ಮಾನವನ ಮೇಲೆ 'ಕೋವ್ಯಾಕ್ಸಿನ್' ಪ್ರಯೋಗ ಆರಂಭಿಸಿದ ಭಾರತ್ ಬಯೋಟೆಕ್

ನವದೆಹಲಿ, ಜುಲೈ 17: ಮಾನವನ ಮೇಲೆ ಕೊವಿಡ್ ಲಸಿಕೆ ಕೋವ್ಯಾಕ್ಸಿನ್ ಪ್ರಯೋಗವನ್ನು ಭಾರತ್ ಬಯೋಟೆಕ್ ಆರಂಭಿಸಿದೆ.

Recommended Video

      Yeddyurappa Government Fail Again!! | Oneindia Kannada

      ಅದು ರೋಟಕ್‌ನಲ್ಲಿರುವ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಶುಕ್ರವಾರ ಪ್ರಯೋಗ ಆರಂಭಿಸಿದೆ. ಮೊದಲ ಬಾರಿಗೆ ಮನುಷ್ಯನ ಮೇಲೆ ಪ್ರಯೋಗ ನಡೆಯುತ್ತಿದೆ.

      ಈ ಕುರಿತು ಹಿರಿಯ ಪ್ರೊಫೆಸರ್ ಧ್ರುವ ಚೌದರಿ ಮಾಹಿತಿ ನೀಡಿದ್ದು, ಒಟ್ಟು 8 ಮಂದಿ ರೋಗಿಗಳಲ್ಲಿ ಮೂರು ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

      Bharat Biotech Starts Human Trial Of Anti-COVID Vaccine

      ಅವರನ್ನು ಬಿಡುಗಡೆಗೊಳಿಸುವ ಮೊದಲು ಎರಡು ಗಂಟೆಯ ಕಾಲ ತೀವ್ರ ನಿಗಾದಲ್ಲಿಡಲಾಗಿತ್ತು. ಅವರಿಂದ ಯಾವುದೇ ದೂರುಗಳು ಬಂದಿಲ್ಲ. ಒಂದೊಮ್ಮೆ ಯಾವುದೇ ರೀತಿಯ ಅಲರ್ಜಿ ಉಂಟಾದರೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತದೆ.

      ಈ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಇದೇ ಮೊದಲ ಬಾರಿಗೆ ಮಾನವನ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ.
      ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜಿ ಟ್ವೀಟ್ ಮಾಡಿ, ಕೋವ್ಯಾಕ್ಸಿನ್ ಮೊದಲ ಬಾರಿಗೆ ಮಾನವನ ಮೇಲೆ ಪ್ರಯೋಗಿಸಲಾಗಿದೆ, ಯಾವ ರೋಗಿಯ ಆರೋಗ್ಯದ ಮೇಲೂ ಅಡ್ಡ ಪರಿಣಾಮವನ್ನು ಬೀರಿಲ್ಲ ಎಂದು ಹೇಳಿದ್ದಾರೆ.

      ಭಾರತದಲ್ಲಿ ಬಹಳಷ್ಟು ಕಂಪನಿಗಳು ವ್ಯಾಕ್ಸಿನ್ ಅಭಿವೃದ್ದಿ ಪಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಈ ಪೈಕಿ ಭಾರತ್ ಬಯೋಟೆಕ್ ಜೊತೆಗೆ ಸೀರಂ ಇನಿಸ್ಟಿಟ್ಯೂಟ್, ಕ್ಯಾಡಿಲಾ ದಂತಹ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ.

      ಲಕ್ಷಾಂತರ ಮಂದಿ ವ್ಯಾಕ್ಸಿನ್ ಬಳಸುವ ಸಾಧ್ಯತೆಯ ಹಿನ್ನಲೆಯಲ್ಲಿ ಪ್ರತಿಕೂಲ ಪರಿಣಾಮ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡ ನಂತರವೇ ಲಸಿಕೆ ಬಿಡುಗಡೆ ಮಾಡಬೇಕು. ಜೊತೆಗೆ ರೋಗ ನಿರೋಧ ಶಕ್ತಿ ಹೆಚ್ಚಿಸಲಿದೆಯೇ ಇಲ್ಲವೊ ಎಂಬುದನ್ನು ಖಾತರಿಪಡಿಸಕೊಳ್ಳಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+