ಈ ಗ್ರಾಮದಲ್ಲಿ ಯುವತಿಯರು ಮೊಬೈಲ್ ಬಳಸುವಂತಿಲ್ಲ!

mobile
ಪಾಟ್ನಾ, ಡಿ. 26 : ಬಿಹಾರದ ಗ್ರಾಮ ಪಂಚಾಯಿತಿಯೊಂದು ಅವಿವಾಹಿತ ಹೆಣ್ಣು ಮಕ್ಕಳು ಇನ್ನು ಮುಂದೆ ಮೊಬೈಲ್ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ, ಬುಧವಾರದಿಂದ ಈ ಆದೇಶ ಜಾರಿಗೆ ಬಂದಿದ್ದು, ಇದನ್ನು ಉಲ್ಲಂಘಿಸಿದರೆ, ಯುವತಿ ಮತ್ತು ಕುಟುಂಬಕ್ಕೆ ಕಠಿಣ ಶಿಕ್ಷೆ ವಿಧಿಸುವುದಾಗಿ ಪಂಚಾಯಿತಿ ಎಚ್ಚರಿಕೆ ನೀಡಿದೆ.

ಬುಧವಾರ ಬಿಹಾರದ ಸೋಮಾಘರ್ ಪಂಚಾಯತ್ ಅವಿವಾಹಿತ ಹೆಣ್ಣು ಮಕ್ಕಳು ಮೊಬೈಲ್ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಗ್ರಾಮದ 100 ಗ್ರಾಮಸ್ಥರ ಸಮ್ಮತಿ ಪಡೆದು, ಈ ಕುರಿತು ಆದೇಶ ಹೊರಡಿಸಿದೆ ಎಂದು ಪಂಚಾಯಿತಿಯವರು ಹೇಳಿದ್ದಾರೆ. ಆದೇಶದಂತೆ, ಸೋಮಾಘರ್ ಪ್ರದೇಶದಲ್ಲಿ ಮದುವೆಯಾಗದ ಹುಡುಗಿಯರು ಮೊಬೈಲ್ ಬಳಸುವಂತಿಲ್ಲ. [ಮಹಿಳೆ ಮೊಬೈಲ್ ಬಳಸಿದರೆ 10 ಸಾವಿರ ದಂಡ]

ಗ್ರಾಮ ಪಂಚಾಯಿತಿ ಆದೇಶವನ್ನು ಮೀರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವತಿಯರು ಮೊಬೈಲ್ ಬಳಕೆ ಮಾಡಿದರೆ, ಯುವತಿ ಮತ್ತು ಆಕೆಯ ಕುಟುಂಬಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದೆ. ಗ್ರಾಮದ ಎಲ್ಲಾ ಕುಟುಂಬದವರಿಗೂ ಪಂಚಾಯಿತಿಯ ಈ ಆದೇಶದ ಬಗ್ಗೆ ಮಾಹಿತಿ ರವಾನಿಸಲಾಗಿದೆ.

ಗ್ರಾಮ ಪಂಚಾಯತ್ ನೀಡಿದ ಈ ಆದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರ ಪಂಚಾಯತ್ ರಾಜ್ ಸಚಿವ ಭೀಮ್ ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಹುಡುಗಿಯರು ಮೊಬೈಲ್ ಉಪಯೋಗಿಸುವುದನ್ನು ನಿಷೇಧಿಸುವ ಅಧಿಕಾರ ಗ್ರಾಮ ಪಂಚಾಯತಿಗೆ ಇಲ್ಲ, ಪಂಚಾಯಿತಿ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ದೂರು ಸಲ್ಲಿಸಿದರೆ, ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಬಿಹಾರದ ಔರಂಗಾಬಾದ್ ನ ಜಿಲ್ಲಾ ಪಂಚಾಯತ್ ಶಾಲಾ ಮಕ್ಕಳು ಮೊಬೈಲ್ ಉಪಯೋಗಿಸಬಾರದು ಎಂದು ಕಿಶನ್ ಗಂಜ್ ಜಿಲ್ಲೆಯ ಕೊಚಾಧಾಮ್ ಬ್ಲಾಕಿನ ಸುಂದರ್ ಬಾಡಿ ಗ್ರಾಮ ಪಂಚಾಯಿತಿ ಆದೇಶ ಹೊರಡಿಸಿತ್ತು ಈ ಆದೇಶ ವಿವಾದಕ್ಕೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+