
ರಾಜಸ್ಥಾನಕ್ಕೆ ಭಾರತ್ ಜೋಡೋ ಪ್ರವೇಶ: ಕೈ ಕೈ ಹಿಡಿದು ನೃತ್ಯ ಮಾಡಿದ 'ಕೈ' ನಾಯಕರು
ಜೈಪುರ ಡಿಸೆಂಬರ್ 4: ರಾಜಸ್ಥಾನಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸುತ್ತಿದ್ದಂತೆ ಸಿಎಂ ಗೆಹ್ಲೋಟ್, ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈ ಕೈ ಹಿಡಿದು ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ. ಜಲಾವರ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿ ಬುಡಕಟ್ಟು ತಂಡವೇದಿಕೆ ಮೇಲೆ ನೃತ್ಯ ಮಾಡಿತು. ಈ ವೇಳೆ ರಾಹುಲ್ ಗಾಂಧಿಯೊಂದಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೈ ಜೋಡಿಸಿದರು. ಎಲ್ಲಾ ಕಾಂಗ್ರೆಸ್ ನಾಯಕರು ಕೈ ಕೈ ಹಿಡಿದು ನೃತ್ಯ ಮಾಡಿದ್ದು ಕಂಡುಬಂದಿದೆ.
ಬುಡಕಟ್ಟು ಜನಾಂಗದ ನೃತ್ಯ ತಂಡ ವೇದಿಕೆಯಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕ ಕಮಲ್ ನಾಥ್ ಸಹ ವೇದಿಕೆಯಲ್ಲಿ ಇತರರೊಂದಿಗೆ ಸೇರಿಕೊಂಡರು.
ರಾಹುಲ್ ಗಾಂಧಿ ರಾಜಸ್ಥಾನಕ್ಕೆ ಆಗಮಿಸುವ ಮೊದಲು, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬೆಂಬಲಿಗರ ನಡುವೆ ರಾಜ್ಯದಲ್ಲಿ ಪೋಸ್ಟರ್ ವಾರ್ ನಡೆದಿತ್ತು. ಆದರೆ ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಒಂದು ದಿನ ಬದಿಗಿಟ್ಟಂತೆ ತೋರುತ್ತಿದೆ.
#WATCH | Congress MP Rahul Gandhi, Rajasthan CM Ashok Gehlot & party leaders Sachin Pilot and Kamal Nath take part in a tribal dance in Jhalawar, Rajasthan. pic.twitter.com/18NgWYrWrk
— ANI (@ANI) December 4, 2022
ರಾಜಸ್ಥಾನದ ಝಲಾವರ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅನ್ನು ಮಹಾತ್ಮಾ ಗಾಂಧಿಯವರ ಪಕ್ಷ ಎಂದು ಕರೆದರು. "ಇದು ಮಹಾತ್ಮಾ ಗಾಂಧಿಯವರ ಪಕ್ಷ, ಸಾವರ್ಕರ್ ಅಥವಾ ಗೋಡ್ಸೆಯದ್ದಲ್ಲ. ನಮಗೆ ಹೇಗೆ ಕಷ್ಟಪಟ್ಟು ಕೆಲಸ ಮಾಡಬೇಕೆಂದು ತಿಳಿದಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
स्वागत, संगीत और सेल्फी।#भारत_जोड़ो_संग_म्हारो_राजस्थान pic.twitter.com/f7g3Ywth9Q
— Congress (@INCIndia) December 4, 2022
ನಾವು ಬಿಜೆಪಿ ಅಥವಾ ಆರ್‌ಎಸ್‌ಎಸ್ ಅನ್ನು ದ್ವೇಷಿಸುವುದಿಲ್ಲ. ಆದರೆ ದೇಶವನ್ನು ಭಯದಲ್ಲಿ ಬದುಕಲು ಬಿಡುವುದಿಲ್ಲ. ಹಣದುಬ್ಬರ ಹೆಚ್ಚುತ್ತಿದೆ ಆದರೆ ಸಂಪೂರ್ಣ ಹಣವು ಮೂರರಿಂದ ನಾಲ್ಕು ಕೈಗಾರಿಕೋದ್ಯಮಿಗಳಿಗೆ ಹೋಗುತ್ತಿದೆ. ಇದು ಸರಿಯಲ್ಲ ಎಂದು ಅವರು ಹೇಳಿದರು.