ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ

By Mahesh
|
Google Oneindia Kannada News

ಪಾಟ್ನ, ಏಪ್ರಿಲ್ 05: ಚುನಾವಣೆಗೂ ಮುನ್ನ ಮಹಿಳಾ ಮತದಾರರಿಗೆ ನೀಡಿದ್ದ ಭರವಸೆಯನ್ನು ನಿತೀಶ್ ಉಳಿಸಿಕೊಂಡಿದ್ದಾರೆ. ಬಿಹಾರದಲ್ಲಿ ಏಪ್ರಿಲ್ 01 ರಿಂದ ಮದ್ಯ ಮಾರಾಟವನ್ನು ಬಹುತೇಕ ನಿಷೇಧಿಸಿದ್ದ ನಿತೀಶ್ ಅವರು ಏಪ್ರಿಲ್ 05ರಿಂದ ಸಂಪೂರ್ಣ ನಿಷೇಧ ಘೋಷಿಸಿದ್ದಾರೆ.

ಮದ್ಯ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವೇ ಎಂಬ ಪ್ರಶ್ನೆಗೆ ನಿತೀಶ್ ಅವರು ಉತ್ತರ ನೀಡಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 4,000 ಕೋಟಿ ರು ತೆರಿಗೆ ಮೊತ್ತ ಮದ್ಯ ಮಾರಾಟದಿಂದ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿತ್ತು.

Bihar a dry State from April 05, 2016

ಆದರೆ, ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಲು ಜೆಡಿಯು-ಆರ್‌ಜೆಡಿ ಮೈತ್ರಿ ಸರ್ಕಾರ ನಿರ್ಧರಿಸಿದೆ.

ಸಮಾಜವಾದಿ ಸಿದ್ಧಾಂತದ ಜಯಪ್ರಕಾಶ್ ನಾರಾಯಣ್‌ರ ಗರಡಿಯಲ್ಲಿ ಪಳಗಿದ ಜೆಡಿಯು ಮುಖ್ಯಸ್ಥ ನಿತೀಶ್‌ಕುಮಾರ್ ಅವರ ಕ್ರಮಕ್ಕೆ ಮಿತ್ರ ಪಕ್ಷ ಆರ್ ಜೆ ಡಿ ಬೆಂಬಲ ವ್ಯಕ್ತಪಡಿಸಿದೆ. ಗುಜರಾತ್, ಕೇರಳ, ನಾಗಾಲ್ಯಾಂಡ್ ಬಳಿಕ ಈಗ ಬಿಹಾರ ಮದ್ಯ ನಿಷೇಧಿಸಿದ ದೇಶದ ನಾಲ್ಕನೇ ರಾಜ್ಯವಾಗಿದೆ.

ಆರ್ಮಿ ಕಂಟೋನ್ಮೆಂಟ್ ನಲ್ಲಿ ನಿಷೇಧವಿಲ್ಲ: ನಗರ, ಪಟ್ಟಣಗಳಲ್ಲಿ ಹೋಟೆಲ್, ಬಾರ್, ಕ್ಲಬ್ ಸೇರಿದಂತೆ ಯಾವುದೇ ಸಂಸ್ಥೆಗಳಿಗೆ ಆಲ್ಕೋಹಾಲ್ ಮಾರಾಟ ಹಾಗೂ ಸೇವನೆಗೆ ಲೈಸನ್ಸ್ ನೀಡಲಾಗುವುದಿಲ್ಲ. ಆದರೆ, ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಮಾತ್ರ ಯಾವುದೇ ನಿಷೇಧ ಇರುವುದಿಲ್ಲ. ಈ ಬಗ್ಗೆ ಅವರೇ ಸೂಕ್ತ ನಿಯಮ ಜಾರಿಗೊಳಿಸಲಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಸದ್ಯಕ್ಕೆ ಸಿಕ್ಕ ಮಾಹಿತಿಯಂತೆ ಬಿಹಾರ್ ರಾಜ್ಯ ಬ್ರಿವರೇಷಸ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಸ್ ಬಿಸಿಎಲ್) ಗೋದಾಮಿನಲ್ಲಿ 36,000 ಲೀಟರ್ ಗಳಷ್ಟು ವಿದೇಶಿ ಮದ್ಯ ಶೇಖರಣೆ ಇದೆ. ಇದನ್ನು ವಿತರಣೆ ಮಾಡಲು ಅಬಕಾರಿ ಇಲಾಖೆ ಸೂಕ್ತ ಕ್ರಮ ಜರುಗಿಸಲಿದೆ.


(ಪಿಟಿಐ)

English summary
The Nitish Kumar led government had banned sale and consumption of country and spiced liquor in rural areas from April 1 this year.Four days after promulgation of partial prohibition in Bihar on April 1, the Nitish Kumar government on Tuesday decided to impose a total ban on alcohol in towns and cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X