Bihar Election 2025: ಬಿಹಾರ ವಿಧಾನಸಭೆ ಚುನಾವಣೆ ಪ್ರಣಾಳಿಕೆ: ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ, ಸರ್ಕಾರಿ ಉದ್ಯೋಗ!

Bihar Election 2025: ಬಿಹಾರ ವಿಧಾನಸಭೆ ಚುನಾವಣೆಯು ಹಲವು ಕಾರಣಗಳಿಗೆ ಚರ್ಚೆ ಆಗುತ್ತಿದೆ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಗೆಲ್ಲುವ ಪಕ್ಷಗಳು ಕೇಂದ್ರದಲ್ಲಿ ಸರಾಗವಾಗಿ ಅಧಿಕಾರಕ್ಕೇರುವುದು ಇದೆ. ಅಲ್ಲದೇ ಈ ಬಾರಿ ಮೈತ್ರಿ ಬದಲಾವಣೆ ಹಾಗೂ ಆಡಳಿತ ವಿರೋಧಿ ಅಲೆ ಸೇರಿದಂತೆ ಹಲವು ಕಾರಣಗಳಿಗೆ ಬಿಹಾರ ವಿಧಾನಸಭೆ ಚುನಾವಣೆ 2025ರ ಮೇಲೆ ಎಲ್ಲರ ಕಣ್ಣುನೆಟ್ಟಿದೆ. ಇನ್ನು ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯು ಕರ್ನಾಟಕದ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕದ ರಾಜಕಾರಣಿಗಳು ಸಹ ಈ ರಾಜ್ಯದ ಚುನಾವಣೆಯ ಮೇಲೆ ಕಣ್ಣಿರಿಸಿದ್ದಾರೆ.

ಬಿಹಾರದ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಈ ಹಿಂದಿನ ಯಾವುದೇ ವಿಧಾನಸಭೆ ಚುನಾವಣೆಯಲ್ಲಿ ನಡೆಯದಂತಹ ಪ್ರಮುಖ ವಿಚಾರಗಳು ಚರ್ಚೆ ಆಗುತ್ತಿವೆ. ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‌ನ (ಮೈತ್ರಿ ಪಕ್ಷಗಳ) ಚುನಾವಣೆ ಪ್ರಣಾಳಿಕೆಗಳು ಗಂಭೀರವಾರ ಪ್ರಶ್ನೆಯನ್ನು ಸೃಷ್ಟಿಸಿವೆ. ಅಧಿಕಾರಕ್ಕೆ ಬಂದರೆ ಬಿಹಾರದ ಪ್ರತಿ ಮನೆಯಿಂದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಮಹಾಘಟಬಂಧನ್ ಪ್ರಣಳಿಕೆಯಲ್ಲಿ ಹೇಳಿದ್ದು ಇದು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಮಹಾಘಟಬಂಧನ್ ಚುನಾವಣೆ ಪ್ರಣಳಿಕೆಯಲ್ಲಿ ಏನಿದೆ, ಕರ್ನಾಟಕ ಮಾದರಿಯ ಯಾವ ಗ್ಯಾರಂಟಿ ಯೋಜನೆಯನ್ನು ಇದರಲ್ಲಿ ಸೇರಿಸಲಾಗಿದೆ ಎನ್ನುವ ವಿವರ ನೋಡೋಣ.

Bihar Election 2025 Parties Promise Karnataka-Model Guarantee Schemes and Govnt Jobs in Manifesto

ಮುಂದಿನ ತಿಂಗಳು ಬಿಹಾರದ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾಘಟಬಂಧನ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ಪ್ರಮುಖ ಪ್ರಣಾಳಿಕೆಗಳು ಇದೀಗ ಕೆಲವೊಂದು ಗಂಭೀರವಾದ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬಂದರೆ, 20 ದಿನಗಳಲ್ಲಿ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ, 200 ಯೂನಿಟ್ ಉಚಿತ ವಿದ್ಯುತ್, ವಕ್ಫ್ ತಿದ್ದುಪಡಿ ಮಸೂದೆಯನ್ನು ತಡೆ. ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಹಾಗೂ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳ ಖರೀದಿ ಎನ್ನುವ ಪ್ರಮುಖ ಘೋಷಣೆಗಳು ಪ್ರಮುಖವಾಗಿ ಸೇರಿವೆ. ಒಟ್ಟು 25 ಪ್ರಮುಖ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗಿದೆ.

ತೇಜಸ್ವಿ ಪ್ರಾಣ್ ಪಾತ್ರ ಎನ್ನುವ ಶೀರ್ಷಿಕೆಯೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಹಾರ ರಾಜ್ಯವನ್ನು ಅಪರಾಧ ಮುಕ್ತ ಮಾಡುವುದಾಗಿಯೂ ಹೇಳಲಾಗಿದೆ.

* ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ 20 ದಿನಗಳಲ್ಲಿ ರಾಜ್ಯದ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ. ಈ ಸಂಬಂಧ ಕಾಯ್ದೆಗೆ ಅನುಮೋದನೆ ಪಡೆಯಲಾಗುವುದು.

* ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್.

* ಹಳೆಯ ಪಿಂಚಣಿ ಯೋಜನೆ ಜಾರಿ.

* ಮೈ-ಬೆಹೆನ್ ಮಾನ್ ಯೋಜನೆ: ಡಿಸೆಂಬರ್ 1ರಿಂದ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ.

* 5 ವರ್ಷಗಳವರೆಗೆ ವರ್ಷಕ್ಕೆ 30,000 ರೂಪಾಯಿ ಆರ್ಥಿಕ ನೆರವು.

* ವಕ್ಫ್ ತಿದ್ದುಪಡಿ ಮಸೂದೆಯನ್ನು ತಡೆ.

* ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳ ಖರೀದಿ.

* ಪರಿಶಿಷ್ಟ ಜಾತಿಗಳಿಗೆ ಮಿತಿಯನ್ನು ಶೇ. 16ರಿಂದ 20ಕ್ಕೆ ಹೆಚ್ಚಿಸಲಾಗುವುದು.

* ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯಲ್ಲಿ ಹೆಚ್ಚಳ ಕಲ್ಪಿಸಲಾಗುವುದು.

* ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಸೇರಿದಂತೆ ಹಲವು ಪ್ರಮುಖ ಭರವಸೆಗಳನ್ನು ಬಿಹಾರದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+