Bengaluru-Chennai Expressway: ಮುಗಿಯುವ ಹಂತದಲ್ಲಿ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ವೇ- ವಿಶೇಷತೆ, ಲಾಭ, ಮಾಹಿತಿ
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ವೇ ವೇಗ ಪಡೆದುಕೊಂಡಿದೆ. ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕ ಸೃಷ್ಟಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ಯೋಜನೆಗಳನ್ನು ಪರಿಚಯಿಸುತ್ತಿದೆ. ದೇಶದ ಹೆದ್ದಾರಿಗಳನ್ನು ಇದೀಗ ಉನ್ನತ ಮಟ್ಟದಲ್ಲಿ ಅಭಿವೃದ್ಧಿಸಲಾಗುತ್ತಿದೆ. ಇದರ ಭಾಗವಾಗಿ ಬೆಂಗಳೂರು ಹಾಗೂ ಚೆನ್ನೈ ಎಕ್ಸ್‌ಪ್ರೆಸ್ ವೇ ಅನ್ನು ಬರೋಬ್ಬರಿ 17,000 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಏನಿದರ ವಿಶೇಷತೆ, ಇದರಿಂದ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಂಪರ್ಕ ಹೇಗೆ ಅಭಿವೃದ್ಧಿ ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಇದು ವಾಹನ ಸವಾರರಿಗೆ ಇದರಿಂದ ಏನು ಲಾಭ ಎನ್ನುವ ವಿವರ ಇಲ್ಲಿದೆ.
ದೇಶದಲ್ಲಿ ಮೂಲಸೌಕರ್ಯ ಉತ್ತೇಜನ ಮಾಡುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ ಕಳೆದ ಹತ್ತು ವರ್ಷದ ಅವಧಿಯಲ್ಲಿ ಹಲವು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಮುಂದಿನ ವರ್ಷ ಅಂದರೆ 2025ರ ಆಗಸ್ಟ್‌ನ ಒಳಗೆ ಪೂರ್ಣ ಮಾಡುವುದಾಗಿ ಎಂದು ಹೇಳಿದ್ದಾರೆ.

ಚೆನ್ನೈ ಹಾಗೂ ಬೆಂಗಳೂರು ನಡುವಿನ ಈ ಉದ್ದೇಶಿತ ಯೋಜನೆಗೆ ಬರೋಬ್ಬರಿ 17,000 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದೆ. ಈ ಎಕ್ಸ್‌ಪ್ರೆಸ್ ವೇ 262 ಕಿ.ಮೀ ಉದ್ದ ಇರಲಿದ್ದು, ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳ ಸಂಚಾರ ಅವಧಿಯನ್ನು ಕೇವಲ 3 ಗಂಟೆಯ ಒಳಗಾಗಿ ನೀವು ಪೂರೈಸಬಹುದಾಗಿದೆ.
ಇನ್ನು ಈ ಎಕ್ಸ್ ಪ್ರೆಸ್‌ವೇಗೆ ಚೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಇಲ್ಲ / ನ್ಯಾಷನಲ್ ಎಕ್ಸ್‌ಪ್ರೆಸ್ ವೇ 7 (Bangalore-Chennai Expressway, or National Expressway 7 (NE-7) ಎಂದು ಕರೆಯಲಾಗುತ್ತಿದೆ. ಇದನ್ನು ಮೂರು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿ ಕರ್ನಾಟಕದಿಂದ ಪ್ರಾರಂಭವಾಗಲಿದೆ. ಎಕ್ಸ್‌ಪ್ರೆಸ್ ವೇಯ ಮೊದಲ ಹಂತದಲ್ಲಿ 71 ಕಿ.ಮೀ ಅಭಿವೃದ್ಧಿಯಾಗಲಿದ್ದು, ಈ ಕಾಮಗಾರಿ ಇದೇ ತಿಂಗಳು ಮುಕ್ತಾಯವಾಗುವ ನಿರೀಕ್ಷೆಯಿದೆ. ಮೊದಲ ಹಂತದ ಕಾಮಗಾರಿಯಲ್ಲಿ ಈಗಾಗಲೇ ಗಮನಾರ್ಹ ಅಭಿವೃದ್ಧಿಯಾಗಿದೆ.
