Bihar Assembly Election 2025 Live: ಬಿಹಾರದಲ್ಲಿ ಎನ್‌ಡಿಎಗೆ ಭಾರೀ ಬಹುಮತ; ಮಹಾಘಟಬಂಧನ್ ಧೂಳಿಪಟ
Bihar Assembly Election 2025 Live: ದೇಶದಲ್ಲಿ ಜನರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್ 06 ಹಾಗೂ ನವೆಂಬರ್ 11ರಂದು ಎರಡು ಹಂತದಲ್ಲಿ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ ಬಿಹಾರದಲ್ಲಿ ದಾಖಲೆಯ ಮತದಾನವಾಗಿದ್ದು, ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಎಲ್ಲಾ ಚುನಾವಣೋತ್ತರ (Exit Polls) ಜೆಡಿಯು-ಬಿಜೆಪಿಯ ಎನ್‌ಡಿಎಗೆ ಬಹುಮತ ಬರಲಿವೆ ಎಂದು ಹೇಳಿದೆ. ಬಿಹಾರ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.
ಬಿಹಾರದಲ್ಲಿ ಈ ಬಾರಿ ಯಾರೇ ಅಧಿಕಾರಕ್ಕೆ ಬಂದರೂ ದಾಖಲೆ ನಿರ್ಮಾಣವಾಗಲಿದೆ. ಈ ಬಾರಿ ಬಿಹಾರ ಚುನಾವಣೆಯಲ್ಲಿ ದಾಖಲೆಯ ಶೇ 67.13ರಷ್ಟು ಮತದಾನವಾಗಿದೆ. ಒಟ್ಟು 243 ಸದಸ್ಯಬಲವಿರುವ ಬಿಹಾರ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 122 ಆಗಿದೆ. ಇನ್ನು ನವೆಂಬರ್ 6 ಹಾಗೂ ನವೆಂಬರ್ 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಚುನಾವಣಾ ಕಣದಲ್ಲಿ ರಾಜ್ಯದ ಐದು ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರರು ಸಹ ಸ್ಪರ್ಧೆ ಮಾಡಿದ್ದಾರೆ. ಕಣದಲ್ಲಿ 2,616 ಅಭ್ಯರ್ಥಿಗಳಿದ್ದರು.
ಬಿಹಾರದಲ್ಲಿ NDAಗೆ ಭರ್ಜರಿ ಗೆಲುವು
ಎರಡು ಹಂತಗಳಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದೆ. ಭಾರತೀಯ ಚುನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆಯ ಎಲ್ಲ 243 ಸ್ಥಾನಗಳ ಫಲಿತಾಂಶಗಳನ್ನು ಪ್ರಕಟಿಸಿದೆ. ಎನ್‌ಡಿಎ ಒಟ್ಟು 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಹಾಘಟಬಂಧನ್ ಒಟ್ಟು 35 ಸ್ಥಾನಗಳನ್ನು ಗೆದ್ದಿದೆ. ಎಐಎಂಐಎಂ 5 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ಎನ್‌ಡಿಎ ಒಕ್ಕೂಟವು ಬಿಹಾರದಲ್ಲಿ ಜಯಭೇರಿ ಬಾರಿಸಿದ್ದು, ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗಿದೆ.
ಬಿಹಾರದ ಜನರು ಈ ಬಾರಿ ಜಾತಿ ಪರಿಗಣನೆಗಳನ್ನು ನಿರ್ಲಕ್ಷಿಸಿ ಮತ್ತು ಪ್ರಧಾನಿ ಮೋದಿಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಚಲಾಯಿಸಿದ್ದಾರೆ" ಎಂದು ಬಿಹಾರ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಹೇಳಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶಗಳು ಒಂದು ವಿಷಯವನ್ನು ಸ್ಪಷ್ಟಪಡಿಸಿದೆ. ರಾಹುಲ್ ಗಾಂಧಿಯವರ ಮತ ಕಳ್ಳತನದ ವಿಷಯವು ಈಗ ಸಂಪೂರ್ಣವಾಗಿ ನಿವಾರಣೆಯಾಗಿದೆ. ಜಾತಿವಾದದ ಹೆಸರಿನಲ್ಲಿ ಜನರನ್ನು ಮತ ಚಲಾಯಿಸಲು ಸಜ್ಜುಗೊಳಿಸುತ್ತಿದ್ದ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ವಿಫಲರಾಗಿದ್ದಾರೆ ಎಂದಿದ್ದಾರೆ.
