People Pulse Exit Poll: ಬಿಹಾರದಲ್ಲಿ ಬಿಜೆಪಿಗೆ ಜಯ, ಇಂಡಿಯಾ ಮೈತ್ರಿಕೂಟಕ್ಕೆ ಪರಾಜಯ! ಸಿಕ್ಕ ಸೀಟುಗಳೆಷ್ಟು?
Bihar Election Exit Poll 2025: ಬಿಹಾರ ರಾಜ್ಯದ ಬಹುನಿರೀಕ್ಷೆಯ 2025ರ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. People Pulse Exit Poll 2025 ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ಅದರ ಪ್ರಕಾರ, ಬಿಹಾರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜನರು ಆಶಿರ್ವಾದ ಮಾಡಿದ್ದಾರೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ಜನ ತಿರಸ್ಕೃರಿಸಿದ್ದಾರೆ. ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಕ್ಕಿವೆ ಎಂಬ ಮಾಹಿತಿ ಇಲ್ಲಿದೆ.
People Pulse Exit Poll 2025 ಪ್ರಕಾರ, ಎನ್‌ಡಿಗೆ ಗೆ ಈ ಬಾರಿಯು ಪ್ರಚಂಡ ಬಹುಮತ ಅಂದರೆ 133 ರಿಂದ159 ಸ್ಥಾನಗಳಲ್ಲಿ ಗೆಲ್ಲಲಿದೆ. ಉಳಿದಂತೆ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಮೈತ್ರಿಕೂಟಕ್ಕೆ ಈ ಬಾರಿ ಅಧಿಕಾರ ಹಿಡಿಯುವ ಆಸೆ ನಿರಾಸೆಯಾಗಿದೆ. ಕೇವಲ 75 ರಿಂದ 101 ಸೀಟು ಪಡೆದು ಹಿನ್ನಡೆ ಅನುಭವಿಸಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

ಅಲ್ಲದೇ ಜನ್ ಸೂರಜ್ ಪಕ್ಷ (ಜೆಎಸ್‌ಪಿ) ಸುಮಾರು 05 ಸೀಟು ಗಳಿಸಲಿದ್ದು, ಇತರ ಪಕ್ಷಗಳು ಒಟ್ಟಾರೆಯಾಗಿ 2-9 ಕ್ಷೇತ್ರಗಳಲ್ಲಿ ಮಾತ್ರ ಅರಳಲಿವೆ. ರಾಜ್ಯದಲ್ಲಿ ಎನ್‌ಡಿಎ ಮತ್ತೆ ಅಧಿಕಾರ ಹಿಡಿಯಲಿದೆ. ನಿತೀಶ್ ಕುಮಾರ್ ಅವರೇ ಮತ್ತೆ ಸಿಎಂ ಆಗಲಿದೆ ಎಂದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಆದರೆ ಅಧಿಕೃತ ಮತ್ತು ಅಂತಿಮ ಫಲಿತಾಂಶವನ್ನು ನವೆಂಬರ್ 11ರಂದು ಚುನಾವಣೆ ಆಯೋಗ ಬಿಡುಗಡೆ ಮಾಡಲಿದೆ. ಅದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ರಾಜ್ಯದಲ್ಲಿ ಒಟ್ಟು 7.42 ಕೋಟಿ ಮತದಾರರು ಎರಡು ಹಂತಗಳಲ್ಲಿ ಮತದಾನ ಮಾಡಿದ್ದಾರೆ. ಎರಡು ಹಂತಗಳ ಮತದಾನ ಇಂದು ನವೆಂಬರ್ 11ರಂದು ಮುಗಿದಿದೆ. ಎಲ್ಲರ ಚಿತ್ತ ನವೆಂಬರ್ 14ರಂದು ಬಿಡುಗಡೆ ಆಗಲಿರುವ ಅಧಿಕೃತ ಚುನಾವಣೆ ಫಲಿತಾಂಶ ಮೇಲಿದೆ. ಅದಕ್ಕೂ ಮೊದಲೇ ಇಂದು ವಿವಿಧ ಏಜೆನ್ಸಿಗಳು ಚುನಾವಣೋತ್ತರ (Bihar Exit Poll Results 2025) ಸಮೀಕ್ಷೆ ಪ್ರಕಟಿಸಿವೆ. ಇದರಲ್ಲಿ ಬಹುತೇಕ ಸಮೀಕ್ಷೆಗಳಿ ಎನ್‌ಡಿಗೆ ಜನಾರ್ಶಿವಾದ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಉಂಟಾಗಿತ್ತು. ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎನ್‌ಡಿಎ ನಾಯಕರು ಹೇಳಿದರು. ಈ ಬಾಗಿ ಇಂಡಿಯಾ ಕೂಟವು ಆಡಳಿತ ಪಕ್ಷವನ್ನು ಹಿಮ್ಮೆಟ್ಟಿಸಿ ಇತಿಹಾಸ ಸೃಷ್ಟಿಸಲಿದೆ. ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚಿನ ಅಂತದಲ್ಲಿ ಗೆದ್ದು ಬರುವ ವಿಶ್ವಾಸವನ್ನು "ಇಂಡಿಯಾ' ನಾಯಕರು ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಇದನ್ನು ಶ್ಲಾಘಿಸಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಕಾಸ್' (ಅಭಿವೃದ್ಧಿ) ಮತ್ತು 'ಸುಶಾಸನ್' (ಉತ್ತಮ ಆಡಳಿತ) ಇವು ಬಿಹಾರದಲ್ಲಿ ಚುನಾವಣಾ ವಿಷಯಗಳಾಗಿದ್ದವು. ಇದರ ಆಧಾರದಲ್ಲಿ ಎನ್‌ಡಿಎ ಸ್ಪರ್ಧೆಯಲ್ಲಿ ಗೆಲ್ಲುತ್ತದೆ ಎಂದು ಅವರು ಹೇಳಿದರು.












Click it and Unblock the Notifications