• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಸುರಕ್ಷಿತವೇ? ನರೇಂದ್ರ ಮೋದಿಗೆ ಪ್ರೇರಣಾ ಶರ್ಮಾ ಪತ್ರ

|

ಬೆಂಗಳೂರು, ಆಗಸ್ಟ್.20: ಮಹಿಳೆಯರಿಗೆ ಬೆಂಗಳೂರು ಸುರಕ್ಷಿತವೇ? ನವದೆಹಲಿಗೆ ಹೋಲಿಸಿದರೆ ಸುರಕ್ಷಿತ ಎಂದು ಒಂದು ವಾಕ್ಯದ ಉತ್ತರ ನೀವು ನೀಡಬಹುದು.

ಆದರೆ ಇತ್ತೀಚಿನ ಕೆಲ ಘಟನಾವಳಿಗಳು ಬೆಂಗಳೂರಿನ ಭದ್ರತೆ ಬಗೆಗೂ ಆತಂಕ ಮೂಡಿಸಿವೆ. ಉತ್ತರ ಭಾರತದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ತಮ್ಮ ಮೇಲೆ ನಡೆದ ದೌರ್ಜನ್ಯ ಮತ್ತು ಆ ಸಮಯದಲ್ಲಿ ಪೊಲೀಸರು ನಡೆದುಕೊಂಡ ರೀತಿ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ಪತ್ರವೊಂದರಲ್ಲಿ ದಾಖಲಿಸಿದ್ದಾರೆ.

ಸಾಮಾಜಿಕ ತಾಣ ಫೇಸ್ ಬುಕ್ ಅನ್ನು ಬಳಸಿಕೊಂಡು ರಾಂಚಿಯ ವಿದ್ಯಾರ್ಥಿನಿ ಪ್ರೇರಣಾ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅವರ ಪತ್ರವನ್ನು ಇದ್ದ ಹಾಗೇ ಓದಿದರೆ ಬೆಂಗಳೂರಿನ ಸದ್ಯದ ಪರಿಸ್ಥಿತಿಯ ಅರಿವಾಗುತ್ತದೆ. ಕಟು ವಾಸ್ತವವನ್ನು ತೆರೆದಿಡುವ ಪತ್ರವನ್ನು ನೀವೇ ನೋಡಿ....

bengaluru

ಮಾನ್ಯ ಪ್ರಧಾನಿಯವರೇ,
ಭಾರತ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಅದರಂತೆ ನಾನು ನಿರಾತಂಕವಾಗಿ ರಸ್ತೆಯಲ್ಲಿ ಸಂಚರಿಸಬಹುದು ಎಂದು ಅಂದುಕೊಂಡಿದ್ದೆ. ಆದರೆ ಆಗಸ್ಟ್ 12 ರಂದು ನಡೆದ ಕಹಿ ಘಟನೆಗಳೇ ಬೇರೆ.

ನಾನು ಓದುತ್ತಿರುವ(ದಯಾನಂದ ಸಾಗರ್ ಕಾಲೇಜು ಕುಮಾರಸ್ವಾಮಿ ಲೇಔಟ್)ಕಾಲೇಜಿನ ಹೊರಗಡೆಯೇ ವಿನಾಕಾರಣವಾಗಿ ನನ್ನ ಮೇಲೆ ದೌರ್ಜನ್ಯ ನಡೆದಿದೆ. ಹಲ್ಲೆ ಮಾಡಿ ಕೊಲೆ ಮಾಡಲೂ ಯತ್ನಿಸಿದ್ದಾರೆ. ಇದು ತುಂಬಾ ದೀರ್ಘವಾದ ಪತ್ರ. ಆದರೆ ಇದನ್ನು ನೀವು ಓದುತ್ತೀರಿ ಎಂಬ ನಂಬಿಕೆ ನನಗಿದೆ. ಯಾಕೆಂದರೆ ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ಅಭಿಯಾನವನ್ನೇ ನೀವು ಆರಂಭಿಸಿದ್ದೀರಿ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

ಸುಮಾರು 45 ರಿಂದ 50 ವರ್ಷದ ವ್ಯಕ್ತಿ ನನ್ನ ಸ್ಕೂಟಿಗೆ ತಮ್ಮ ದ್ವಿಚಕ್ರ ವಾಹನವನ್ನು ಡಿಕ್ಕಿ ಹೊಡೆಸಿದರು. ಕೆಎ 03 ಟಿಎಲ್ 203 ವಾಹನ ಅಪಘಾತ ಮಾಡಿತ್ತು. ಅಪಘಾತ ತಪ್ಪಿಸಬೇಕು ಎಂಬ ಉದ್ದೇಶಕ್ಕೆ ನಾನು ನನ್ನ ವಾಹನವನ್ನು ಮತ್ತಷ್ಟು ಎಡಕ್ಕೆ ಚಲಿಸಿದೆ. ಆದರೆ ಆಯತಪ್ಪಿ ನೆಲಕ್ಕೆ ಉರುಳಿದ್ದೆ.