ಅತ್ಯಂತ ಕಿರಿಯ ಶಾಸಕಿ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮೈಥಿಲಿ ಠಾಕೂರ್ ಅವರು ಅಲಿನಗರ ಕ್ಷೇತ್ರದಿಂದ ಚೊಚ್ಚಲ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೈಥಿಲಿ ಬಿಹಾರದ ಅತ್ಯಂತ ಕಿರಿಯ ಶಾಸಕಿಯಾಗಿದ್ದಾರೆ.
ಜನರ ನಿರ್ಧಾರ ಗೌರವಿಸುತ್ತೇವೆ
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಹಾರದ ಜನರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಲ್ಲಿ ತೊಡಗಿರುವ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ. ಚುನಾವಣಾ ಫಲಿತಾಂಶಗಳ ಕೂಲಂಕಷ ಅಧ್ಯಯನವನ್ನು ನಡೆಸುತ್ತೇವೆ. ಮಹಾಮೈತ್ರಿಕೂಟವನ್ನು ಬೆಂಬಲಿಸಿದ ಬಿಹಾರದ ಮತದಾರರಿಗೆ ನಾವು ನಮ್ಮ ಹೃದಯದಿಂದ ಕೃತಜ್ಞರಾಗಿರುತ್ತೇವೆ. ನೀವು ನಿರುತ್ಸಾಹಗೊಳ್ಳುವ ಅಗತ್ಯವಿಲ್ಲ ಎಂದು ನಾನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ಹೇಳಲು ಬಯಸುತ್ತೇನೆ. ನೀವು ನಮ್ಮ ಹೆಮ್ಮೆ, ಗೌರವ ಮತ್ತು ವೈಭವ. ನಿಮ್ಮ ಕಠಿಣ ಪರಿಶ್ರಮ ನಮ್ಮ ಶಕ್ತಿ ಎಂದು ಖರ್ಗೆ ಹೇಳಿದ್ದಾರೆ.
ಬಿಹಾರ ಎನ್‌ಡಿಎಗೆ ಸ್ಪಷ್ಟ ಮತ್ತು ಅಭೂತಪೂರ್ವ ಜನಾದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ, ದಿಟ್ಟ ನಾಯಕತ್ವದಲ್ಲಿ ಅಲ್ಲಿನ ಜನತೆ ದೃಢವಿಶ್ವಾಸ ವ್ಯಕ್ತಪಡಿಸಿದ್ದು, ಜನತೆ ಇಟ್ಟ ನಂಬಿಕೆಗೆ ತಕ್ಕಂತೆ ಬಿಹಾರದ ವಿಕಾಸಕ್ಕಾಗಿ ಎನ್.ಡಿ.ಎ ಕಾರ್ಯನಿರ್ವಹಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದ್ದಾರೆ. ಈ ಐತಿಹಾಸಿಕ ಗೆಲುವಿಗಾಗಿ ನಮ್ಮ ಎಲ್ಲ ವಿಜೇತ ಶಾಸಕರಿಗೂ, ಹಗಲಿರುಳೂ ದುಡಿದ ಕಾರ್ಯಕರ್ತರಿಗೂ ಅಭಿನಂದನೆಗಳು ಎಂದಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ರಘುನಾಥಪುರದ ಆರ್‌ಜೆಡಿ ಅಭ್ಯರ್ಥಿ ಒಸಾಮಾ ಶಹಾಬ್ 9248 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಬಿಹಾರ ಫಲಿತಾಂಶ ನಿಜಕ್ಕೂ ಆಶ್ಚರ್ಯಕರ
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಮಹಾಘಟಬಂಧನ್‌ನಲ್ಲಿ ನಂಬಿಕೆ ಇಟ್ಟ ಬಿಹಾರದ ಲಕ್ಷಾಂತರ ಮತದಾರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬಿಹಾರದಲ್ಲಿನ ಈ ಫಲಿತಾಂಶ ನಿಜಕ್ಕೂ ಆಶ್ಚರ್ಯಕರವಾಗಿದೆ. ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಹೋರಾಟ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ. ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟ ಈ ಫಲಿತಾಂಶವನ್ನು ಆಳವಾಗಿ ಪರಿಶೀಲಿಸುತ್ತದೆ. ಪ್ರಜಾಪ್ರಭುತ್ವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಉಳಿಸಲು ತಮ್ಮ ಪ್ರಯತ್ನಗಳನ್ನು ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಹಾರದ ದಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಗ್ಗೆ ಬಿಜೆಪಿ ನಾಯಕ ರಾಮ್ ಕೃಪಾಲ್ ಯಾದವ್, "ಇಷ್ಟು ದೊಡ್ಡ ಕೊಡುಗೆ ನೀಡಿದ ಮತ್ತು ನನ್ನನ್ನು ಮಾತ್ರವಲ್ಲದೆ ಇಡೀ ಬಿಹಾರವನ್ನೇ ಆಶೀರ್ವದಿಸಿದ ಮಹಿಳೆಯರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ಹೇಳಿದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಇದು ಕೇವಲ ಎನ್‌ಡಿಎ ಗೆಲುವು ಅಲ್ಲ, ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವು ಕೂಡ ಎಂದಿದ್ದಾರೆ. ಅಲ್ಲದೆ ಬಿಹಾರದ ಯುವಜನರಿಗೆ ಅಲ್ಲೇ ಉದ್ಯೋಗಾವಕಾಶ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಬಿಹಾರದಲ್ಲಿ ಎನ್‌ಡಿಎ ಒಕ್ಕೂಟ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ್ದಾರೆ.
"ವೋಟ್ ಚೋರಿ"ಗೆ ಕಪಾಳಮೋಕ್ಷ
ಬಿಹಾರದ ಪ್ರಭುದ್ಧ ಮತದಾರರು ಕಾಂಗ್ರೆಸ್ ಪಕ್ಷದ 'ವೋಟ್ ಚೋರಿ' ಸುಳ್ಳು ಸಂಕಥನಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಸಂಕಲ್ಪಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಸ್ಥಾನ ಭದ್ರ...
ಕೆಲವು ದಿನಗಳಿಂದ ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾವಣೆ ವಿಚಾರ, ದೊಡ್ಡ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿತ್ತು. ಹೀಗಿದ್ದಾಗ ಕೆಲವರು ರೆಬೆಲ್ ಕೂಡ ಆಗುವ ಹಂತಕ್ಕೆ ತಲುಪಿದ್ದರು, ಮತ್ತೊಂದು ಕಡೆ ಇದೇ ಸಮಯದಲ್ಲಿ ತಮಗೆ ಸಚಿವ ಸ್ಥಾನ ಸಿಗುತ್ತಾ? ಅನ್ನೋ ಆಸೆಯಲ್ಲಿಯೇ ಕಾಯುತ್ತಿದ್ದರು. ಆದರೆ ಎಲ್ಲವೂ ಈಗ ಸ್ತಬ್ಧವಾಗಿ ಹೋಗಿದೆ, ಬಿಹಾರ ಸೋತು ಹೋಗಿರುವುದಕ್ಕೆ ಈಗಾಗಲೇ ಕಾಂಗ್ರೆಸ್ ವರಿಷ್ಠರು ಚಿಂತೆಯಲ್ಲಿ ಮುಳುಗಿದ್ದಾರೆ. ಇನ್ನೊಂದು ಕಡೆ ಮುಂದೆ ಬರುವ ಹಲವು ಚುನಾವಣೆಗಳಲ್ಲೂ ಸಂಕಷ್ಟ ಎದುರಾಗುವ ಆತಂಕ ಮೂಡಿದೆ.
