ಬೇನಾಮಿ ಆಸ್ತಿ ಮಾಹಿತಿ ನೀಡಿದವರಿಗೆ 1 ಕೋಟಿ ಇನಾಮು

ನವದೆಹಲಿ, ಸೆಪ್ಟೆಂಬರ್ 22 : ಬೇನಾಮಿ ಆಸ್ತಿ ಮಾಡಿರುವವರ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವವರಿಗೆ 1 ಕೋಟಿ ರುಪಾಯಿವರೆಗೆ ನಗದು ಇನಾಮು ಕೊಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಕ್ಟೋಬರ್ ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಹಿರಿಯ ತೆರಿಗೆ ಅಧಿಕಾರಿಯೊಬ್ಬರು ಮಾತನಾಡಿ, ಮಾಹಿತಿದಾರರು ಕನಿಷ್ಠ 15 ಲಕ್ಷ ರುಪಾಯಿಯಿಂದ ಗರಿಷ್ಠ 1 ಕೋಟಿಯವರೆಗೆ ಬಹುಮಾನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

Benami property secret informers to get reward up to 1 Crore

ಸುಳಿವು ನೀಡುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಕೂಡ ಅಧಿಕಾರಿ ಹೇಳಿದ್ದಾರೆ. ಕಳೆದ ವರ್ಷ ಬೇನಾಮಿ ಆಸ್ತಿ ಕಾನೂನು ಪರಿಚಯಿಸಲಾಗಿತ್ತು. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಹಾಗೂ ಕಂದಾಯ ಗುಪ್ತಚರ ಇಲಾಖೆಯಿಂದ ಮಾಹಿತಿದಾರರಿಗೆ ಬಹುಮಾನ ಕೊಡುವ ಪದ್ಧತಿ ಮುಂಚಿನಿಂದಲೂ ಇದೆ.

"ಮಾಹಿತಿದಾರರ ಸಹಾಯ ಪಡೆಯುವುದರಿಂದ ನಮ್ಮ ಕೆಲಸ ಸುಲಭ, ಶೀಘ್ರ ಹಾಗೂ ಪರಿಣಾಮಕಾರಿಯಾಗಿ ಆಗುತ್ತದೆ. ಮಾಹಿತಿ ನೀಡುವವರಿಗೆ ಆಕರ್ಷಕ ಬಹುಮಾನ ನೀಡುವುದರಿಂದ ದೊರೆಯುವ ಮಾಹಿತಿಯು ನಮ್ಮ ಕೆಲಸವನ್ನು ಸಲೀಸು ಮಾಡುತ್ತದೆ. ದೇಶದಾದ್ಯಂತ ಇರುವ ಬೇನಾಮಿದಾರರ ವಿರುದ್ಧ ದಾಳಿಗಳನ್ನು ಶೀಘ್ರವೇ ಆರಂಭಿಸಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯಕ್ಕೆ ಬಹುಮಾನ ಮೊತ್ತದ ಬಗೆಗಿನ ವಿಚಾರ ಆರ್ಥಿಕ ಸಚಿವಾಲಯದ ಬಳಿ ಇದೆ. ಒಮ್ಮೆ ಅಲ್ಲಿಂದ ಅಂಕಿತ ಬಿದ್ದು, ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದರೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಈ ಬಗೆಗಿನ ಘೋಷಣೆ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+