ಬೆಂಗಳೂರು ಸೇರಿ 12 ನಗರಗಳಲ್ಲಿ NO2 ಪ್ರಮಾಣ ಭಾರಿ ಹೆಚ್ಚಳ

ಬೆಂಗಳೂರು,ಜುಲೈ 08: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಲಾಕ್‌ಡೌನ್ ಸಡಿಲಿಕೆ ಮಾಡಿದ್ದ ಪರಿಣಾಮ ಬೆಂಗಳೂರು ಸೇರಿದಂತೆ 12ನಗರಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್(NO2) ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ವಾಹನಗಳ ಸಂಚಾರ ಪ್ರಮಾಣ ಕಡಿಮೆಯಾಗಿತ್ತು, ಇದೀಗ ಏಕಾಏಕಿ ಉದ್ದಿಮೆ, ಕಾರ್ಖಾನೆಗಳು ಆರಂಭ, ವಾಹನ ಸಂಚಾರ ಹೆಚ್ಚಾದ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುತ್ತಿದೆ.

ಈ ಕುರಿತು ಗ್ರೀನ್ ಪೀಸ್ ಇಂಡಿಯಾ ಸಮೀಕ್ಷೆಯೊಂದನ್ನು ನಡೆಸಿ ವರದಿ ಸಿದ್ಧಪಡಿಸಿದೆ, ಅದರಲ್ಲಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 12 ನಗರಗಳ ವಾತಾವರಣಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂಬುದು ತಿಳಿದುಬಂದಿದೆ.

Bengaluru Witnessed 90 Percent Spike In NO2 Pollution Between April 2020 And 2021; Greenpeace Study

ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಹೆಚ್ಚು ಪರಿಸರ ಮಾಲಿನ್ಯಕ್ಕೆ ಒಳಗಾದ ನಗರಗಳಲ್ಲೇ ಹೆಚ್ಚು ಕೊರೊನಾ ವೈರಸ್​ನ ಪ್ರಕರಣಗಳು ಕಂಡುಬಂದಿವೆ.

ಏಪ್ರಿಲ್ 2020 ಮತ್ತು ಏಪ್ರಿಲ್ 2021 ರ ಮಧ್ಯಭಾಗದ ದತ್ತಾಂಶವನ್ನು ಸಮೀಕ್ಷೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ದೆಹಲಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ಶೇ. 125, ಮುಂಬೈಯಲ್ಲಿ ಶೇ. 52, ಹೈದರಾಬಾದ್​ ಶೇ. 69, ಚೆನೈ ಶೇಕಡಾ 94, ಕೊಲ್ಕತ್ತಾ ಶೇ. 11, ಜೈಪುರ ಶೇ. 47 ಮತ್ತು ಲಕ್ನೋನಲ್ಲಿ ಶೇ. 32 ರಷ್ಟು ಹೆಚ್ಚಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

Bengaluru Witnessed 90 Percent Spike In NO2 Pollution Between April 2020 And 2021; Greenpeace Study

ಬೆಂಗಳೂರಿನಲ್ಲಿ ಅದು ಶೇ. 90ರಷ್ಟು ಏರಿಕೆಯಾಗಿದ್ದರೆ, ದೆಹಲಿಯಲ್ಲಿ ಉಳಿದೆಲ್ಲ ನಗರಗಳಿಗಿಂತ ಹೆಚ್ಚಿದೆ.. ಮುಂಬೈ, ಹೈದರಾಬಾದ್, ಚೆನೈ, ಕೊಲ್ಕತ್ತಾ, ಜೈಪುರ ಮತ್ತು ಲಕ್ನೋ ಮುಂತಾದವು ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವ ಇತರ ನಗರಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+