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ: ಪ್ರಧಾನಿ ಮೋದಿ ಅಭಿನಂದನೆ
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಬಿಹಾರಕ್ಕೆ ಎನ್‌ಡಿಎ ಸರ್ವತೋಮುಖ ಅಭಿವೃದ್ಧಿಯನ್ನು ಒದಗಿಸಿದೆ. ನಮ್ಮ ಹಿಂದಿನ ಸಾಧನೆ ಮತ್ತು ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ದೂರದೃಷ್ಟಿಯ ಆಧಾರದ ಮೇಲೆ ಜನರು ನಮಗೆ ಮತ ಹಾಕಿದ್ದಾರೆ. ಈ ಅಪ್ರತಿಮ ವಿಜಯಕ್ಕಾಗಿ ಸಿಎಂ ನಿತೀಶ್ ಕುಮಾರ್ ಜಿ ಮತ್ತು ಎನ್‌ಡಿಎ ಕುಟುಂಬದ ನಮ್ಮ ಮಿತ್ರರಾದ ಚಿರಾಗ್ ಪಾಸ್ವಾನ್ ಜಿ, ಜಿತನ್ ರಾಮ್ ಮಾಂಝಿ ಜಿ ಮತ್ತು ಉಪೇಂದ್ರ ಕುಶ್ವಾಹ ಜಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ, ಬಿಹಾರದ ಪ್ರಗತಿ, ಬಿಹಾರದ ಮೂಲಸೌಕರ್ಯ ಮತ್ತು ಬಿಹಾರದ ಸಂಸ್ಕೃತಿಗಾಗಿ ನಾವು ಇನ್ನೂ ಹೆಚ್ಚಿನದನ್ನು ಮಾಡುತ್ತೇವೆ. ರಾಜ್ಯದ ಯುವಶಕ್ತಿ ಮತ್ತು ನಾರಿಶಕ್ತಿ ಸಮೃದ್ಧ ಜೀವನವನ್ನು ನಡೆಸಲು ಅನೇಕ ಅವಕಾಶಗಳನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದ ಕೊರಳನ್ನು ಅಲಂಕರಿಸಿದ ಪ್ರಜಾಪ್ರಭುತ್ವದ ವಿಜಯದ ಹಾರವಾಗಿ ವಿಜೃಂಭಿಸಿದೆ. ಪ್ರಧಾನಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ದೇಶಕ್ಕೆ ಅನಿವಾರ್ಯ ಎಂಬ ಸಂದೇಶವನ್ನೂ ಬಿಹಾರದ ಮತದಾರರು ರವಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ
ದಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು
ಬಿಜೆಪಿ ಅಭ್ಯರ್ಥಿ ರಾಮ್ ಕೃಪಾಲ್ ಯಾದವ್ ದಾನಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. "ನನ್ನನ್ನು ಗೆಲ್ಲಿಸಿದ ದಾನಾಪುರದ ಮಹಾನ್ ಮತದಾರರಿಗೆ ನಾನು ನಮಸ್ಕರಿಸುತ್ತೇನೆ. ಇದು ಅವರ ಗೆಲುವು, ನನ್ನದಲ್ಲ" ಎಂದು ಅವರು ವಿಕ್ಟರಿ ಬಳಿಕ ಪ್ರತಿಕ್ರಿಯಿಸಿದ್ದಾರೆ. ಅವರು ಆರ್‌ಜೆಡಿಯ ರೀಟಾ ಲಾಲ್ ರಾಯ್ ವಿರುದ್ಧ 29,133 ಮತಗಳ ಅಂತರದಿಂದ ಗೆದ್ದಿದ್ದಾರೆ.
ಸಿಎಂ ಸ್ಥಾನದಿಂದ ಗೇಟ್‌ಪಾಸ್ ಸಿಗುತ್ತಾ?