ನಂತರ ನಾನು ಮೇಲಕ್ಕೆದ್ದಾಗ ಅಪಘಾತ ಮಾಡಿದ ವ್ಯಕ್ತಿ ಅಪಘಾತಕ್ಕೆ ನಾನೇ ಕಾರಣ ಎಂದು ವಾದಿಸತೊಡಗಿದರು. ನಾನು ನನ್ನಷ್ಟಕ್ಕೆ ವಾಹನ ಚಲಾಯಿಸಿಕೊಂಡು ಮುಂದೆ ಬರಲು ಯತ್ನಿಸಿದರೆ ಆ ವ್ಯಕ್ತಿ ಹಿಂದಿನಿಂದ ನನ್ನ ಸ್ಕೂಟಿ ಎಳೆಯುವ ಯತ್ನ ಮಾಡಿದರು. ಆದರೆ ಅದೃಷ್ಟವಶಾತ್ ನಾನು ತಪ್ಪಿಸಿಕೊಂಡಿದ್ದೆ.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

ಇದಾದ ನಂತರ ವ್ಯಕ್ತಿ ಜೋರಾಗಿ ಕನ್ನಡದಲ್ಲಿ ಏನೋ ಕಿರುಚಿದರು. ತಕ್ಷಣ ಎತ್ತರದ ವ್ಯಕ್ತಿ ಒಬ್ಬ ಆಗಮಿಸಿ ನನ್ನ ವಾಹನವನ್ನು ಹಿಂದಕ್ಕೆ ದೂಡಿದರು. ನಾನು ಮತ್ತೆ ಕೆಳಕ್ಕೆ ಬಿದ್ದಿದ್ದೆ. ನನ್ನ ವಾಚ್, ಹೆಲ್ ಮೆಟ್ ಸಹ ಚೂರಾಗಿತ್ತು. ನನಗೆ ಸಣ್ಣ ಪುಟ್ಟ ಗಾಯಗಳಾದವು.

ಮತ್ತೆ ನಾನು ಮೇಲಕ್ಕೆದ್ದು ಹೊರಡಬೇಕು ಎನ್ನುವಷ್ಟರಲ್ಲಿ ಅಪಘಾತ ಮಾಡಿದ್ದ ವ್ಯಕ್ತಿ ಹೆಲ್ ಮೆಟ್ ವೊಂದರಿಂದ ನನ್ನ ತಲೆಗೆ ಜೋರಾಗಿ ಹೊಡೆದರು. ನಂತರ ಸುತ್ತಲೂ ಜನ ಸೇರಿದರು. ಆಟೋ ಚಾಲಕರು ಬಂದರು. ಅವರೆಲ್ಲರೂ ನನ್ನದೇ ತಪ್ಪು ಎಂದು ಆರೋಪ ಮಾಡುತ್ತಿದ್ದರು. ಆದರೆ ಏನು ಹೇಳುತ್ತಿದ್ದಾರೆ ಎಂದು ನನಗೆ ತಿಳಿಯಲಿಲ್ಲ.

ಮೇಲಕ್ಕೆ ಎದ್ದ ನಾನು ಅಪಘಾತ ಮಾಡಿದ ವ್ಯಕ್ತಿಯ ವಾಹನದ ಸಂಖ್ಯೆ ಬರೆದುಕೊಂಡು ನನ್ನ ಸ್ಕೂಟಿ ಬಳಿ ಬಂದೆ. ಆದರೆ ನನ್ನನ್ನು ಸುತ್ತುವರಿದ ಸುಮಾರು 30 ಜನ ಸ್ಕೂಟಿ ಕೀ ಕಸಿದುಕೊಂಡರು. ಜತೆಗೆ ನನ್ನ ದೇಹವನ್ನು ಮುಟ್ಟತೊಡಗಿದರು.

ಸುತ್ತುವರಿದವರು ಅಪಘಾತ ಮಾಡಿದ ವ್ಯಕ್ತಿಗೆ ನೀಡುತ್ತಿದ್ದ ಬೆಂಬಲ ನೋಡಿ ಇದು ವ್ಯವಸ್ಥಿತ ತಂತ್ರ ಎಂಬುದು ನನಗೆ ಗೊತ್ತಾಗಿತ್ತು. ನನ್ನನ್ನು ತಮಾಷೆ ಮಾಡುತ್ತ ವಿಕೃತ ಆನಂದ ಅನುಭವಿಸುತ್ತಿದ್ದರು.

