GDP 2026: ಆರ್ಥಿಕ ಅನಿಶ್ಚಿತತೆ ಮಧ್ಯೆ ಭಾರತ ಜಿಡಿಪಿಯಲ್ಲಿ ಪ್ರಗತಿ: ಬೆಂಗಳೂರಿಗೆ ಅಗ್ರಸ್ಥಾನ, ಪಟ್ಟಿ ಇಲ್ಲಿದೆ

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧಗಳು, ಆರ್ಥಿಕ ಅನಿಶ್ಚಿತತೆಯಂತಹ ಬಿಕ್ಕಟ್ಟಿನ ನಡುವೆ ಭಾರತವು ಆರ್ಥಿಕತೆಯಲ್ಲಿ ಬೆಳವಣಿಗೆ ಸಾಧಿಸಿದೆ. ವಾರ್ಷಿಕ (2026) ಒಟ್ಟು ದೇಶಿಯ ಉತ್ಪನ್ನ (GDP) ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಸಂಖ್ಯೆಗಳು ತಿಳಿಸಿವೆ. ಇನ್ನು ಬಿಡುಗಡೆಯಾದ ಪಟ್ಟಿಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿಗೂ ಮಹತ್ವದ ಸ್ಥಾನ ಸಿಕ್ಕಿದೆ.

ಭಾರತ ಸರ್ಕಾರ ನೀಡಿದ ದತ್ತಾಂಶಗಳ ಪ್ರಕಾರ, ದೇಶದ ಒಟ್ಟು ದೇಶಿಯ ಉತ್ಪನ್ನ (GDP) ಪ್ರಮಾಣವು ಶೇಕಡಾ 7.8ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ಇದರ ಪ್ರಮಾಣ ಶೇಕಡಾ 7.1ರಷ್ಟಿತ್ತು. ಇಂಧನ ಪೂರೈಕೆ ಕೊರತೆ, ರೂಪಾಯಿ ಮೌಲ್ಯ ಕುಸಿತ, ಜಾಗತಿಕ ಅನಿಶ್ಚಿತತೆ, ಯುದ್ಧಗಳ ನಡುವೆ ಭಾರತ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿದೆ. ಆರ್ಥಿಕವಾಗಿ ಭಾರತ ಗಟ್ಟಿ ದೇಶವೆಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

India s GDP

ಆರ್ಥಿಕ ಗುರಿ ಸಾಧಿಸಿದ ಭಾರತ

ಮೂರು ವರ್ಷಗಳ ಹಿಂದೆ (2022-23ರಲ್ಲಿ) ದೇಶದ ಜಿಡಿಪಿಯನ್ನು 2026ರ ಹೊತ್ತಿಗೆ 323.12 ಲಕ್ಷ ಕೋಟಿಗೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಕಳೆದ ವರ್ಷ (2025) ನಾಮಿನಲ್ ಜಿಡಿಪಿ 318.07 ಲಕ್ಷ ಕೋಟಿ ರೂಪಾಯಿ ಇದ್ದದ್ದು ಇಂದು ಪ್ರಸ್ತುತ 2026ರಲ್ಲಿ 8.9ರಷ್ಟು ಹಣದುಬ್ಬರದ ನಡುವೆಯೂ 346.36 ಲಕ್ಷ ಕೋಟಿಗೆ ತಲುಪಿದೆ. ಈ ಮೂಲಕ ಆರ್ಥಿಕವಾಗಿ ದೇಶ ಚೈತನ್ಯಶೀಲವಾಗಿದೆ ಎಂಬದು ಸಾಬೀತಾದಂತಾಗಿದೆ.

Bullet Train Corridor: ದೇಶದ 2ನೇ ಬುಲೆಟ್ ರೈಲು ಕಾರಿಡಾರ್ ಘೋಷಣೆ: ಎಲ್ಲಿಂದ-ಎಲ್ಲಿಗೆ? ರೂಟ್, ಡಿಟೇಲ್ಸ್ ಇಲ್ಲಿದೆ
Bullet Train Corridor: ದೇಶದ 2ನೇ ಬುಲೆಟ್ ರೈಲು ಕಾರಿಡಾರ್ ಘೋಷಣೆ: ಎಲ್ಲಿಂದ-ಎಲ್ಲಿಗೆ? ರೂಟ್, ಡಿಟೇಲ್ಸ್ ಇಲ್ಲಿದೆ

ಜಿಡಿಪಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

ಬಜಾಜ್ ಫಿನ್‌ಸರ್ವ್‌ನ 2026ರ ಪ್ರಕಾರ, ಭಾರತದ ಆರ್ಥಿಕತೆಗೆ ಸೇವಾ ವಲಯ, ಹಣಕಾಸು ಮತ್ತು ವ್ಯಾಪಾರ ಹಾಗೂ ಖಾಸಗಿ ಇನ್ನಿತರ ವಲಯದಿಂದ ಸಾಕಷ್ಟು ಕೊಡುಗೆ ನೀಡಲಾಗುತ್ತದೆ. ಅದರಂತೆ ವಾರ್ಷಿಕ 24 ಲಕ್ಷ ಕೋಟಿ ರೂ.ನೊಂದಿಗೆ ಮುಂಬೈಗೆ ಮೊದಲ ಸ್ಥಾನ ಲಭಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿ ಎನ್‌ಸಿಆರ್ 21 ಲಕ್ಷ ಕೋಟಿ ರೂಪಾಯಿಯ ಕೊಡುಗೆ ನೀಡುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು 14 ಲಕ್ಷ ಕೋಟಿ ರೂ. ಉತ್ಪಾದನೆಯೊಂದಿಗೆ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡಿದ ಮಹಾನಗರಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಐಟಿ, ಸ್ಟಾರ್ಟ್‌ ಅಪ್, ಜಾಗತಿಕ ಸ್ಟಾರ್ಟ್ ಕ್ಷೇತ್ರಗಳ ಮೂಲಕ ಕೊಡುಗೆ ನೀಡಿದೆ.

