ಗುಜರಾತ್ : ಸಿಂಹಕ್ಕಿಂತಲೂ ಕ್ರೂರಿಗಳು ಇವರು..

Posted By:
Subscribe to Oneindia Kannada
   ಎಷ್ಟು ಕ್ರೂರಿಗಳು ಇವರು..! | showcase of cruelty in gujrath | Oneindia Kannada

   ನವೆಂಬರ್ 10, ಗುಜರಾತ್ : ಮನುಷ್ಯ ಉಳಿದೆಲ್ಲ ವ್ಯಾಘ್ರ ಪ್ರಾಣಿಗಳಿಗಿಂತಲೂ ಕ್ರೂರಿ ಎಂಬುದು ಎ.ಎನ್.ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿರುವ ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಕ್ರೂರ ಪ್ರಾಣಿ ಎಂದೇ ಕರೆಯಲ್ಪಡುವ ಸಿಂಹವನ್ನೂ ಬಿಡದ ಕ್ರೂರಿ ಯುವಕರು ಬೇಕೆಂದೇ ಸಿಂಹಗಳನ್ನು ಅಟ್ಟಾಡಿಸಿಕೊಂಡು ಹೋಗಿ ತೊಂದರೆ ನೀಡಿ ವಿಕೃತಿ ಮೆರೆದಿದ್ದಾರೆ.

   ಜಂಗಲ್ ಡೈರಿ: ಜಿಮ್ ಕಾರ್ಬೆಟ್ ಆ ನರಭಕ್ಷಕ ಪ್ರಾಣಿಗಳ ಕೊಲ್ಲದೆ ಇದ್ದಿದ್ದರೆ...

   ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಯುವಕರು ಸಿಂಹ ಮತ್ತು ಸಿಂಹಿಣಿಯೊಂದನ್ನು ಉದ್ದೇಶಪೂರ್ವಕವಾಗಿ ತಮ್ಮ ಬೈಕುಗಳಲ್ಲಿ ಅಟ್ಟಾಡಿಸಿಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ವೈರಲ್ ಆಗಿದ್ದು ಕೋಟ್ಯಾಂತರ ಮಂದಿ ಪ್ರಾಣಿ ಪ್ರಿಯರಿಂದ ಟೀಕೆಗೆ ಗುರಿಯಾಗಿದೆ.

   Bikers seen chasing a lion and lioness in Gujarat's Gir

   ಎ.ಎನ್.ಐ ಸುದ್ದಿ ಸಂಸ್ಥೆಯು ಎರಡು ಪ್ರತ್ಯೇಕ ವಿಡಿಯೋಗಳನ್ನು ಒಂದು ಮಾಡಿ ಟ್ವೀಟ್ ಮಾಡಿದೆ. ವಿಡಿಯೋದ ಮೊದಲ ಭಾಗದಲ್ಲಿ ಕತ್ತಲೆ ರಾತ್ರಿಯಲ್ಲಿ ಸಿಂಹಿಣಿಯೊಂದನ್ನು ಕಾರಿನಲ್ಲಿ ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯವಿದೆ. ಕಾರಿನಲ್ಲಿದ್ದ ಜನ "ಶೂಟ್ ಮಾಡು, ಶೂಟ್ ಮಾಡು' ಎಂದು ಗುಜರಾತಿ ಭಾಷೆಯಲ್ಲಿ ಹೇಳುತ್ತಿರುವುದು ಕೇಳುತ್ತದೆ. ಗಾಬರಿಗೊಂಡ ಸಿಂಹ ಬಹು ಕಾಲ ರಸ್ತೆಯ ನಡುವೆ ಓಡಿ ಬಳಲಿ ಕೊನೆಗೆ ಕಾಡಿನ ಕತ್ತಲೆಯಲ್ಲಿ ಮರೆಯಾಗಿಬಿಡುತ್ತದೆ.

   ವೈರಲ್ ವಿಡಿಯೋ: ಪುಟ್ಟ ಬಾಲಕಿ ಎಳೆದೊಯ್ದ ಕಡಲ ಸಿಂಹ

   ಮತ್ತೊಂದು ದೃಶ್ಯದಲ್ಲಿ ಹಾಡು ಹಗಲೇ ನಾಲ್ಕು ಮಂದಿ ಯುವಕರು ಎರಡು ಬೈಕ್ ಗಳಲ್ಲಿ ಸಿಂಹ ಮತ್ತು ಸಿಂಹಿಣಿಯೊಂದನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯವಿದೆ. ಯುವಕರ ಬೈಕ್ ಆರ್ಭಟ, ಹಾರ್ನ್ ಶಬ್ದಕ್ಕೆ ಬೆದರಿದ ಹುಲಿಗಳು ಗಾಬರಿಯಾಗಿ ಓಡುವುದು ಕರುಣೆ ಉಕ್ಕಿಸುತ್ತದೆ.

   ಎ.ಎನ್.ಐ ಮಾಡಿರುವ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕ ಜನರು 'ಯುವಕರ ಬೈಕು ಕಿತ್ತುಕೊಂಡು ಸಿಂಹಗಳ ನಡುವೆ ಬಿಡಬೇಕಿತ್ತು' ಎಂಬ ಸಲಹೆಯನ್ನು ನೀಡಿದ್ದಾರೆ. ಇನ್ನು ಕೆಲವರು ಅವರ ಬೈಕ್ ಗೆ ಮಾತ್ರವೇ ವೇಗವಿದೆ ಬುದ್ದಿ ತೆವಳುತ್ತಿದೆ, ಪ್ರಾಣಿಗಳಿಗೆ ಹಿಂಸೆ ಕೊಡಬಾರದೆಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.

   ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮೂರು ಮಂದಿ ಯುವಕರನ್ನು ಬಂಧಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Bikers chasing a lion and lioness in Gujarat's Gir video went viral. young peaople act thrashed by animal lovers in the social media. now police arrest three people.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