ಮೊದಲ ಹಂತದ ಕಾಮಗಾರಿ ಸಾಕಷ್ಟು ಅಭಿವೃದ್ಧಿಯಾಗಿರುವುದರಿಂದ ಇನ್ಮುಂದೆ ಕೆಜಿಎಫ್ ಹಾಗೂ ಹೊಸಪೇಟೆ ನಡುವಿನ ಪ್ರಯಾಣದ ಅವಧಿಯು ಒಂದೂವರೆ ಗಂಟೆಯಿಂದ ಕೇವಲ 45 ನಿಮಿಷಗಳಿಗೆ ಇಳಿಕೆಯಾಗಲಿದೆ. ದಕ್ಷಿಣ ಭಾರತದಲ್ಲಿ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳನ್ನು ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲಿ ಚೆನ್ನೈ - ಬೆಂಗಳೂರು ಎಕ್ಸಪ್ರೆಸ್ ವೇಯೂ ಒಂದಾಗಿದೆ.
ದಕ್ಷಿಣ ಭಾರತದ ಮೂಲಸೌಕರ್ಯವನ್ನು ಪರಿವರ್ತಿಸಲು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಯೂ ಪ್ರಮುಖವಾಗಿದೆ.
ಈ ನಗರಗಳ ನಡುವೆ ಸಂಪರ್ಕ ಅಭಿವೃದ್ಧಿ ಮಾಡುವುದರಿಂದ ಎರಡೂ ರಾಜ್ಯಗಳ ನಡುವೆ ಆರ್ಥಿಕ ಚಟುವಟಿಕೆ ವೃದ್ಧಿಯಾಗಲಿದೆ. ಈ ಭಾಗದಲ್ಲಿ ವಾಹನ ಸವಾರರು ತಡೆರಹಿತ (ಯಾವುದೇ ಸಂಚಾರ ದಟ್ಟಣೆ) ಪ್ರಯಾಣವನ್ನು ಮಾಡಬಹುದಾಗಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಟ್ರಾಫಿಕ್‌ಜಾಮ್ ಕಡಿಮೆಯಾಗುವುದರ ಜೊತೆ ಜೊತೆಗೆ ರಸ್ತೆ ಸುರಕ್ಷತೆಯ ದೃಷ್ಟಿಯಿಂದಲೂ ಈ ಎಕ್ಸ್‌ಪ್ರೆಸ್‌ವೇ ಸಹಕಾರಿಯಾಗುವುದಾಗಿ ಹೇಳಲಾಗಿದೆ.
ಬೆಂಗಳೂರು ಹಾಗೂ ಚೆನ್ನೈ ಎರಡೂ ಭಾಗದಲ್ಲೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಎಕ್ಸ್‌ಪ್ರೆಸ್‌ವೇಗೆ ಸಂಬಂಧಿಸಿದಂತೆ ತಮಿಳುನಾಡಿನ ರಾಜಧಾನಿ ಚೆನ್ನೈನ ಶ್ರೀಪೆರಂಬದೂರು- ಕರೈಪೇಟ್ ನಡುವಿನ ಎಕ್ಸ್‌ಪ್ರೆಸ್ ವೇ ಮಾರ್ಗವು ಶೇ. 56.92% ರಷ್ಟು ಪೂರ್ಣಗೊಂಡಿದೆ. ಕರೈಪೇಟ್ - ವಾಲಾಜಪೇಟೆ ಮಾರ್ಗದಲ್ಲಿ ಶೇ 74.90% ಪೂರ್ಣಗೊಂಡಿದೆ. ಈ ಎಲ್ಲಾ ಕಾಮಗಾರಿಗಳು ಮಾರ್ಚ್ 2025ರ ವೇಳೆಗೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವ ಸಾಧ್ಯತೆ ಇದೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ವೇ ಮುಕ್ತಾಯದ ಹಂತದಲ್ಲಿದೆ. ಇದರಿಂದ ಎರಡೂ ರಾಜ್ಯಗಳ ನಡುವಿನ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಬೂಸ್ಟ್ ಸಿಗಲಿದೆ. ಅಲ್ಲದೇ ಈ ಎರಡೂ ರಾಜ್ಯಗಳ ನಡುವಿನ ಆರ್ಥಿಕ ಅಭಿವೃದ್ಧಿಯಾಗಲಿದೆ. ಉದ್ಯೋಗ ಹಾಗೂ ಹೋಟೆಲ್ ಉದ್ದಿಮೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.












Click it and Unblock the Notifications