Chandrayaan-3: ಇಸ್ರೋಗೆ ಸಿಗದ ಸಂದೇಶ, ರೋವರ್ ಕಥೆ ಏನಾಯ್ತು?
ಚಂದ್ರನ ಮೇಲೆ ಬೆಚ್ಚಗೆ ಮಲಗಿರುವ ಇಸ್ರೋ ಸಂಸ್ಥೆಯ 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಚಂದ್ರನ ಮೇಲೆ ಸೂರ್ಯ ಮುಳುಗಿದ ನಂತರ ಲ್ಯಾಂಡರ್ & ರೋವರ್ ನಿದ್ರಾವಸ್ಥೆಗೆ ಜಾರಿದ್ದವು. ಆದರೆ ಈಗ ಮತ್ತೆ ಚಂದ್ರನ ಮೇಲೆ ಬೆಳಕು ಹರಿಯುತ್ತಿದ್ದು, ಅಲ್ಲಿ ಸೂರ್ಯ ಉದಯಿಸಿದ್ದಾನೆ. ಇಸ್ರೋ ಸಂಸ್ಥೆ ಅಲರ್ಟ್ ಆಗಿದೆ. ಹಾಗೇ ಮಹತ್ವದ ಮಾಹಿತಿಯೂ ಸಿಕ್ಕಿದೆ.
ಚಂದ್ರನ ಮೇಲೆ ವಾತಾವರಣ ಇಲ್ಲ, ಹೀಗಾಗಿ ಚಂದ್ರನ ಮೇಲೆ ಸೂರ್ಯ ಮುಳುಗಿದ ನಂತರ ಚಳಿ ತಡೆಯಲು ಆಗುವುದಿಲ್ಲ. ಹೀಗಾಗಿ ಅಲ್ಲಿ ಕಾರ್ಯನಿರ್ವಹಿಸಲು ಹೆಚ್ಚು ಶಕ್ತಿ ಅಗತ್ಯ. ಇದೇ ಕಾರಣಕ್ಕೆ ಲ್ಯಾಂಡರ್ & ರೋವರ್ ನಿದ್ರಾವಸ್ಥೆಗೆ ಜಾರಿದ್ದವು. ಈ ವೇಳೆ ಮತ್ತೆ ಶುಕ್ರವಾರ ಚಂದ್ರನ ಮೇಲೆ ಸೂರ್ಯೋದಯ ಆಗಿದೆ. ಹೀಗಾಗಿ ಲ್ಯಾಂಡರ್, ರೋವರ್ ನಿದ್ದೆಯಿಂದ ಎದ್ದೇಳಬೇಕಿತ್ತು. ಆದರೆ ಇಸ್ರೋ ಕಳುಹಿಸಿದ ಸಿಗ್ನಲ್‌ಗೆ ಇನ್ನು ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಇಸ್ರೋ ಸಂಸ್ಥೆ ಹೇಳಿದ್ದು ಏನು?
ಅಷ್ಟಕ್ಕೂ ಇಂದು ಮಧ್ಯಾಹ್ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕರಾದ ನೀಲೇಶ್ ದೇಸಾಯಿ ಅವರು, ರೋವರ್ ಮತ್ತು ಲ್ಯಾಂಡರ್ ಎಚ್ಚರಿಸುವ ಕಾರ್ಯ ಒಂದು ದಿನ ಮುಂದಕ್ಕೆ ಹೋಗಿದೆ ಎಂದಿದ್ದರು. ಆದರೆ ಇಂದು ಸಂಜೆ ಹೊಸ ಮಾಹಿತಿ ನೀಡಿರುವ ಇಸ್ರೋ ಸಂಸ್ಥೆ, 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್ ಎಚ್ಚರಗೊಂಡ ಸ್ಥಿತಿ ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಆರಂಭಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಿಗ್ನಲ್ ಬಂದಿಲ್ಲ. ಹೀಗಾಗಿ ಸಂಪರ್ಕ ಮರು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯಲಿವೆ ಎಂದಿದೆ.
Chandrayaan-3 Mission:
— ISRO (@isro) September 22, 2023
Efforts have been made to establish communication with the Vikram lander and Pragyan rover to ascertain their wake-up condition.
As of now, no signals have been received from them.
Efforts to establish contact will continue.
