World's Best Airport: ವಿಶ್ವದ ಅತ್ಯುತ್ತಮ​ ಏರ್​ಪೋರ್ಟ್ ಪಟ್ಟಿಯಲ್ಲಿ ಬೆಂಗಳೂರು ವಿಮಾನನಿಲ್ದಾಣಕ್ಕೆ ಎಷ್ಟನೇ ಸ್ಥಾನ?

ದೂರಸಂಪರ್ಕ ಮತ್ತು ವಿಮಾನಯಾನ ಈ ಎರಡು ಸೇವೆಗಳು ಇಂದು ವಿಶ್ವವನ್ನು ಒಂದು ಸಣ್ಣಗ್ರಾಮವಾಗಿಸಿವೆ. ವಿಶ್ವದ ವಿವಿಧ ದೇಶಗಳ ನಡುವೆ ಸಂಪರ್ಕ ಬೆಳೆಸಲು ಮತ್ತು ಪ್ರಯಾಣಿಸಲು ವಿಮಾನಯಾನ ದೊಡ್ಡ ಕ್ರಾಂತಿಯಾಗಿದೆ.

ಅದೇ ರೀತಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಿಮಾನ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಉನ್ನತ ದರ್ಜೆಯ ಮತ್ತು ಎರಡನೇ ದರ್ಜೆಯ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.

Bengalurus KIA Is 37th Ranked In The Worlds Best Airport List

ದೇಶದ ಸಣ್ಣಸಣ್ಣ ನಗರಗಳಲ್ಲಿಯೂ ವಿಮಾನಯಾನ ಸೇವೆ ಆರಂಭವಾಗಿದ್ದರಿಂದ ಕೈಗೆಟುಕುವ ವಿಮಾನಯಾನ ದರ ಲಭ್ಯವಾಗಿವೆ. ದಕ್ಷಿಣದಿಂದ ಉತ್ತರ ಮತ್ತು ಪೂರ್ವದಿಂದ ಪಶ್ಚಿಮದ ನಗರಗಳ ನಡುವೆ ವಿಮಾನ ಹಾರಾಟ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆಯಾಗುವ ಸಾಧ್ಯತೆ ಇದೆ.

ಸದ್ಯ ಸೇವೆ ನೀಡುತ್ತಿರುವ ಕೆಲವು ವಿಮಾನ ನಿಲ್ದಾಣಗಳು ವಿಶ್ವದ ಅತ್ಯುತ್ತಮ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಏರ್‌ಲೈನ್ಸ್, ಏರಪೋರ್ಟ್ ರಿವ್ಯೂ ಮತ್ತು ರೇಟಿಂಗ್ ಏಜೆನ್ಸಿ ಸ್ಕೈಟ್ರಾಕ್ಸ್, ಗ್ಲೋಬಲ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ಭಾರತದ ನಾಲ್ಕು ವಿಮಾನನಿಲ್ದಾಣಗಳು ಸ್ಥಾನ ಪಡೆದಿವೆ.

ಸ್ಕೈಟ್ರಾಕ್ಸ್ ಪ್ರಕಾರ, ವಿಶ್ವದ ಅಗ್ರ ಅತ್ಯುತ್ತಮ 100 ವಿಮಾನ ನಿಲ್ದಾಣಗಳಲ್ಲಿ ಭಾರತದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ನಿಲ್ದಾಣಗಳು ಸೇರಿವೆ. ಈ ವಿಮಾನ ನಿಲ್ದಾಣಗಳು ಭಾರತ ಮತ್ತು ದಕ್ಷಿಣ ಏಷ್ಯಾದ ಸ್ವಚ್ಛ ವಿಮಾನ ನಿಲ್ದಾಣಗಳೆಂದು ಮೆಚ್ಚುಗೆ ಪಡೆದಿವೆ.

Bengalurus KIA Is 37th Ranked In The Worlds Best Airport List

ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ದೇಶದಲ್ಲೇ ಅತ್ಯುತ್ತಮ ವಿಮಾನನಿಲ್ದಾಣವೆಂಬ ಗರಿಮೆಗೆ ಪಾತ್ರವಾಗಿದೆ. ಅಲ್ಲದೇ, ಸ್ಕೈಟ್ರಾಕ್ಸ್ ಗ್ಲೋಬಲ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ಸತತ ನಾಲ್ಕನೇ ಬಾರಿಗೆ ದಕ್ಷಿಣ ಏಷ್ಯಾ ಮತ್ತು ಭಾರತದ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಆಯ್ಕೆಯಾಗಿದೆ. ಗ್ಲೋಬಲ್ ಶ್ರೇಯಾಂಕದಲ್ಲಿ 37ನೇ ಸ್ಥಾನ ಪಡೆದಿದೆ.

ಇನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಗ್ಲೋಬಲ್ ಶ್ರೇಯಾಂಕದಲ್ಲಿ 61ನೇ ಸ್ಥಾನ ಪಡೆದಿದೆ. ಕೆಇಎ ದಕ್ಷಿಣ ಏಷ್ಯಾ ಮತ್ತು ಭಾರತದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣವಾಗಿದೆ. ಈ ವರ್ಷದ ಶ್ರೇಯಾಂಕದಲ್ಲಿ 71ರಿಂದ 61ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಹೈದರಾಬಾದ್‌ನ ಜಿಎಂಆರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ಲೋಬಲ್ ಶ್ರೇಯಾಂಕದಲ್ಲಿ 63ನೇ ಸ್ಥಾನ ಪಡೆದುಕೊಂಡಿದೆ. ಏವಿಯೇಷನ್ ಡೇಟಾ ಅನಾಲಿಟಿಕ್ಸ್ ಪ್ರಕಾರ, 2022ರ ವೇಳೆಗೆ ವಿಶ್ವದ ನಾಲ್ಕು ಅತ್ಯುತ್ತಮ ಸಮಯೋಚಿತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

Bengalurus KIA Is 37th Ranked In The Worlds Best Airport List

ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ನವದೆಹಲಿ, ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ನಂತರ, ದೇಶದ ನಾಲ್ಕನೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿದೆ. ಗ್ಲೋಬಲ್ ಟಾಪ್ 100 ಶ್ರೇಯಾಂಕದಲ್ಲಿ 65ನೇ ಸ್ಥಾನ ಗಳಿಸಿದೆ.

ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಸಿಂಗಾಪುರ

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಮೊದಲ ಶ್ರೇಯಾಂಕ ಪಡೆದಿದೆ. ಸತತ 12ನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕತಾರ್‌ನ ದೋಹಾದಲ್ಲಿರುವ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಶ್ರೇಯಾಂಕ ಗಳಿಸಿದೆ. ಸತತ ಎರಡನೇ ವರ್ಷ ವಿಶ್ವದ ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ.

ಇನ್ನು ಜಪಾನ್‌ನ ಟೊಕಿಯೋದ ಹನೆಡಾ ವಿಮಾನ ನಿಲ್ದಾಣವು ಮೂರನೇ ಸ್ಥಾನ ಪಡೆದಿದ್ದರೆ, ಸಿಯೋಲ್‌ನ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ಲೋಬಲ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಭಾಜನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+