ಬೆಂಗಳೂರಿಗೆ ಭಾರೀ ಪೈಪೋಟಿ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ "ಇನ್ಫೋಸಿಸ್" ಶಾಶ್ವತ ಕ್ಯಾಂಪಸ್
ಬೆಂಗಳೂರಿನ ಐಟಿ - ಬಿಟಿ ಕ್ಷೇತ್ರಕ್ಕೆ ದಕ್ಷಿಣ ಭಾರತದ ರಾಜ್ಯಗಳಿಂದ ಭಾರೀ ಪೈಪೋಟಿ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ತೆಲಂಗಾಣದ ಹೈದರಾಬಾದ್ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರಗಳಿಂದ ಭಾರೀ ಪೈಪೋಟಿ ಎದುರಾಗುತ್ತಿದೆ. ದಶಕಗಳಿಂದಲೂ ಅವಿಭಜಿತ ಆಂಧ್ರಪ್ರದೇಶದ ಭಾಗವಾಗಿದ್ದ ಹೈದರಾಬಾದ್ ಹಾಗೂ ಬೆಂಗಳೂರಿನ ನಡುವೆ ಐಟಿ - ಬಿಟಿ ವಿಚಾರದಲ್ಲಿ ದೊಡ್ಡ ಮಟ್ಟದ ಪೈಪೋಟಿ ಇದೆ.
ಇದೀಗ ಬೆಂಗಳೂರಿನ ಮೂಲದ ಕಂಪನಿಯಿಂದಲೇ ಬೆಂಗಳೂರಿಗೆ ಪೈಪೋಟಿ ಎದುರಾಗುವ ಬಗ್ಗೆ ಚರ್ಚೆ ನಡೆದಿದೆ. ಇನ್ಫೋಸಿಸ್ ಮೊದಲು ಮಹಾರಾಷ್ಟ್ರದ ಪುಣೆಯಲ್ಲಿ ಪ್ರಾರಂಭವಾಯಿತು. ಇದಾದ ಎರಡನೇ ವರ್ಷಗಳ ಅವಧಿಯಲ್ಲಿ 1983ರಲ್ಲಿ ಇದರ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಅಂದಿನಿಂದಲೂ ಇನ್ಫೋಸಿಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇದೆ. ಬೆಂಗಳೂರಿನ ಐಟಿ - ಬಿಟಿ ಕ್ಷೇತ್ರಕ್ಕೆ ಇನ್ಫೋಸಿಸ್ ಕೊಡುಗೆ ಅಪಾರ ಎಂದೇ ಹೇಳಬಹುದು.

ಇದೀಗ ಬೆಂಗಳೂರಿಗೆ ಪೈಪೋಟಿ ನೀಡುತ್ತಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ಇನ್ಫೋಸಿಸ್ ದಾಪುಗಾಲು ಇರಿಸಿದೆ. ಇದು ಇನ್ಫೋಸಿಸ್ನ ವ್ಯವಹಾರ ಹಾಗೂ ಬ್ಯುಸಿನೆಸ್ನ ವಿಸ್ತಾರದ ಭಾಗವಾಗಿದೆಯಾದರೂ ಇದು ಬೆಂಗಳೂರಿನ ಐಟಿ ಕ್ಷೇತ್ರದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವ ಚರ್ಚೆ ಶುರುವಾಗಿದೆ. ಇನ್ಫೋಸಿಸ್ ವಿಶಾಖಪಟ್ಟಣಂನಲ್ಲಿ ಶಾಶ್ವತ ಕ್ಯಾಂಪಸ್ ಸ್ಥಾಪನೆ ಮಾಡುವುದಕ್ಕೆ ಮುಂದಾಗಿದೆ.
ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಇನ್ಫೋಸಿಸ್ ವಿಶಾಖಪಟ್ಟಣಂನಲ್ಲಿ ಶಾಶ್ವತ ಕ್ಯಾಂಪಸ್ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 20 ಎಕರೆ ಜಾಗವನ್ನು ಮಂಜೂರು ಮಾಡಲು ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ. ಕಂಪನಿಯ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದ್ದು, ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ತಿಂಗಳು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಇನ್ಫೋಸಿಸ್ ಮತ್ತು ಅದರ ಅಂಗಸಂಸ್ಥೆಗಳು ಸುಮಾರು 50 ದೇಶಗಳಲ್ಲಿ ಕ್ಯಾಂಪಸ್ಗಳನ್ನು ಹೊಂದಿವೆ.
#Vizag, get ready. The world champions are coming this month.
— Lokesh Nara (@naralokesh) December 15, 2025
Any guesses who?
ದಕ್ಷಿಣ ಭಾರತದಲ್ಲಿ ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಕ್ಯಾಂಪಸ್ಗಳಿವೆ. ಇದರ ಜೊತೆಗೆ, ಹೈದರಾಬಾದ್, ಚೆನ್ನೈ ಮತ್ತು ತಿರುವನಂತಪುರಂನಲ್ಲಿ ಕ್ಯಾಂಪಸ್ಗಳಿವೆ. ಈಗ ವಿಶಾಖಪಟ್ಟಣದಲ್ಲಿ ಕ್ಯಾಂಪಸ್ ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕ್ಯಾಂಪಸ್ಗಳನ್ನು ಸ್ಥಾಪಿಸುವ ಗುರಿಯನ್ನು ಇನ್ಫೋಸಿಸ್ ಹಾಕಿಕೊಂಡಿದೆ ಎಂದು ಹೇಳಲಾಗಿದೆ.
ಸಿದ್ಧರಾಗಿ ವಿಶಾಖಪಟ್ಟಣಂ!
ಇನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಆಂಧ್ರಪ್ರದೇಶದ ಐಟಿ ಸಚಿವ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಸಿದ್ಧರಾಗಿ, ವಿಶಾಖಪಟ್ಟಣಂ. ಈ ತಿಂಗಳು ವಿಶ್ವ ಚಾಂಪಿಯನ್ಗಳು ಬರುತ್ತಿದ್ದಾರೆ. ಯಾರು ಬರುತ್ತಾರೆಂದು ಯಾರು ಊಹಿಸಲು ಸಾಧ್ಯವಿಲ್ಲ ಎನ್ನುವ ಟ್ವೀಟ್ ಮಾಡಿದ್ದಾರೆ. ಇದು ಇನ್ಫೋಸಿಸ್ ಸಂಸ್ಥೆಯ ಬಗ್ಗೆ ಇರಬಹುದು ಎಂದು ಹಲವರು ಅಂದಾಜಿಸಿದ್ದಾರೆ.
ಬೆಂಗಳೂರಿಗೆ ಪೈಪೋಟಿ: ಇನ್ನು ಕಳೆದ ಒಂದು ವರ್ಷದ ಅವಧಿಯಿಂದಲೂ ಬೆಂಗಳೂರು - ವಿಶಾಖಪಟ್ಟಣಂ ನಗರಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬೆಂಗಳೂರಿಗೆ ಬರಬೇಕಾಗಿದ್ದ ಐಟಿ ಹಬ್ ಅವಕಾಶವು ಕೊನೆಯ ಕ್ಷಣದಲ್ಲಿ ಬೆಂಗಳೂರು ಕೈತಪ್ಪಿತ್ತು. ಅಲ್ಲದೇ ಹಲವು ಪ್ರತಿಷ್ಠಿತ ಹಾಗೂ ಐಟಿ - ಬಿಟಿ ಕಂಪನಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ಕಚೇರಿಗಳನ್ನು ಪ್ರಾರಂಭಿಸುತ್ತಿದ್ದು, ಇದು ಬೆಂಗಳೂರಿಗೆ ಪೈಪೋಟಿ ಎಂದೇ ಪರಿಗಣಿಸಲಾಗುತ್ತಿದೆ.
ಬೆಂಗಳೂರಿನ ಪ್ರಮುಖ ಯೋಜನೆಗಳು ಆಂಧ್ರಪ್ರದೇಶಕ್ಕೆ ಹೋಗುತ್ತಿರುವುದನ್ನು ಕರ್ನಾಟಕ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications