131 ಶಾಸಕರ ಬೆಂಬಲದೊಂದಿಗೆ ವಿಶ್ವಾಸ ಮತ ಗೆದ್ದ ನಿತೀಶ್

By: ವಿಕಾಸ್ ನಂಜಪ್ಪ
Subscribe to Oneindia Kannada

ಪಾಟ್ನಾ, ಜುಲೈ 28:ಬಿಹಾರದ ರಾಜಕೀಯ ಪ್ರಹಸನಕ್ಕೆ ಅಂತೂ ತೆರೆಬಿದ್ದಿದೆ. 131 ಶಾಸಕರ ಬೆಂಬಲದೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು(ಜುಲೈ 28) ವಿಶ್ವಾಸ ಮತ ಗೆದ್ದಿದ್ದಾರೆ. ಜೆಡಿಯು-ಬಿಜೆಪಿ ಸರ್ಕಾರಕ್ಕೆ ಇನ್ನು ಯಾವುದೇ ಅಡೆತಡೆಗಳಿಲ್ಲ!

Bihar trust vote: Nitish will get support of 133 MLAs?

ಬೆಳಿಗ್ಗೆ 11 ಗಂಟೆಗೆ ವಿಶ್ವಾಸ ಮತ ಯಾಚನೆಗೂ ಮುನ್ನ ವಿಪಕ್ಷ ಆರ್ ಜೆಡಿ ನಾಯಕರು ನಿತೀಶ್ ವಿರುದ್ಧ ಘೋಷಣೆ ಕೂಗುವ ಮೂಲಕ ವಿಶ್ವಾಸಮತ ಯಾಚನೆಗೆ ಅಡ್ಡಿ ಉಂಟುಮಾಡಿದರು. ಈ ಎಲ್ಲ ಗಲಾಟೆಯ ನಡುವಲ್ಲೂ 243 ಸದಸ್ಯ ಬಲದ ಬಿಹಾರ ವಿಧಾನ ಸಭೆಯಲ್ಲಿ 131 ಸದಸ್ಯ ಬಲವನ್ನು ಪಡೆದು ಬಹುಮತ ಸಾಧಿಸುವ ಮೂಲಕ ನಿತೀಶ್ ವಿಶ್ವಾಸ ಮತ ಗೆದ್ದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief minister of Bihar Nitish Kumar won trust vote by the support of 131 MLA's on 28th July
Please Wait while comments are loading...