Beef: ಬಿಹಾರಿ vs ಮಲಯಾಳಿ: ಬ್ಯಾಂಕ್‌ನಲ್ಲಿ ಗೋಮಾಂಸ ಪಾರ್ಟಿ: ವಿಡಿಯೋ ವೈರಲ್!

Bihari vs Malayali: ದೇಶದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಗೋಮಾಂಸ ಸೇವನೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಿಹಾರದ ಮ್ಯಾನೇಜರ್ ನಿರ್ಬಂಧ ಎಂದು ಹೇಳಲಾಗುತ್ತಿದೆ. ಬ್ಯಾಂಕ್‌ವೊಂದರ ಕ್ಯಾಂಟೀನ್‌ನಲ್ಲಿ ಗೋಮಾಂಸ ನಿಷೇಧ ಮಾಡಿದ್ದ ಮ್ಯಾನೇಜರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆನರಾ ಬ್ಯಾಂಕ್ ಸಿಬ್ಬಂದಿ 'Beef Fest' ಗೋಮಾಂಸ ಉತ್ಸವ ಎಂದು ಆಯೋಜನೆ ಮಾಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.

ಕೇರಳದ ಪ್ರಮುಖ ನಗರ ಪ್ರದೇಶಗಳಲ್ಲಿ ಒಂದಾಗಿರುವ ಕೊಚ್ಚಿಯ ಕೆನರಾ ಬ್ಯಾಂಕ್ (Canara Bank) ಶಾಖೆಯಲ್ಲಿ ನಡೆದಿರುವ ಈ ಘಟನೆಯು ದೇಶದ ಗಮನ ಸೆಳೆದಿದೆ. ಕೇರಳದಲ್ಲಿ ಗೋಮಾಂಸ ಸೇವನೆ ಹೆಚ್ಚಾಗಿದೆ. ಇಲ್ಲಿನ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ಕ್ಯಾಂಟೀನ್‌ನಲ್ಲಿ ಗೋಮಾಂಸ ನಿಷೇಧ ಮಾಡಿ, ಆದೇಶ ಮಾಡಿದ್ದಾರೆ ಎಂದು ಹೇಳಲಾಗಿದ್ದು. ಈ ಆದೇಶದ ವಿರುದ್ಧ ಬ್ಯಾಂಕ್ ಸಿಬ್ಬಂದಿ ಸಾತ್ವಿಕ ಆಕ್ರೋಶವನ್ನು ಪ್ರದರ್ಶನ ಮಾಡಿದ್ದಾರೆ. ಗೋಮಾಂಸ ನಿಷೇಧ ಮಾಡಿರುವುದನ್ನು ವಿರೋಧಿಸಿ, ಗೋಮಾಂಸ ಸೇವನೆ ಮಾಡುವ ಮೂಲಕ ಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರೀ ಸಂಚಲನ ಮೂಡಿಸಿದೆ.

Bihari vs Malayali Beef party in bank Video goes viral

ಕೇರಳದ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಅಲ್ಲಿನ ಕ್ಯಾಂಟೀನ್‌ಲ್ಲಿ ಗೋಮಾಂಸ ಸೇವಿಸಬಾರದು ಎಂದು ಆದೇಶ ಮಾಡಿದ್ದು. ಇದನ್ನು ವಿರೋಧಿಸಿರುವ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಉದ್ಯೋಗಿಗಳು ಬ್ಯಾಂಕ್ ಮ್ಯಾನೇಜರ್ ಮುಂದೆಯೇ ಗೋಮಾಂಸ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋಮಾಂಸ ಹಾಗೂ ಪರೋಟ ಸೇರಿದಂತೆ ವಿವಿಧ ಗೋಮಾಂಸದ ಆಹಾರವನ್ನು ಸೇವಿಸಿ ವಿನೂತನ ಪ್ರತಿಭಟನೆ ಮಾಡಿದ್ದಾರೆ.

ಬಿಹಾರಿ ಮ್ಯಾನೇಜರ್ ಆದೇಶ: ಇನ್ನು ಕೇರಳದ ಈ ಬ್ಯಾಂಕ್‌ನ ಕ್ಯಾಂಟೀನ್‌ನಲ್ಲಿ ಗೋಮಾಂಸ ಸೇರಿದಂತೆ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಗಳನ್ನು ನೀಡಲಾಗುತ್ತಿತ್ತು. ಆದರೆ, ಹೊಸದಾಗಿ ಬ್ಯಾಂಕ್‌ಗೆ ಬಂದ ಬ್ಯಾಂಕ್ ಮ್ಯಾನೇಜರ್ ತಾನು ಗೋಮಾಂಸ ಸೇವನೆ ಮಾಡದೆ ಇರುವುದರಿಂದ ಬ್ಯಾಂಕ್‌ನಲ್ಲಿ ಬೇರೆ ಅವರೂ ಗೋಮಾಂಸ ಸೇವಿಸಬಾರದು ಎಂದು ಗೋಮಾಂಸ ನಿಷೇಧ ಮಾಡಿದ್ದರು ಎಂದು ಬ್ಯಾಂಕ್‌ನ ಸಿಬ್ಬಂದಿ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿರುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.

ಬಿಹಾರ ಮೂಲದ ಅಶ್ವಿನಿ ಕುಮಾರ್ ಎನ್ನುವವರು ಕೇರಳದ ಕೊಚ್ಚಿಯಲ್ಲಿ ಕೆನರಾ ಬ್ಯಾಂಕ್ ಶಾಖೆಗೆ ರೀಜನಲ್ ಮ್ಯಾನೇಜರ್ ಆಗೆ ವರ್ಗಾವಣೆ ಆಗಿದ್ದಾರೆ. ಕೇರಳದ ಕಚೇರಿ ಕ್ಯಾಂಟೀನ್ ಮಾರಾಟ ಅವರಿಗೆ ಹೊಸದಾಗಿ ಕಾಣಿಸಿದೆ. ಅಲ್ಲದೇ ಬ್ಯಾಂಕ್‌ ಇರುವ ಭಾಗದ ಕ್ಯಾಂಟೀನ್‌ನಲ್ಲಿ ಇದನ್ನು ನಿಷೇಧ ಮಾಡಿ ಆದೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಹೊಸ ಪ್ರತಿಭಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+