Breaking; ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ವಿಧಿವಶ

ಕೋಲ್ಕತ್ತಾ, ನವೆಂಬರ್ 18; ಎರಡು ಬಾರಿ ಕ್ಯಾನ್ಸರ್ ಗೆದ್ದಿದ್ದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಮೃತಪಟ್ಟಿದ್ದಾರೆ. ಪಾರ್ಶ್ವವಾಯುವಿನಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ನವೆಂಬರ್ 1ರಂದು ಬ್ರೈನ್‌ ಸ್ಟ್ರೋಕ್‌ ಉಂಟಾಗಿ ಐಂದ್ರಿಲಾ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸುಧಾರಿಸಲೇ ಇಲ್ಲ. ನವೆಂಬರ್ 14ರಂದು ಅನೇಕ ಬಾರಿ ಅವರಿಗೆ ಹೃದಯ ಸ್ತಂಭನ ಉಂಟಾಗಿತ್ತು. ನವೆಂಬರ್ 20ರಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಐಂದ್ರಿಲಾ ಶರ್ಮಾ ಬೆಂಗಾಲಿ ಸಿನಿಮಾ ರಂಗದ ಜನಪ್ರಿಯ ನಟಿ. ಜುಮೂರ್, ಭೋಲೋ ಬಾಬಾ ಪರ್ ಕರೇಗಾ ಚಿತ್ರಗಳಲ್ಲಿ ನಟಿಸಿ, ಪ್ರಸಿದ್ಧಿ ಪಡೆದಿದ್ದರು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಅವರಿಗೆ ಕ್ಯಾನ್ಸರ್ ರೋಗ ತಗುಲಿತ್ತು.

Bengali Actor Aindrila Sharma No More

ಕ್ಯಾನ್ಸರ್‌ಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದು ಐಂದ್ರಿಲಾ ಶರ್ಮಾ ಗುಣಮುಖರಾಗಿದ್ದರು. ಮತ್ತೆ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ಆಗ ಎರಡನೇ ಬಾರಿಗೆ ಕ್ಯಾನ್ಸರ್ ರೋಗ ತಗುಲಿತ್ತು. ಕೀಮೋಥೆರಪಿಗೆ ಒಳಗಾಗಿ ಕ್ಯಾನ್ಸರ್‌ ಗೆದಿದ್ದದ್ದರು.

ಬ್ರೈನ್‌ ಸ್ಟ್ರೋಕ್‌ ಉಂಟಾಗಿ ಐಂದ್ರಿಲಾ ಶರ್ಮಾ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ನೂರಾರು ಅಭಿಮಾನಿಗಳು ಸಂದೇಶ ಕಳಿಸುವ ಮೂಲಕ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.

ಬೆಂಗಾಲಿ ಚಿತ್ರರಂಗದ ಮಾತ್ರವಲ್ಲ ಅನೇಕ ಒಟಿಟಿ ಕಾರ್ಯಕ್ರಮಗಳಲ್ಲಿಯೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಚಿತ್ರ 'ಭೋಲೆ ಬಾಬಾ ಪರ್ ಕರೇಗಾ'ದಲ್ಲಿ ನಟಿಸಿದ್ದರು.

ಸಬ್ಯಸಾಚಿ ಚೌಧುರಿ ಅವರಿದ್ದ 'ಜುಮುರ್' ಕಾರ್ಯಕ್ರಮದ ಮೂಲಕ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಐಂದ್ರಿಲಾ ಶರ್ಮಾ ಅವರ ಆರೋಗ್ಯ ಸುಧಾರಿಸುವಂತೆ ಪ್ರಾರ್ಥಿಸಿ ಎಂದು ಸಬ್ಯಸಾಚಿ ಚೌಧುರಿ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

ಪಶ್ಚಿಮ ಬಂಗಾಳದ ಬರ್ಹಾಂಫೋರ್‌ನಲ್ಲಿ ಹುಟ್ಟಿದ್ದ ಐಂದ್ರಿಲಾ ಶರ್ಮಾ ಕ್ಯಾನ್ಸರ್‌ನಿಂದ ಬದುಕಿಳಿದಿದ್ದರು. ಆದರೆ ಬ್ರೈನ್‌ ಸ್ಟ್ರೋಕ್‌ ಹಾಗೂ ಹೃದಯ ಸ್ತಂಭನದಿಂದಾಗಿ ಅವರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+