ನಿತೀಶ್ ಕುಮಾರ್ ಬಿಹಾರ ಸಿಎಂ ಆಗಿ ಸತತವಾಗಿ ಅಧಿಕಾರದಲ್ಲಿ ಇದ್ದಾರೆ. ಹೀಗಿದ್ದಾಗ ಪದೇ ಪದೇ ಕಿರಿಕ್ ಕೂಡ ನಡೆಯುತ್ತಲೇ ಇದೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ನಡುವೆ ಪದೇ ಪದೇ ಕಿರಿಕ್ ಆಗುತ್ತಲೇ ಇದೆ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಹೀಗಿದ್ದಾಗ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ ಸುಮಾರು 90 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಜಯದ ಹೊಸ್ತಿಲಲ್ಲಿ ಇದೆ. ಹಾಗೇ ನಿತೀಶ್ ಅವರ ಪಕ್ಷ ಕೂಡ ಸಾಕಷ್ಟು ಮುಂದೆ ಇದ್ದು, 80 ಸ್ಥಾನ ಗೆಲ್ಲುವ ಮುನ್ಸೂಚನೆ ಇದೆ. ಹೀಗಿದ್ದಾಗ ಸಿಎಂ ಯಾರು ಆಗ್ತಾರೆ? ಯಾವ ಪಕ್ಷಕ್ಕೆ ಸಿಎಂ ಸ್ಥಾನ ಸಿಗಲಿದೆ? ಎಂಬ ಪ್ರಶ್ನೆ ಮೂಡಿದೆ.
ಬಿಹಾರ ಫಲಿತಾಂಶ; ಮತದಾರರ ತೀರ್ಪಿಗೆ ತಲೆಬಾಗುತ್ತೇವೆ: ಡಿ.ಕೆ. ಶಿವಕುಮಾರ್
ಬಿಹಾರ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಿಹಾರ ಫಲಿತಾಂಶ ಪ್ರಭಾವ ಬೀರಲ್ಲ
ಬಿಹಾರ ನಾಯಕತ್ವಕ್ಕೂ, ಕರ್ನಾಟಕದ ನಾಯಕತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಬಿಹಾರದಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರಲ್ಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಇಂದು ಬಿಹಾರದ ಜನರು ಎನ್‌ಡಿಎಗೆ ಆಶೀರ್ವದಿಸಿದ್ದಾರೆ. ಬಿಹಾರದಲ್ಲಿ ಇದು ಐತಿಹಾಸಿಕ ಗೆಲುವು. ಯಾವುದೇ ಜಾತಿ ಅಥವಾ ಧರ್ಮವನ್ನು ನೋಡದೆ ಎನ್‌ಡಿಎ ಸರ್ಕಾರವು ಎಲ್ಲ ಫಲಾನುಭವಿಗಳಿಗೆ ಪ್ರಯೋಜನ ನೀಡಿವೆ. ಇಂತಹ ಹಲವು ಯೋಜನೆಗಳಿಂದ ಬಿಹಾರದ ಜನರು ನಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಬಿಹಾರ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೈಲಿನಲ್ಲಿರುವ ಜೆಡಿಯು ನಾಯಕ ಅನಂತ್ ಸಿಂಗ್ ಮೊಕಾಮಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿ ಅಭ್ಯರ್ಥಿ ಆರ್‌ಜೆಡಿ ಪಕ್ಷದ ವೀಣಾ ದೇವಿಯನ್ನು 28,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬೆಂಗಳೂರಿನಲ್ಲಿ ಆರ್.ಅಶೋಕ್ ಸಿಹಿ ಹಂಚಿ ಸಂಭ್ರಮ
ಬಿಹಾರದಲ್ಲಿ ಎನ್‌ಡಿ ಮುನ್ನಡೆ ಸಾಧಿಸಿದ್ದು, ಬಹುಮತದತ್ತ ಸಾಗಿದೆ. ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಟೋ ರಿಕ್ಷಾ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
ಬಿಹಾರ ಚುನಾವಣೆ ಆಘಾತ, ಕಾಂಗ್ರೆಸ್‌ನಲ್ಲಿ ದೊಡ್ಡ ಬದಲಾವಣೆ?
ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಬಿಹಾರದ ಚುನಾವಣಾ ಫಲಿತಾಂಶವು ಆಘಾತ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಉನ್ನತ ಮಟ್ಟದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ. ಹಾಗೇ ಮತ್ತೊಂದು ಕಡೆ ಕರ್ನಾಟಕ ಕಾಂಗ್ರೆಸ್ ನಾಯಕರಲ್ಲಿ ಕೂಡ ಬಿಹಾರ ಎಲೆಕ್ಷನ್ ಸೋಲು ಚಿಂತೆಯನ್ನು ಹುಟ್ಟಿಸಿದೆ. ಇದೆಲ್ಲವೂ ಮುಂಬರುವ ಚುನಾವಣೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
'ಬಿಹಾರದ ಜನರಿಂದ ಅಭಿವೃದ್ಧಿಗೆ ತಕ್ಕ ಪ್ರತಿಫಲ'
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಎನ್‌ಡಿಎ ಬಹುಮತದ ಗಡಿ ದಾಟಿದ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರತಿಕ್ರಿಯಿಸಿದ್ದಾರೆ. "ಬಿಹಾರದ ಜನರು ಎನ್‌ಡಿಎಗೆ ಬೆಂಬಲ ನೀಡಿದ ರೀತಿ ಐತಿಹಾಸಿಕವಾಗಿದೆ. ಡಬಲ್-ಎಂಜಿನ್ ಸರ್ಕಾರ ಮಾಡಿದ ಅಭಿವೃದ್ಧಿಗೆ ಬಿಹಾರದ ಜನ ತಕ್ಕ ಪ್ರತಿಫನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
Top Fight - ರಾಘೋಪುರ
ಸತೀಶ್ ಕುಮಾರ್
(ಬಿಜೆಪಿ)
Leading
ತೇಜಸ್ವಿ ಯಾದವ್
(ಆರ್ ಜೆ ಡಿ)
Trailing
ಮತಕಳ್ಳತನದ ಶಂಕೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಬಿಹಾರ ಚುನಾವಣೆಯಲ್ಲಿ ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ. ನಾನು ಇನ್ನೂ ಇದನ್ನು ಪೂರ್ತಿ ನೋಡಿಲ್ಲ ಪೂರ್ಣ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾಕೆ ಜನ ವೋಟ್ ಹಾಕಿಲ್ಲ ಅಂತ ಗೊತ್ತಿಲ್ಲ. ಎನ್‌ಡಿಎ ಯಾಕೆ ಇಷ್ಟು ದೊಡ್ಡ ಬಹುಮತದಲ್ಲಿದೆ ಎನ್ನುವುದು ತಿಳಿಯುತ್ತಿಲ್ಲ. ಈ ರಾಜ್ಯದಲ್ಲೂ ಮತಗಳ್ಳತನವಾಗಿದೆ. ಆದರೆ ನಾವು ಜನರ ತೀರ್ಪು ಒಪ್ಪಿಕೊಳ್ಳಬೇಕಿದೆ ಎಂದಿದ್ದಾರೆ. ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಸೋಲು ಖಚಿತವಾಗುತ್ತಿದ್ದಂತೆಯೇ ಇದೇ ಮಾತುಗಳನ್ನಾಡುತ್ತಿದ್ದಾರೆ.
200 ಸ್ಥಾನಗಳ ಭರ್ಜರಿ ಗೆಲುವಿನತ್ತ ಎನ್‌ಡಿಎ
ಭಾರತೀಯ ಚುನಾವಣಾ ಆಯೋಗದ ಇತ್ತೀಚಿನ ಅಪ್ಡೇಟ್ಸ್‌ಗಳ ಪ್ರಕಾರ, ಬಿಹಾರದಲ್ಲಿ ಎನ್‌ಡಿಎ ಭಾರಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎ ಇದೀಗ 200 ಸ್ಥಾನಗಳ ಸಮೀಪದಲ್ಲಿದೆ. ಆಡಳಿತಾರೂಢ ಮೈತ್ರಿಕೂಟವು ಪ್ರಸ್ತುತ 198 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಪ್ರತಿಸ್ಪರ್ಧಿ ಮಹಾಘಟಬಂಧನ್ ಮುಖಭಂಗ ಅನುಭವಿಸಿದೆ. NDA ಪ್ರಾರಂಭದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿದೆ. ಮಹಾಘಟಬಂಧನ್ ಕೇವಲ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರಿಂದ ಬಿಹಾರ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ.
Top Fight - ರಾಘೋಪುರ
ತೇಜಸ್ವಿ ಯಾದವ್
(ಆರ್ ಜೆ ಡಿ)
Leading
ಸತೀಶ್ ಕುಮಾರ್
(ಬಿಜೆಪಿ)
Trailing
Top Fight - ರಾಘೋಪುರ
ಸತೀಶ್ ಕುಮಾರ್
(ಬಿಜೆಪಿ)
Leading
ತೇಜಸ್ವಿ ಯಾದವ್
(ಆರ್ ಜೆ ಡಿ)
Trailing
ನಿತೀಶ್ ಕುಮಾರ್ ವರ್ಚಸ್ಸು ಕಾರಣ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಇದು ನಿತೀಶ್ ಕುಮಾರ್ ಅವರ ವರ್ಚಸ್ಸಿಗೆ ಸಂದಿರುವ ಜಯ ಎಂದು ಜೆಡಿಯು ಹೇಳಿದೆ. ಈ ಜನಾದೇಶ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 'ವರ್ಚಸ್ವಿ ನಾಯಕತ್ವ'ದ ಪರಿಣಾಮವಾಗಿದೆ ಎಂದು JDU ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಚುನಾವಣೆ ಪ್ರಾರಂಭವಾಗುವ ಮೊದಲೇ JD(U) ಸುಮಾರು 80 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಲಾಗಿತ್ತು. ನಿತೀಶ್ ಕುಮಾರ್ ಅವರ ವರ್ಚಸ್ವಿ ನಾಯಕತ್ವದಿಂದಾಗಿ ಇದು ಸಾಧ್ಯವಾಯಿತು. ಬಿಹಾರದಲ್ಲಿ ಅವರು ಬಂಪರ್ ಗೆಲುವು ಸಾಧಿಸುತ್ತಾರೆ ಎಂದು RJD ಹೇಳುತ್ತಿತ್ತು. ಆದರೆ ಫಲಿತಾಂಶಗಳು ಬಂದಾಗ ಚುನಾವಣಾ ಆಯೋಗದ ತಪ್ಪಿದೆ, EVMಗಳು ದೋಷಪೂರಿತವಾಗಿವೆ ಹಾಗೂ SIR ತಪ್ಪಿದೆ ಎನ್ನುತ್ತಾರೆ ಎಂದು ಅವರು ಇಂಡಿಯಾ ಮೈತ್ರಿ ಕೂಟದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಅಲಿನಗರದಲ್ಲಿ ಮೈಥಿಲಿ ಠಾಕೂರ್ ಮುನ್ನಡೆ, 8,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
ಬಿಹಾರ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿದ್ದು ಎನ್‌ಡಿಎ ಸ್ಪಷ್ಟ ಬಹುಮತ ಗಳಿಸುವ ಹಾದಿಯಲ್ಲಿದೆ. ಮೊದಲ ಬಾರಿ ಸ್ಪರ್ಧಿಸಿರುವ ಮತ್ತು ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅಲಿನಗರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 11:47ರ ಸುಮಾರಿಗೆ ಅವರು ಆರ್‌ಜೆಡಿಯ ಬಿನೋದ್ ಮಿಶ್ರಾ ಅವರನ್ನು ಹಿಂದಿಕ್ಕಿ 8,000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.

-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications