಶೇಷವಾಗಿ ಪಕ್ಷಿಗಳ ಆವಾಸಸ್ಥಾನಗಳ ಬಳಿ ವಾಸಿಸುವ, ಕೋಳಿ ಫಾರಂ ಅಥವಾ ಪ್ರಾಣಿಗಳೊಂದಿಗೆ ಕೆಲಸ ಮಾಡುವ ಜನರಿಗೆ ಸೋಂಕು ತಗುಲದಂತೆ ಮಾಡಲು ಮುನ್ನೆಚ್ಚರಿಕೆಗಳ ಬಗ್ಗೆ ನಿವಾಸಿಗಳಿಗೆ ಸಲಹೆ ನೀಡಲಾಗುತ್ತಿದೆ.

ತಮಿಳುನಾಡು ಪಶುಸಂಗೋಪನಾ ಇಲಾಖೆಯು ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಕಣ್ಗಾವಲು ಹೆಚ್ಚಿಸಲು ಮತ್ತು ಜೈವಿಕ ಸುರಕ್ಷತಾ ಕ್ರಮಗಳನ್ನು ತೀವ್ರಗೊಳಿಸಲು ಆದೇಶಿಸಿದೆ. ವರದಿಯಾದ ಪಕ್ಷಿ ಮರಣ ವಲಯಗಳಲ್ಲಿ ಸಂಪೂರ್ಣ ಔಷಧಿ ಸಿಂಪಡಣೆ ಕಾರ್ಯಾಚರಣೆ ನಡೆಯುತ್ತಿದೆ. ದೇಶೀಯ ಕೋಳಿ ಮತ್ತು ಇತರ ಸೂಕ್ಷ್ಮ ಪಕ್ಷಿ ಪ್ರಭೇದಗಳ ಮೇಲ್ವಿಚಾರಣೆ ಮತ್ತು ಸಹಜವಾಗಿ ಸಾವನ್ನಪ್ಪುವ ಪಕ್ಷಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ತ್ವರಿತವಾಗಿ ವರದಿ ಮಾಡುವುದಕ್ಕೂ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲೂ ಭೀತಿ

ಇನ್ನು ನೆರೆಯ ತಮಿಳುನಾಡಿನ ಚೆನ್ನೈನಲ್ಲಿ ಹಕ್ಕಿ ಜ್ವರ (H5N1) ತೀವ್ರವಾಗಿ ಹೆಚ್ಚಳವಾಗುತ್ತಿರುವುದು ಕರ್ನಾಟಕದಲ್ಲೂ ಆತಂಕ ಶುರುವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+