ನಗರಗಳು ದೇಶದ ಆರ್ಥಿಕ ಶಕ್ತಿ ಕೇಂದ್ರಗಳು

ದೇಶದ ನಗರಗಳು ಸಾಂಸ್ಕೃತಿಕ ಕೇಂದ್ರಗಳು ಮಾತ್ರವಲ್ಲದೆ ದೇಶದ ಬೆಳವಣಿಗೆಗೆ ಉತ್ತೇಜನ ನೀಡುವ ಆರ್ಥಿಕ ಶಕ್ತಿ ಕೇಂದ್ರಗಳಾಗಿವೆ. ನಗರೀಕರಣ ಮತ್ತು ಕೈಗಾರಿಕೀಕರಣವು ವೇಗಗೊಳ್ಳುತ್ತಿವೆ. ಇದು ನಗರದೊಳಗೆ ಉತ್ಪಾದಿಸುವ ಸರಕು ಮತ್ತು ಸೇವೆಗಳ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರು ಸೇರಿದಂತೆ ಚೆನ್ನೈ ಮತ್ತು ಹೈದರಾಬಾದ್ ಐಟಿ, ಉತ್ಪಾದನೆ ಮತ್ತು ಔಷಧ ಸಾಮರ್ಥ್ಯಗಳ ಮೂಲಕ ಟಾಪ್ 10 ನಗರಗಳಲ್ಲಿ ಮೊದಲ ಐದರಲ್ಲಿ ಸ್ಥಾನ ಪಡೆದಿವೆ.

ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೀಲಿ ಮೆಟ್ರೋ ರೈಲಿನಲ್ಲಿದೆ ಲಗೇಜ್ ರ್‍ಯಾಕ್, ಒಳಾಂಗಣ ಲುಕ್ ಹೀಗಿದೆ
ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೀಲಿ ಮೆಟ್ರೋ ರೈಲಿನಲ್ಲಿದೆ ಲಗೇಜ್ ರ್‍ಯಾಕ್, ಒಳಾಂಗಣ ಲುಕ್ ಹೀಗಿದೆ

ಜಿಡಿಪಿ ಟಾಪ್ 10 ನಗರಗಳ ಪಟ್ಟಿ

1. ಮುಂಬೈ: ಹಣಕಾಸು ಸೇವೆಗಳು, ಬಂಡವಾಳ ಮಾರುಕಟ್ಟೆಗಳ ವಲಯದಿಂದ ವ್ಯಾಪಾರ 24 ಲಕ್ಷ ಕೋಟಿ ಕೊಡುಗೆ

2. ದೆಹಲಿ NCR: ಸರ್ಕಾರಿ ಸೇವೆಗಳು, ಐಟಿ, ರಿಯಲ್ ಎಸ್ಟೇಟ್ ವಲದಿಂದ 21 ಲಕ್ಷ ಕೋಟಿ ರೂ. ಕೊಡುಗೆ ನೀಡಿದೆ.

3. ಬೆಂಗಳೂರು: ಐಟಿ, ಸ್ಟಾರ್ಟ್‌ಅಪ್‌ಗಳು, ಜಾಗತಿಕ ತಂತ್ರಜ್ಞಾನ ಸೇವೆಗಳು-14 ಲಕ್ಷ ಕೋಟಿ ರೂ.

4. ಚೆನ್ನೈ: ಆಟೋಮೊಬೈಲ್ ಉತ್ಪಾದನೆ, ರಫ್ತು- 12 ಲಕ್ಷ ಕೋಟಿ ರೂಪಾಯಿ.

5. ಹೈದರಾಬಾದ್: ಫಾರ್ಮಾ, ಐಟಿ, ಬಯೋಟೆಕ್-10 ಲಕ್ಷ ಕೋಟಿ ರೂಪಾಇ

6. ಪುಣೆ: ಐಟಿ, ಆಟೋ ಉತ್ಪಾದನೆ, ಶಿಕ್ಷಣ- 9 ಲಕ್ಷ ಕೋಟಿ ರೂಪಾಯಿ

7. ಕೋಲ್ಕತ್ತಾ: ಬಂದರು ನೇತೃತ್ವದ ವ್ಯಾಪಾರ, ಸೇವೆಗಳು- 8 ಲಕ್ಷ ಕೋಟಿ ರೂ.

8. ಅಹಮದಾಬಾದ್: ಜವಳಿ, ರಾಸಾಯನಿಕಗಳು, MSMEಗಳು- 7 ಲಕ್ಷ ಕೋಟಿ ರೂಪಾಯಿ.

9. ಸೂರತ್: ವಜ್ರ ಸಂಸ್ಕರಣೆ, ಜವಳಿ- 6.5 ಲಕ್ಷ ಕೋಟಿ ರೂಪಾಯಿ.

10. ವಿಶಾಖಪಟ್ಟಣ: ಬಂದರುಗಳು, ಭಾರೀ ಕೈಗಾರಿಕೆಗಳು, ಲಾಜಿಸ್ಟಿಕ್ಸ್- 6 ಲಕ್ಷ ಕೋಟಿ ರೂಪಾಯಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+