FASTag: ಕೇಂದ್ರ ಸರ್ಕಾರದಿಂದ ಫಾಸ್ಟ್ಯಾಗ್ ಇಲ್ಲದವರಿಗೂ ಭರ್ಜರಿ ಸಿಹಿ ಸುದ್ದಿ
FASTag: ವಾಹನ ಸವಾರರಿಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ಆಗಾಗ ಯೋಜನೆಗಳನ್ನು ರೂಪಿಸಲಿರುತ್ತದೆ. ಹಾಗೆಯೇ ಇದೀಗ ಫಾಸ್ಟ್ಯಾಗ್ ಇಲ್ಲದವರಿಗೂ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಇದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಫಾಸ್ಟ್ಯಾಗ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಫಾಸ್ಟ್ಯಾಗ್ ಇಲ್ಲದವರಿಗೆ ಶುಭಸುದ್ದಿ ನೀಡಿದ್ದು, ನವೆಂಬರ್ 15ರಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ಈ ನಿಯಮ ಪಾಲನೆ ಮಾಡಿದ್ರೆ, ದುಪ್ಪಟ್ಟು ಹಣ ಪಾವತಿ ಮಾಡಬೇಕಿಲ್ಲ.

ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ಟೋಲ್‌ಗಳಲ್ಲಿ ಇನ್ಮುಂದೆ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಯುಪಿಐ ಪಾವತಿಗೆ ಮಾತ್ರ ಈ ನಿಯಮ ಅನ್ವಯ ಆಗಲಿದೆ. ಇದು ಮುಂಬರುವ ನವೆಂಬರ್ 15ರಿಂದ ಜಾರಿಗೆ ಬರಲಿದೆ. ನಗದು ರೂಪದಲ್ಲಿ ಪಾವತಿಸುವವರು ದುಪ್ಪಟ್ಟು ಹಣವನ್ನೇ ಪಾವತಿ ಮಾಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದೆ.
ಫಾಸ್ಟ್ಯಾಗ್ ಇಲ್ಲದ ವಾಹನ ಸವಾರರಿಗೆ ಅವರ ಪಾವತಿ ವಿಧಾನವನ್ನು ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಿದೆ. ಇದರ ಉದ್ದೇಶ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮತ್ತು ಟೋಲ್ ಪ್ಲಾಜಾಗಳಲ್ಲಿ ನಗದು ಬಳಕೆಯನ್ನು ಕಡಿಮೆ ಮಾಡುವುದಾಗಿದೆ.
ಫಾಸ್ಟ್‌ಟ್ಯಾಗ್ ಇಲ್ಲದವರು ನಗದು ರೂಪದಲ್ಲಿ ಪಾವತಿ ಆಯ್ಕೆ ಮಾಡಿಕೊಂಡರೆ ಟೋಲ್ ಶುಲ್ಕವನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಆದರೆ, ಯುಪಿಐ ಮೂಲಕ ಪಾವತಿ ಮಾಡಿದ್ರೆ, ಶುಲ್ಕದ 1.25 ಪಟ್ಟು ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ. ಈ ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ಕಾರ್ಯನಿವರ್ಹಿಸದ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳು ಈಗ ಯುಪಿಐ ಬಳಸಿ ಪಾವತಿಸಿದರೆ, ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಬದಲು 1.25 ಪಟ್ಟು ಟೋಲ್ ಪಾವತಿ ಮಾಡಬೇಕಾಗುತ್ತದೆ.
ಉದಾಹರಣೆಗೆ ಹೇಳೋದಾದ್ರೆ, ವಾಹನದ ಟೋಲ್ ಶುಲ್ಕ 100 ರೂಪಾಯಿ ಆಗಿದ್ದರೆ, ಮೊದಲು ಫಾಸ್ಟ್‌ಟ್ಯಾಗ್ ಇಲ್ಲದವರು 200 ರೂಪಾಯಿ ಪಾವತಿಸಬೇಕಿತ್ತು. ಆದರೆ, ಇದೀಗ ಯುಪಿ ಮೂಲಕ ಪಾವತಿ ಮಾಡಿದರೆ, 125 ರೂಪಾಯಿ ಮಾತ್ರ ಪಾವತಿಸಬೇಕಾಗುತ್ತದೆ. ಇಲ್ಲದಿದ್ರೆ, ಹೆಚ್ಚುವರಿ ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ ಎಂದು ತಿಳಿಸಿದೆ. ಇದೀಗ ಡಿಜಿಟಲ್ ಯಗ ಆಗಿದ್ದು, ಪಾವತಿಯನ್ನು ಸಂಪೂರ್ಣವಾಗಿ ಡಿಜಿಟಲ್ ಮೂಲಕ ಮಾಡಲು ಕೇಂದ್ರ ಸರ್ಕಾರ ಹೊರಟಿದೆ.
ಅದರಲ್ಲೂ ಟೋಲ್ ಪ್ಲಾಜಾಗಳಲ್ಲಿ ಇಷ್ಟು ದಿನ ಫಾಸ್ಟ್ಯಾಗ್ ಇಲ್ಲದವರು ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಿತ್ತು. ಇದೀಗ ಕೇಂದ್ರ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸಿ, ಫಾಸ್ಟ್ಯಾಗ್ ಇಲ್ಲದ ವಾಹನ ಸವಾರರ ಮೇಲೆ ಬೀಳುತ್ತಿದ್ದ ದುಪ್ಟಟ್ಟು ಶುಲ್ಕಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಈ ಮೂಲಕ ಎಲ್ಲಾ ಟೋಲ್‌ಗಳಲ್ಲೂ ಕೂಡ ಡಿಜಿಟಲ್ ಪಾವತಿ ತರಲು ಮುಂದಾಗಿದೆ.
ಮತ್ತೊಂದೆಡೆ, ಟೋಲ್ ಪ್ಲಾಜಾಗಳಲ್ಲಿ ತಾಂತ್ರಿಕ ದೋಷವಿದ್ದು ಫಾಸ್ಟ್ಯಾಗ್ ಸ್ಕ್ಯಾನ್ ಆಗದಿದ್ದರೆ ವಾಹನ ಸವಾರರು ಯಾವುದೇ ಹಣ ಪಾವತಿ ಮಾಡುವಂತಿಲ್ಲ ಎನ್ನುವ ನಿಯಮ ಇದೆ. ಆದರೆ, ಟೋಲ್‌ಗಳಲ್ಲಿ ಯಾರೂ ಪ್ರಶ್ನೆ ಮಾಡುವವರೇ ಇಲ್ಲ ಅಂತಾ ಹೇಳಿ ತಮ್ಮ ತಪ್ಪಿದ್ದರೂ ಸಹ ಈ ನಿಯಮವನ್ನು ಉಲ್ಲಂಘನೆ ಮಾಡಿ ವಾಹನ ಸವಾರರ ಬಳಿ ಹಣ ಪೀಕುತ್ತಿದ್ದಾರೆ. ಅಲ್ಲದೆ, ಹೆದ್ದಾರಿ ಕಾಮಗಾರಿ ಹಂತದಲ್ಲಿದ್ದರೂ ಸಹ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಕಡಿವಾಣ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.












Click it and Unblock the Notifications