ಮಾಜಿ ಪ್ರಿಯಕರನ ಒಲಿಸಿಕೊಳ್ಳಲು 'ಮಾಟ ಮಂತ್ರ'ದ ಮೊರೆ ಹೋಗಿ ₹8.2 ಲಕ್ಷ ಕಳೆದುಕೊಂಡ ಮಹಿಳೆ

ಬೆಂಗಳೂರಿನ 25 ವರ್ಷದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನೊಂದಿಗೆ ರಾಜಿ ಮಾಡಿಕೊಳ್ಳಲು ಮತ್ತು ಇಬ್ಬರ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಪೋಷಕರಿಗೆ ಸಹಾಯ ಮಾಡಲು ಮಾಟಮಂತ್ರದ ಮೊರೆ ಹೋಗಿದ್ದು ಬರೋಬ್ಬರಿ 8.2 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜಾಲಹಳ್ಳಿಯ ನಿವಾಸಿ ಫಾತಿಮಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಪೊಲೀಸರಿಗೆ ತಿಳಿಸಿದ್ದು, ಇತ್ತೀಚೆಗೆ ತನ್ನ ಗೆಳೆಯನೊಂದಿಗೆ ಇರಲು ಬಯಸಿದ್ದರೂ ಸಹ ಸಂಬಂಧ ಮುರಿದುಬಿದ್ದಿದ್ದರಿಂದ ವಿಚಲಿತರಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Bengaluru Woman Loses Rs 8.2 Lakh in Black Magic Bid to Reconcile with Ex

ಮೋಸ ಹೋದ ಮಹಿಳೆ ಅನೇಕ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದ್ದರಿಂದ ಆಕೆ ಇಂಟರ್ನೆಟ್‌ನಲ್ಲಿ ಜ್ಯೋತಿಷಿಗಾಗಿ ಹುಡುಕಾಟ ನಡೆಸಿದ್ದರು. ಡಿಸೆಂಬರ್ 9 ರಂದು ಅಹ್ಮದ್ ಮತ್ತು ಅವನ ಸಹಚರರಾದ ಅಬ್ದುಲ್ ಮತ್ತು ಲಿಯಾಖತುಲ್ಲಾ ಎನ್ನುವವರ ಪರಿಚಯವಾಗಿದೆ.

ಮಾಟ ಮಾಂತ್ರ ನೆಪದಲ್ಲಿ ವಂಚನೆ

ಯಾರೋ ಅವಳ ಸ್ನೇಹಿತ ಮತ್ತು ಅವಳ ಕುಟುಂಬ ಸದಸ್ಯರ ಮೇಲೆ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗುವಂತೆ ಮಾಟಮಂತ್ರ ಮಾಡಿದ್ದಾರೆ ಎಂದು ಅಹ್ಮದ್ ಮಹಿಳೆಗೆ ನಂಬಿಸಿದ್ದಾರೆ. ಅದರಿಂದ ಆಕೆಯನ್ನು ಮುಕ್ತಗೊಳಿಸಲು ಕೆಲವು ಕಾರ್ಯವಿಧಾನಗಳನ್ನು ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕಾಗಿ 501 ರೂ.ಗಳನ್ನು ಕೇಳಿದ್ದಾರೆ, ಫಾತಿಮಾ 500 ರೂಪಾಯಿಯನ್ನು ಡಿಜಿಟಲ್ ವರ್ಗಾವಣೆ ಮಾಡಿದ ನಂತರ, ಅಹ್ಮದ್ ಅವಳ, ಅವಳ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಫೋಟೋಗಳನ್ನು ಕೇಳಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೆ ಫಾತಿಮಾ ಮತ್ತು ಆಕೆಯ ಮಾಜಿ ಗೆಳೆಯನ ನಡುವಿನ ಸಂಬಂಧವನ್ನು ಪೋಷಕರು ವಿರೋಧಸಿದೇ ಇರಲು ಹಲವು ಮಾಟ, ಮಂತ್ರಗಳನ್ನು ಮಾಡಬೇಕು ಎಂದು ಹೇಳಿದ್ದು ಅದಕ್ಕಾಗಿ 2.4 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಫಾತಿಮಾ ಒಪ್ಪಿಕೊಂಡರು ಮತ್ತು ಡಿಸೆಂಬರ್ 22 ರಂದು ಅಹ್ಮದ್ ಅವರ ಸಹಚರರಿಗೆ ಒಂದೆರಡು ದಿನಗಳ ನಂತರ 1.7 ಲಕ್ಷ ರೂ.ಹಣವನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಫಾತಿಮಾಗೆ ಅನುಮಾನ ಬರುವವರೆಗೂ ಇದೇ ರೀತಿ ಹಣ ನೀಡುವುದನ್ನು ಮುಂದುವರೆಸಿದ್ದಾರೆ. ಆದರೆ ಬಳಿಕ ಅನುಮಾನ ಬಂದು ಹಣ ಕೊಡಲು ನಿರಾಕರಿಸಿದ್ದಾರೆ. ಆದರೆ ಅಹ್ಮದ್ ಆಕೆಗೆ ನಿಂದಿಸಿದ್ದು, ಆಕೆಯ ಮಾಜಿ ಗೆಳೆಯನ ಜೊತೆಗಿನ ಫೋಟೋಗಳನ್ನು ಆಕೆಯ ಪೋಷಕರಿಗೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಜನವರಿ 10 ರವರೆಗೆ ಬಹು ಡಿಜಿಟಲ್ ವಹಿವಾಟುಗಳಲ್ಲಿ 4.1 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

ಸ್ವಲ್ಪ ಸಮಯದ ನಂತರ, ಆಕೆಯ ಪೋಷಕರು ಘಟನೆಯ ಬಗ್ಗೆ ತಿಳಿದುಕೊಂಡು ಪೊಲೀಸರನ್ನು ಸಂಪರ್ಕಿಸುವಂತೆ ಒತ್ತಾಯಿಸಿದರು. ನಂತರ ಜಾಲಹಳ್ಳಿ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸಿದ್ದರು. ತನಿಖೆಯ ವೇಳೆ ಅಹ್ಮದ್ ಸಹಚರ ಲಿಯಾಖತುಲ್ಲಾ ಖಾತೆಗೆ ಹಣ ವರ್ಗಾವಣೆಯಾಗಿರುವುದು ಪೊಲೀಸರಿಗೆ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+