Get Updates
Get notified of breaking news, exclusive insights, and must-see stories!

ಪಂಜಾಬ್ ಎಎಪಿ ಮುಖ್ಯಸ್ಥ ಸ್ಥಾನ ತೊರೆದ ಭಗವಂತ್

ಅಮೃತ್ ಸರ್, ಮಾರ್ಚ್ 16: ಆಮ್ ಆದ್ಮಿ ಪಕ್ಷ(ಎಎಪಿ)ದ ಪಂಜಾಬ್ ವಿಭಾಗದ ಮುಖ್ಯಸ್ಥರಾಗಿದ್ದ ಭಗವಂತ್ ಮಾನ್ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಬಳಿ ಕ್ಷಮೆಯಾಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

'ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿರಬಹುದು. ನಾನು ಪಂಜಾಬಿನ ಆಮ್ ಆದ್ಮಿಯಾಗಿ ಮುಂದುವರೆಯುತ್ತೇನೆ. ಆದರೆ, ಡ್ರಗ್ಸ್ ಮಾಫಿಯಾ, ಭ್ರಷ್ಟಚಾರದ ವಿರುದ್ಧ ನನ್ನ ಹೋರಾಟ ಜಾರಿಯಲ್ಲಿರಲಿದೆ' ಎಂದಿದ್ದಾರೆ.

Bhagwant Mann quits as Punjab AAP chief

ಡ್ರಗ್ಸ್ ಮಾಫಿಯಾಕ್ಕೆ ಬ್ರಿಕಮ್ ಸಿಂಗ್ ಕುಮ್ಮುಕ್ಕು ನೀಡುತ್ತಿದ್ದಾರೆ. ಡ್ರಗ್ ದೊರೆ ಎಂದು ಆರೋಪಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು ನಂತರ ಕ್ಷಮೆಯಾಚಿಸಿದ್ದರು. ನಂತರ, ಅರವಿಂದ್ ವಿರುದ್ಧ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ಬಿಕ್ರಮ್ ಅವರು ಹಿಂತೆಗೆದುಕೊಂಡಿದ್ದರು.

2017ರಲ್ಲಿ ಎಎಪಿ ಪಂಜಾಬ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.ಅರವಿಂದ್ ಅವರು ನಡೆದುಕೊಂಡ ರೀತಿಯಿಂದ ಪಂಜಾಬಿನ ಎಎಪಿ ಸದಸ್ಯರೆಲ್ಲರೂ ನೊಂದಿದ್ದಾರೆ. ಬ್ರಿಕಮ್ ವಿರುದ್ಧ ಹೈಕೋರ್ಟಿಗೆ ರಾಜ್ಯಸರ್ಕಾರದ ಎಸ್ ಟಿಎಫ್ ವರದಿ ಸಲ್ಲಿಸಿದೆ. ಇದಕ್ಕಿಂತ ಸಾಕ್ಷಿಬೇಕಾ? ಎಂದು ಭಗವಂತ್ ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+