ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್

ನವದೆಹಲಿ, ಮಾರ್ಚ್ 29: ಕೊರೊನಾವೈರಸ್ ಕುರಿತಂತೆ ಜನ ಜಾಗೃತಿ ಮೂಡಿಸುವ ವೆಬ್ ತಾಣಗಳು, ಸಾಮಾಜಿಕ ಜಾಲ ತಾಣಗಳು ಹೆಚ್ಚಾಗುತ್ತಿದ್ದಂತೆ , ಸುಳ್ಳು ಸುದ್ದಿ ಹರಡಿಸಿ ಜನರನ್ನು ಭೀತಿ ಮೂಡಿಸುವ ಕಿಡಿಗೇಡಿಗಳು ಹೆಚ್ಚಾಗಿದ್ದಾರೆ. ಸರ್ಕಾರದ ಅಧಿಕೃತ ವೆಬ್ ತಾಣ ಎಂಬಂತೆ ಬಿಂಬಿಸಿ, ಜನರಿಗೆ ಮೋಸ ಮಾಡುತ್ತಿರುವುದಲ್ಲದೆ ಆತಂಕ ಹೆಚ್ಚಿಸುತ್ತಿವೆ. ಇಂಥ ಫೇಕ್ ವೆಬ್ ತಾಣಗಳನ್ನು ದೆಹಲಿಯ ಸೈಬರ್ ಕ್ರೈಂ ಸೆಲ್ ಪಟ್ಟಿ ಮಾಡಿ ಪ್ರಕಟಿಸಿದೆ.

ಸೈಬರ್ ಕ್ರೈಂಗಳು ಕೂಡಾ ಈ ಸಾಮಾಜಿಕ ಪಿಡುಗಿನ ಜೊತೆಗೆ ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಭಾರತದೆಲ್ಲೆಡೆ ಕ್ರಮ ಜರುಗಿಸಲಾಗಿದೆ. ಈ ನಡುವೆ ಸಾಮಾಜಿಕ ಜಾಲ ತಾಣ, ವೆಬ್ ತಾಣಗಳಲ್ಲಿ ಬರುವ ಸಂದೇಶಗಳು ಪರೀಕ್ಷಿಸದೆ ನಂಬಬೇಡಿ, ಸುಮ್ಮನೆ ವಾಟ್ಸಾಪ್ ನಲ್ಲಿ ಬಂದ ತಕ್ಷಣ ಫಾರ್ವಡ್ ಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Beware: These websites are spreading fake information on coronavirus

ಸೈಬರ್ ಕ್ರೈಂ ವಿಭಾಗವು ಪಟ್ಟಿ ಮಾಡಿರುವ ವೆಬ್ ತಾಣಗಳು:
www(dot)Coronavirus-map(dot)com
www(dot)Vaccine-coronavirus(dot)com
www(dot)Coronavirus(dot)cc
www(dot)Bestcoronavirusprotect(dot)tk
www(dot)coronavirusupdate(dot)tk
www(dot)Coronavirus(dot)zone
www(dot)Bgvfr.coronavirusaware(dot)xyz
www(dot)Coronavirusaware(dot)xyz
www(dot)Corona-virus(dot)healthcare
www(dot)Survivecoronavirus(dot)org
www(dot)Blogcoronacl.canalcero(dot)digital
www(dot)Coronavirusstatus(dot)
www(dot)Coronavirus-realtime(dot)com
www(dot)Coronavirus(dot)app

ಈ ತಾಣಗಳನ್ನು ಓಪನ್ ಮಾಡಬೇಡಿ ಹಾಗೂ ಬೇರೆಯವರಿಗೂ ಈ ಬಗ್ಗೆ ಎಚ್ಚರಿಸಿ, ಇದೆಲ್ಲವೂ ಫೇಕ್ ತಾಣಗಳಾಗಿವೆ ಎಂದು ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರದ ಅಧಿಕೃತ ತಾಣಗಳು: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟ ಮುಂದುವರೆಸಿರುವ ಕೇಂದ್ರ ಸರ್ಕಾರವು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ನೀಡುತ್ತಾ ಬಂದಿದೆ. ಈಗ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್‌ನಲ್ಲಿ ಕೊರೊನಾಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್ ಪುಟವನ್ನು ಆರಂಭಿಸಿದೆ.

ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್‌ ಚಾಟ್‌ಬಾಟ್‌ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ. ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+