Get Updates
Get notified of breaking news, exclusive insights, and must-see stories!

Bharat Bandh: ಭಾರತ್ ಬಂದ್‌- ಶಾಲಾ ಮಕ್ಕಳಿದ್ದ ಬಸ್‌ಗೆ ಬೆಂಕಿ ಹಚ್ಚಲು ಯತ್ನ!

ಬಿಹಾರ ಆಗಸ್ಟ್ 22: ಎಸ್‌ಸಿ/ಎಸ್‌ಟಿ ಮೀಸಲಾತಿ ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ನಗರದ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಈ ವೇಳೆ ಉರಿಯುತ್ತಿರುವ ಟೈರ್‌ಗಳ ಮೇಲೆ ಶಾಲಾ ಬಸ್ಸುವೊಂದು ಹಾದು ಹೋಗಿದೆ.

ಬಸ್‌ನಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದರು. ಬಸ್‌ಗೆ ಬೆಂಕಿ ತಗುಲುವ ಮುನ್ನವೇ ಮುಂದಕ್ಕೆ ಚಲಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಆದರೆ ಪ್ರತಿಭಟನಾಕಾರರು ಶಾಲಾ ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Bharat bandh supporters set school bus full of children on fire in bihar

ಗೋಪಾಲಗಂಜ್‌ನಲ್ಲಿ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಅರಾರ್ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕೆಲ ಪ್ರತಿಭಟನಾಕಾರರು ಸಂಚಾರ ಸ್ಥಗಿತಗೊಳಿಸಿದರು. ಅಷ್ಟರಲ್ಲಿ ಮಕ್ಕಳಿಂದ ತುಂಬಿದ ಶಾಲಾ ಬಸ್ಸು ಹಾದು ಹೋಗುತ್ತಿತ್ತು.

ಬಸ್ಸನ ಹಿಂದಿನ ಒಂದು ಚಕ್ರ ಉರಿಯುತ್ತಿರುವ ಟೈರ್ ಮೇಲಿಂದ ಸಾಗಿದೆ. ಇದರಿಂದ ಬಸ್‌ನ ಟೈರ್‌ಗೆ ಬೆಂಕಿ ಹೊತ್ತಿದೆ. ಸ್ಥಳದಲ್ಲಿದ್ದ ಕೆಲವರು ಬೆಂಕಿ ಹಚ್ಚಿದ ಟೈರ್ ಅನ್ನು ಕಟ್ಟಿಗೆಯಿಂದ ತೆಗೆಯಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಆದರೆ ಚಾಲಕ ಬಸ್ ಅನ್ನು ಮುಂದಕ್ಕೆ ಚಲಿಸಿದ್ದರಿಂದ ಬೆಂಕಿ ಹೊತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಆದರೆ ಪ್ರತಿಭಟನಾಕಾರರು ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ಡ್ರೋನ್ ಕ್ಯಾಮೆರಾ ಬಳಸಿ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಗುರುತಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸುವಂತೆ ಗೋಪಾಲಗಂಜ್ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

Bharat bandh supporters set school bus full of children on fire in bihar

ದುಷ್ಕರ್ಮಿಗಳು ಬಸ್ ಸುಡಲು ಯತ್ನಿಸಿದರು: ಪೊಲೀಸರು

ದೃಶ್ಯದ ವೀಡಿಯೊದಲ್ಲಿ ಪ್ರತಿಭಟನಾಕಾರರು ಬಸ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದು ಕಂಡುಬಂದಿಲ್ಲ. ಆದರೆ ಅವರು ಹಾಗೆಯೇ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಈ ಬಗ್ಗೆ ಮಾತನಾಡಿದ ಗೋಪಾಲಗಂಜ್ ಎಸ್ಪಿ ಸ್ವರ್ಣ್ ಪ್ರಭಾತ್, ಭಾರತ್ ಬಂದ್ ಕುರಿತು ಗೋಪಾಲಗಂಜ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಮತ್ತು ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಲಾಗಿದೆ. ನಗರದ ಅರಾರ್ ತಿರುವಿನಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಡ್ರೋನ್ ಕ್ಯಾಮರಾ ಮೂಲಕ ಕೆಲವರನ್ನು ಗುರುತಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದ ಕಿಡಿಗೇಡಿಗಳನ್ನು ಗುರುತಿಸಿ ಎಫ್‌ಐಆರ್ ದಾಖಲಿಸುವಂತೆ ನಗರ ಠಾಣೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಿರಿಯ ನಾಗರಿಕರಿಗೆ ಬೆಂಗಳೂರಲ್ಲಿ ಉದ್ಯೋಗ ಮೇಳ

ಪ್ರತಿಭಟನಾಕಾರರಿಂದ ಪಾದಚಾರಿಗಳಿಗೆ ಕಿರುಕುಳ:

ದೃಶ್ಯದ ಇತರ ವೀಡಿಯೊಗಳಲ್ಲಿ, ಪ್ರತಿಭಟನಾಕಾರರು ಸಾಮಾನ್ಯ ಜನರನ್ನು ರಸ್ತೆಯಲ್ಲಿ ಹಾದುಹೋಗದಂತೆ ತಡೆಯುವುದನ್ನು ಕಾಣಬಹುದು. ಕೋಲುಗಳಿಂದ ಜನರನ್ನು ಬೆದರಿಸುವ ದೃಶ್ಯವೂ ಕಂಡು ಬಂದಿದೆ. ವೀಡಿಯೋದಲ್ಲಿ ಅವರು ಬೈಕು ಸವಾರಿ ಮಾಡುತ್ತಿರುವ ಪುರುಷ ಮತ್ತು ಮಹಿಳೆಯನ್ನು ಸುತ್ತುವರೆದು ಅವರನ್ನು ಬೆದರಿಸಿ ಬೈಕು ಹಿಂದಕ್ಕೆ ತಳ್ಳುತ್ತಿರುವುದು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರಿಗೂ ಅಲ್ಲಿಂದ ವಾಪಸ್ ತೆರಳುವಂತೆ ಒತ್ತಾಯಿಸಿರುವುದನ್ನು ಕಾಣಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+