ಚಂದ್ರನ ದಕ್ಷಿಣ ಧ್ರುವದ ಮೇಲೆ ಯಾವುದೇ ದೇಶ ಈವರೆಗೂ ಲ್ಯಾಂಡರ್ ಇಳಿಸಿಲ್ಲ. ಭಾರತವೇ ಈ ಸಾಧನೆ ಮಾಡಿದ ಮೊದಲ ದೇಶವಾಗಿತ್ತು. ಭಾರತ ಇದೀಗ ಮತ್ತೊಮ್ಮೆ ಚಂದ್ರನ ಮೇಲೆ ಮಲಗಿರುವ ರೋವರ್ & ಲ್ಯಾಂಡರ್ ಎದ್ದೇಳಿಸಲು ಯಶಸ್ವಿಯಾದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಈ ರೀತಿ ಕಾರ್ಯ ಮಾಡುತ್ತಿರುವ ಮೊದಲ ದೇಶ ಎಂಬ ಹೆಗ್ಗಳಿಕೆ ಕೂಡ ಭಾರತಕ್ಕೆ ಸಿಗಲಿದೆ. ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ಹಗಲು ರಾತ್ರಿ ಶ್ರಮವಹಿಸಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಆಗಸ್ಟ್ 23ರಂದು ಲ್ಯಾಂಡ್ ಆಗಿತ್ತು
ಹೌದು, ಇಸ್ರೋ ಆಗಸ್ಟ್ 23ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಚಂದ್ರಯಾನ-2 ಎಡವಟ್ಟು ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸಿತ್ತು. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು. ಇದಿಷ್ಟೇ ಅಲ್ಲದೆ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಲ್ಯಾಂಡರ್ & ರೋವರ್ ಒಳಗೆ ಇದೆ. ಹೀಗಾಗಿ ಮತ್ತೊಂದು ಅಧ್ಯಯನಕ್ಕೆ ಭಾರತ ಸಜ್ಜಾಗಿದೆ. ಶನಿವಾರದ ಒಳಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ.
ಚಂದ್ರನ ಮೇಲೆ ಏನೆಲ್ಲಾ ಇದೆ?
ಈಗಾಗಲೇ ಪ್ರಗ್ಯಾನ್ ರೋವರ್ ನೀಡಿರುವ ಮಾಹಿತಿಯ ಪ್ರಕಾರ, ಚಂದ್ರನ ದಕ್ಷಿಣದಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe) ಸೇರಿದಂತೆ ಕ್ರೋಮಿಯಂ (Cr), ಟೈಟಾನಿಯಂ (Ti) ಇದೆ. ಇದಲ್ಲದೆ ಮ್ಯಾಂಗನೀಸ್ (Mn), ಸಿಲಿಕಾನ್ (Si), ಆಮ್ಲಜನಕ (O) ಕೂಡ ಇರುವುದು ಗೊತ್ತಾಗಿದೆ. ಆದರೆ ನೀರು ಹುಡುಕುವ ಕೆಲಸ ನಡೆಯಬೇಕು. ಚಂದ್ರನ ಮೇಲೆ ನೀರು ಸಿಕ್ಕರೆ ಇಸ್ರೋ ಮಾತ್ರವಲ್ಲ ಮನುಷ್ಯನೇ ಗೆದ್ದಂತೆ.
ಇದೀಗ ಇಸ್ರೋ ಸಂಸ್ಥೆ ನಿದ್ದೆಯಲ್ಲಿರುವ ರೋವರ್ & ಲ್ಯಾಂಡರ್ ನಿದ್ದೆಯಿಂದ ಎದ್ದೇಳುವಂತೆ ಮಾಡಿ, ಅಧ್ಯಯನ ನಡೆಸಲು ಆರಂಭಿಸಿದರೆ ಆ ಕೆಲಸ ಪೂರ್ತಿ ಆಗಲಿದೆ. ನೀರು ಹುಡುಕುವ ಕೆಲಸ ಪೂರ್ಣವಾದರೆ ಭಾರತದ ಯೋಜನೆ ಹೊಸ ಇತಿಹಾಸ ನಿರ್ಮಿಸಿದಂತೆ. ಹೀಗೆ ಹೊಸ ಇತಿಹಾಸ ನಿರ್ಮಿಸಲು ಇಸ್ರೋಗೆ ಮತ್ತೊಂದು ಉತ್ತಮ ಅವಕಾಶ ಸಿಕ್ಕಿದೆ. ಈ ಕೆಲಸ ಮಾಡಿದರೆ ಭವಿಷ್ಯದಲ್ಲಿ ಮನುಷ್ಯರು ಚಂದ್ರನ ಮೇಲೆ ವಾಸಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications