ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವರು
ನವದೆಹಲಿ, ಅಕ್ಟೋಬರ್ 18: 2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಆರೋಪಿಗಳ ಶೀಘ್ರ ಬಿಡುಗಡೆಯನ್ನು ಕೇಂದ್ರ ಸಚಿವರೊಬ್ಬರು ಸಮರ್ಥಿಸಿಕೊಂಡಿದ್ದಾರೆ. ಇಂದು ಗುಜರಾತ್ ಚುನಾವಣಾ ಪ್ರಚಾರದ ವೇಳೆ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
"ಸರ್ಕಾರ ಮತ್ತು ಸಂಬಂಧಪಟ್ಟವರು ನಿರ್ಧಾರ ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜೈಲಿನಲ್ಲಿ "ಸಾಕಷ್ಟು ಸಮಯ" ಕಳೆದ ಅಪರಾಧಿಗಳಿಗೆ, ಬಿಡುಗಡೆಗೆ "ನಿಬಂಧನೆ ಇದೆ" ಎಂದು ಸಚಿವರು ಹೇಳಿದ್ದಾರೆ.
ಜೂನ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸಿದರು. "ರಾಜ್ಯ ಸರ್ಕಾರವು ಕೈದಿಗಳನ್ನು ಉತ್ತಮ ನಡವಳಿಕೆಗಾಗಿ ಬಿಡುಗಡೆ ಮಾಡುವ ಅಧಿಕಾರವನ್ನು ಹೊಂದಿದೆ. ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ತೋರಿಸಲಾಗುತ್ತಿದೆ. ಯಾವುದೇ ಅಪರಾಧಿಯು ಅವರ ಕೃತ್ಯಗಳಿಗೆ ಶಿಕ್ಷೆಗೆ ಅರ್ಹರು" ಎಂದು ಹಾರ್ದಿಕ್ ಪಟೇಲ್ ಹೇಳಿದರು.
ಈ ವೇಳೆ ಅವರೊಂದಿಗೆ ಪ್ರಚಾರ ಮಾಡುತ್ತಿದ್ದ ಬಿಜೆಪಿ ನಾಯಕ ಅಲ್ಪೇಶ್ ಠಾಕೂರ್ ಇದಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದರು. ಏಕೆಂದರೆ ಅವರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಅಪರಾಧಿಗಳನ್ನು ಮುಕ್ತಗೊಳಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. "ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಉತ್ತಮ ನಡವಳಿಕೆ ಅಲ್ಲ. ಅವರು ಜೈಲಿನಿಂದ ಹೊರನಡೆದಾಗ ಅವರಿಗೆ ಸಿಹಿತಿಂಡಿ ನೀಡಿರುವುದು ನಾಚಿಕೆಗೇಡಿನ ಸಂಗತಿ" ಎಂದು ಠಾಕೂರ್ ಎನ್‌ಡಿಟಿವಿಗೆ ತಿಳಿಸಿದರು.

'ಘೋರ ಮತ್ತು ಗಂಭೀರ' ಪ್ರಕರಣ
ಈ ಅಪರಾಧವು " ಘೋರ ಮತ್ತು ಗಂಭೀರವಾಗಿದೆ" ಮತ್ತು ಯಾವುದೇ ವಿನಮ್ರತೆಗೆ ಅರ್ಹವಾಗಿಲ್ಲ ಎಂದು ಸಿಬಿಐ ಕಳೆದ ವರ್ಷ ಹೇಳಿತ್ತು. ಆದರೆ ಈ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಸಿಬಿಐ ಮತ್ತು ವಿಶೇಷ ನ್ಯಾಯಾಧೀಶರು ಆಕ್ಷೇಪಣೆಗಳನ್ನು ಕೇಂದ್ರ ಮತ್ತು ಗುಜರಾತ್ ಸರ್ಕಾರ ಎರಡೂ ತಳ್ಳಿಹಾಕಿವೆ.
ಹೀಗಾಗಿ ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಿಲ್ಕಿಸ್ ಬಾನೊ ಪ್ರಕರಣದ ಸಂಪೂರ್ಣ ದಾಖಲೆಯನ್ನು ಸಲ್ಲಿಸಲು ಮತ್ತು ಅಪರಾಧಿಗಳನ್ನು ಹೇಗೆ ಬಿಡುಗಡೆ ಮಾಡಲಾಯಿತು ಎಂದು ಗುಜರಾತ್‌ಗೆ ಕೇಳಿದೆ.

ಅಪರಾಧಿಗಳ ಪೈಕಿ ಒಬ್ಬ ಆಕೆಯ ಚಿಕ್ಕಪ್ಪ
2002ರಲ್ಲಿ ಬಿಲ್ಕಿಸ್ ಬಾನೊ 20 ವರ್ಷದವರಿದ್ದು, ಅಂದು ಕೆಲವು ತಿಂಗಳ ಗರ್ಭಿಣಿಯಾಗಿದ್ದ ಅವರ ಮೇಲೆ ಕ್ರೌರ್ಯ ತೋರಲಾಗಿತ್ತು. ಆಕೆಗೆ ಪರಿಚಯವಿದ್ದ ಕಾಮುಕರಿಂದಲೇ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಅಪರಾಧಿಗಳ ಪೈಕಿ ಒಬ್ಬ ಆಕೆಯ ಚಿಕ್ಕಪ್ಪನೇ ಆಗಿದ್ದು, ಉಳಿದವರು ಸಹೋದರರಾಗಿದ್ದರು. ಅವಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಬಹುತೇಕ ನಿರ್ಜೀವವಾಗಿ ಬಿಟ್ಟಿದ್ದರು. ಮಾರ್ಚ್ 3, 2002ರಂದು ಮೂರು ವರ್ಷದ ಮಗಳನ್ನು ಕೊಲೆ ಮಾಡಲಾಗಿತ್ತು.

ಬಿಲ್ಕಿಸ್ ಬಾನೋಗೆ ಕೊಲೆ ಬೆದರಿಕೆ
ಅತ್ಯಾಚಾರದ ನಂತರದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಗೆ ಎಚ್ಚರಗೊಂಡ ನಂತರದಲ್ಲಿ ಬಿಲ್ಕಿಸ್ ಬುಡಕಟ್ಟು ಮಹಿಳೆಯಿಂದ ಬಟ್ಟೆ ಅನ್ನು ಪಡೆದುಕೊಂಡರು. ದಾಹೋದ್ ಜಿಲ್ಲೆಯ ಲಿಮ್ಖೇಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆದರೆ ಅಂದು ಅಲ್ಲಿನ ಹೆಡ್ ಕಾನ್ ಸ್ಟೇಬಲ್ ಸತ್ಯವನ್ನು ಮುಚ್ಚಿಟ್ಟು ದೂರಿನ್ನೇ ಮೊಟಕುಗೊಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ನ್ಯಾಯಕ್ಕಾಗಿ ಪರಿತಪಿಸುತ್ತಿದ್ದ ಮಹಿಳೆಯ ಅಗ್ನಿ ಪರೀಕ್ಷೆಯಲ್ಲಿ ಅದು ಆರಂಭಿಕ ಅಧ್ಯಾಯವಾಗಿತ್ತು. ನಂತರದಲ್ಲಿ ಆಕೆಗೆ ಕೊಲೆ ಬೆದರಿಕೆಗಳು ಬಂದವು. 2004ರಲ್ಲಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈಗೆ ಸ್ಥಳಾಂತರಿಸಿತು.

ಕಾನ್‌ಸ್ಟೆಬಲ್‌ಗೂ ಶಿಕ್ಷೆ
ಮುಂಬೈನ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು, ನಂತರ ಅದನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಕಳೆದ 2008ರ ಜನವರಿ ತಿಂಗಳಿನಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ 20 ಆರೋಪಿಗಳಲ್ಲಿ 11 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿತು. ಮಹಿಳೆಯ ಮೇಲೆ ಅತ್ಯಾಚಾರದ ಸಂಚು, ಕೊಲೆ, ಕಾನೂನುಬಾಹಿರ ಸಭೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇತರ ಆರೋಪಗಳ ಮೇಲೆ ದೋಷಿ ಎಂದು ತೀರ್ಪು ನೀಡಿತ್ತು. ಈ ಅಪರಾಧಿಗಳನ್ನು ರಕ್ಷಿಸಲು "ತಪ್ಪಾದ ದಾಖಲೆಗಳನ್ನು" ಮಾಡಿದ್ದಕ್ಕಾಗಿ ಹೆಡ್ ಕಾನ್‌ಸ್ಟೆಬಲ್‌ಗೆ ಶಿಕ್ಷೆ ವಿಧಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 20 ಆರೋಪಿಗಳ ಪೈಕಿ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.












Click it and Unblock the Notifications