ಬಿಹಾರದ ಬಕ್ಸರ್‌ ಸೆಂಟ್ರಲ್‌ ಜೈಲ್ ನಿಂದ ಐದು ಕೈದಿಗಳು ಪರಾರಿ

Posted By: Ramesh
Subscribe to Oneindia Kannada

ಬಿಹಾರ, ಡಿಸೆಂಬರ್. 31 : ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗಳು ಸೇರಿದಂತೆ ಒಟ್ಟು ಐದು ಅಪರಾಧಿಗಳು ಬಕ್ಸರ್‌ ಸೆಂಟ್ರಲ್‌ ಜೈಲ್ ನಿಂದ ಶುಕ್ರವಾರ ಮಧ್ಯರಾತ್ರಿ ಪರಾರಿಯಾಗಿದ್ದಾರೆ.

ಕೈದಿಗಳು ಪರಾರಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕೈದಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಜಿತ್ ಸಿಂಗ್‌, ಗಿರ್ಧಾರಿ ರಾಯ್‌, ಸೋನು ಪಾಂಡೆ, ಉಪೇಂದ್ರ ಸಾಹ್ ಹಾಗೂ 10 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಸೋನು ಸಿಂಗ್‌ ತಪ್ಪಿಸಿಕೊಂಡಿರುವ ಕೈದಿಗಳು.

ಅನಾರೋಗ್ಯದ ನೆಪ ಹೇಳಿ ಈ 5 ಕೈದಿಗಳು ಜೈಲಿನಲ್ಲಿರುವ ಮೆಡಿಕಲ್ ವಾರ್ಡ್ ನಲ್ಲಿ ದಾಖಲಾಗಿದ್ದರು. ಶುಕ್ರವಾರ ಮಧ್ಯರಾತ್ರಿ ಸುಮಾರು 12 ರಿಂದ 3 ಗಂಟೆಯ ಒಳಗೆ ಮೆಡಿಕಲ್ ವಾರ್ಡ್ ನಲ್ಲಿರುವ ಶೌಚಾಲಯದ ಕಿಟಕಿಯನ್ನು ಒಡೆದು ಪರಾರಿಯಾಗಿದ್ದಾರೆ.

ಇವರು ಪರಾರಿಯಾಗಲು ಬಳಸಿದ ಕಬ್ಬಿಣದ ಸಲಾಕೆ, ಪೈಪ್ ಹಾಗೂ ಧೋತಿ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಮಧ್ಯರಾತ್ರಿ ಆವರಿಸಿಕೊಂಡಿದ್ದ ದಟ್ಟ ಮಂಜು ಭದ್ರತಾ ಸಿಬ್ಬಂದಿಗಳಿಂದ ಕೈದಿಗಳು ತಪ್ಪಿಸಿಕೊಳ್ಳಲು ಸಹಕಾರಿಯಾಗಿರಬಹುದು ಎಂದು ಎಸ್‌ಪಿ ಉಪೇಂದ್ರ ಶರ್ಮಾ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Five prisoners escaped from Central Jail in Buxar, Bihar on late Friday night after which the police has issued high alert and cordoned off the area.
Please Wait while comments are loading...