ನಾನು ಮನೆಗೆ ಹೋಗಬೇಕು, ನನ್ನ ಪರ್ಸ್ ಆದರೂ ನೀಡಿ , ಅದು ಸ್ಕೂಟಿಯೊಳಗೆ ಲಾಕ್ ಆಗಿದೆ ಎಂದು ಮನವಿ ಮಾಡಿಕೊಂಡೆ. ಆದರೆ ಅವರು ಹೇಳಿದ ರೀತಿ ನೋವು ತಂದಿದತ್ತು. 'ನೀನೊಬ್ಬ ಉತ್ತರ ಭಾರತೀಯ, ನಿನಗೆ ಇಲ್ಲಿ ಯಾವ ಪೊಲೀಸರು ಸಹಾಯ ಮಾಡುವುದಿಲ್ಲ, ನೀನು ದಕ್ಷಿಣ ಭಾರತದಲ್ಲಿದ್ದೀಯ, ನೆನಪಿಟ್ಟುಕೋ! ಇಲ್ಲಿಂದ ಹೇಗೆ ಪಾರಾಗುತ್ತೀಯ ನೋಡೇ ಬೀಡೋಣ? ಎಂದು ಹೇಳತೊಡಗಿದ್ದರು.

ನನಗೆ ಕನ್ನಡದ ಒಂದೆರಡು ಪದಗಳು ಅರ್ಥ ಆಗುತ್ತವೆ. ಇನ್ನು ಇವರ ಮಧ್ಯೆ ನಿಂತರ ಉಳಿಗಾಲವಿಲ್ಲ ಎಂದು ಯೋಚಿಸಿ ಅಲ್ಲಿಂದ ಜಾಗ ಖಾಲಿ ಮಾಡುವ ನಿರ್ಧಾರ ಮಾಡಿದೆ. ಆದರೆ ಸಾರ್ವಜನಿಕವಾಗಿ ಹುಡುಗಿಯೊಬ್ಬಳನ್ನು ಅಸಹ್ಯವಾಗಿ ನಡೆಸಿಕೊಳ್ಳುತ್ತಿದ್ದವರ ವಿರುದ್ಧ ದೂರು ನೀಡಬೇಕು ಎಂದೆನಿಸಿತು.

ಸುತ್ತ ನೆರೆದಿದ್ದವರ ಬಳಿ ಮೊಬೈಲ್ ಕೊಡುವಂತೆ ವಿನಂತಿ ಮಾಡಿದೆ. ಪೊಲೀಸರಿಗೊಂದು ಕರೆ ಮಾಡುತ್ತೇನೆ ಎಂದು ಹೇಳಿದೆ. ಆದರೆ ಯಾರೊಬ್ಬರೂ ಫೋನ್ ನೀಡಲಿಲ್ಲ. ಅಂತಿಮವಾಗಿ ಪಕ್ಕದಲ್ಲಿದ್ದ ಮೆಹಂದಿ ವಾಲಾ ನೀವು ನಿಮ್ಮ ಸ್ನೇಹಿತರಿಗೆ ಕರೆ ಮಾಡಬಹುದು ಎಂದು ಹೇಳಿ ಫೋನ್ ನೀಡಿದರು.

ತಕ್ಷಣ ನನ್ನ ಸ್ನೇಹಿತರಿಗೆ ಕರೆ ಮಾಡಿ ಬರಲು ಹೇಳಿದೆ. ಬಂದ ಸ್ನೇಹಿತ ಕೀ ಕೊಡುವಂತೆ ಜನರ ಬಳಿ ಕೇಳಿಕೊಂಡ. ಆದರೆ ಆತನ ಮೇಲೂ ಹಲ್ಲೆ ಮಾಡಲಾಯಿತು. ಆತನ ಮುಖ ಮತ್ತು ತಲೆಗೆ ಮರದ ಕೋಲಿನಿಂದ ಬಲವಾಗಿ ಹೊಡೆದರು.

ಈ ಪುಂಡಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಅರಿತು ನನ್ನ ಸ್ನೇಹಿತನನ್ನು ಗುಂಪಿನಿಂದ ಹೊರಕ್ಕೆ ಕರೆದುಕೊಂಡು ಬರುವ ಯತ್ನ ಮಾಡಿದೆ. ಆದರೆ ಈ ವೇಳೆ ನನ್ನ ಬೆನ್ನು ಮತ್ತು ಮೂಗಿಗೆ ಸುತ್ತಲಿದ್ದ ಕೆಲವರು ಹೊಡೆದಿದ್ದರು.

ನಾನು ಸುಮ್ಮನಿದೆ, ಪೊಲೀಸರನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ ಎಂದು ಕೂಗುತ್ತಲೇ ಸ್ವಲ್ಪ ದೂರ ತೆರಳಿ ಆಟೋವೊಂದನ್ನು ಹಿಡಿದು ಹತ್ತಿರದ ಪೊಲೀಸ್ ಸ್ಟೇಶನ್ ಗೆ ಸ್ನೇಹಿತನನ್ನು ಕರೆದುಕೊಂಡು ಬಂದೆ.

ಪೊಲೀಸರು ನಮಗೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದರು. ಸುಮಾರು ಒಂದು ಗಂಟೆ ಕಳೆದ ಮೇಲೆ ಕೇಳಿದರೆ ಮತ್ತೆ ಕಾಯಲು ಹೇಳಿದರು. ಇದೇ ಕ್ರಮ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿತ್ತು.

ಗಾಯವಾಗಿದ್ದ ನಮ್ಮ ಮೈ ಮೇಲಿಂದ ರಕ್ತ ಸೋರುತ್ತಿತ್ತು. ಯಾವ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಪೊಲೀಸ್ ಸ್ಟೇಶನ್ ನಲ್ಲಿ ಕುಳಿತುಕೊಂಡಿದ್ದ ನಮ್ಮ ತಾಳ್ಮೆ ಕಟ್ಟೆ ಒಡೆದು ಪೊಲೀಸರೊಂದಿಗೆ ವಾಗ್ವಾದ ಆರಂಭವಾಯಿತು.

ನಮಗೆ ಹಲ್ಲೆ ಮಾಡಿದ ಆಟೋ ಚಾಲಕನ ಬಗ್ಗೆ ಹೇಳಿದರೆ ಆತ ಸೆಂಟ್ರಲ್ ಜೈಲಿನಲ್ಲಿದ್ದಾನೆ ಎಂಬ ಉತ್ತರ ನೀಡಿದರು. ಅಪಘಾತ ಮಾಡಿದ ವಾಹನದ ಸಂಖ್ಯೆಯೇ ಸರಿ ಇಲ್ಲ ಎಂದು ಪೊಲೀಸರು ವಾದಿಸತೊಡಗಿದರು.

ನಾನು ಮತ್ತು ನನ್ನ ಸ್ನೇಹಿತ ಸಂಪೂರ್ಣ ಭರವಸೆ ಕಳೆದುಕೊಂಡಿದ್ದೇವು. ನಾವು ಇಲ್ಲಿ ಸುರಕ್ಷಿತರಲ್ಲ ಎಂಬ ಸಂಗತಿಯೂ ಇದರೊಂದಿಗೆ ಮನದಟ್ಟಾಗಿತ್ತು. ಅಪರಾಧ ಪ್ರಕರಣಗಳು ಎಷ್ಟು ಸುಲಭವಾಗಿ ಘಟಿಸಿ ಹೋಗುತ್ತವೆ? ನಮಗೆ ಭಾಷೆ(ಕನ್ನಡ) ತಿಳಿಯದೇ ಇರುವುದು ಪೊಲೀಸರಿಗೆ ತಮಾಷೆಯ ಸಂಗತಿಯಾಗಿದ್ದು ಮಾತ್ರ ದುರ್ದೈವ.

ಇದಕ್ಕೆ ನಾನು ಯಾರ ಬಳಿ ನ್ಯಾಯ ಕೇಳಬೇಕು? ತಂದೆಯಂತೆ ಯಾರು ಸಹಾಯ ಮಾಡುತ್ತಾರೆ? ಅಪ್ಪನಂತೆ ಯಾರು ಸಲಹುತ್ತಾರೆ? ಈ ಪತ್ರವನ್ನು ಪ್ರಧಾನಿಯವರ ಬಳಿಗೆ ತಲುಪಿಸಲು ಯಾರಾದರೂ ರಾಷ್ಟ್ರಪತಿ ಬಳಿಗೆ ತಲುಪಿಸಲು ನೆರವು ನೀಡುತ್ತೀರಾ?

Dear #PMOindia, INDEPENDENCE day is here and I am feeling as if I cant get outside on road freely and without any...

Posted by Prerna Sharma onFriday, August 14, 2015

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು human interest story ಸುದ್ದಿಗಳುView All

English summary
Bengaluru is considered as a safer city for women as compared to Delhi and other cities. But incidents of crime against women are common in the IT city too. On Wednesday, Aug 12, Prerna Sharma became a victim of road accident, public assault, attempt to molestation and attempt to murder, outside her college campus.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more