Bank Holiday: ಇದೇ ವಾರದಲ್ಲಿ ಬ್ಯಾಂಕ್‌ಗಳಿಗೆ 3 ದಿನ ರಜೆ
Bank Holiday: ಕಾರಣಾಂತಗರಳಿಂದ ಕಲವು ಭಾಗಗಳಲ್ಲಿ ಬ್ಯಾಂಕ್‌ಗಳಿಗ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಮತ್ತೆ ಇದೇ ವಾರದಲ್ಲಿ ಮೂರು ದಿನ ರಜೆ ಸಿಗಲಿದ್ದು, ಇದರಿಂದ ಉದ್ಯೋಗಿಗಳ ಬಾಯಿಗೆ ಸಕ್ಕರೆ ಹಾಕಿದಂತಾಗಿದೆ. ಎಲ್ಲೆಲ್ಲಿ ರಜೆ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಆರ್‌ಬಿಐ ಸೆಪ್ಟೆಂಬರ್ 2025ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಹಬ್ಬ ಸೇರಿದಂತೆ ಹಲವು ಕರಾಣಗಳಿಂದ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಗ್ರಾಹಕರು ಬ್ಯಾಂಕ್ ಸಂಬಂಧಿತ ಕೆಲಸವನ್ನು ಮುಂಚಿತವಾಗಿ ಮಾಡಿಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ. ಈಗಾಗಲೇ ಸಾಲು ರಜೆಗಳಿಂದ ಉದ್ಯೊಗಿಗಳಿಗೆ ದೊಡ್ಡ ವಿರಾಮ ಸಿಕ್ಕಂತಾಗಿದೆ, ಇದೀಗ ಮತ್ತೆ ಇದೇ ವಾರದಲ್ಲಿ ಮೂರು ರಜೆಗಳನ್ನು ಪಡೆಯಲಿದ್ದಾರೆ.

ಕೆಲ ರಾಜ್ಯಗಳಲ್ಲಿ ಹಬ್ಬಗಳನ್ನು ವಿವಿಧ ದಿನಗಳಲ್ಲಿ ಆಚರಣೆ ಮಾಡುತ್ತಾರೆ. ಆಯಾ ರಾಜ್ಯಗಳ ಹಬ್ಬಗಳ ಅನುಸಾರವಾಗಿ ಬ್ಯಾಂಕ್‌ಗಳಿಗೆ ರಜೆಗಳನ್ನು ನೀಡಲಾಗುತ್ತದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ಕ್ಯಾಲೆಂಡರ್ ಪ್ರಕಾರ, ಈದ್-ಎ-ಮಿಲಾದ್ ರಜೆಯನ್ನು ಸೆಪ್ಟೆಂಬರ್ 5ರಂದು ನೀಡಲಾಗಿತ್ತು. ಆದರೆ, ಮಹಾರಾಷ್ಟ್ರ ಸರ್ಕಾರವು ಈದ್-ಎ-ಮಿಲಾದ್ ರಜಾ ದಿನವನ್ನು ಸೆಪ್ಟೆಂಬರ್ 5ರ ಬದಲಾಗಿ ಸೆಪ್ಟೆಂಬರ್ 8ರ ಸೋಮವಾರಕ್ಕೆ ಬದಲಿಸಿತು. ಆದ್ದರಿಂದ ಈ ದಿನ ಮುಂಬೈನ ಎಲ್ಲಾ ಬ್ಯಾಂಕುಗಳಿಗೆ ರಜೆ ನೀಡಲಾಗಿತ್ತು.
ಹೀಗೆ ಕೆಲವು ರಾಜ್ಯಗಳಲ್ಲಿ ರಜೆ ದಿನಗಳನ್ನು ಬದಲಾಯಿಸಿಕೊಳ್ಳಲಾಗುತ್ತದೆ. ಇನ್ನು ಸೆಪ್ಟೆಂಬರ್ 12ರ ಶುಕ್ರವಾರ ಜಮ್ಮು ಮತ್ತು ಶ್ರೀನಗರದಲ್ಲಿನ ಈದ್-ಎ-ಮಿಲಾದ್ ಆಚರಣೆ ಮಾಡಲಾಗುತ್ತಿದ್ದು, ಅಂದು ಈ ಭಾಗದ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ 13ರಂದು ಎರಡನೇ ಶನಿವಾರ ಆದ ಕಾರಣ ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಸೆಪ್ಟೆಂಬರ್ 14 ಭಾನುವಾರ ಆದ್ದರಿಂದ ಈ ದಿನ ಕೂಡ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ.
ಸಾಮಾನ್ಯವಾಗಿ ಪ್ರತಿ ತಿಂಗಳ ಎರಡನೇ, ನಾಲ್ಕನೇ ಶನಿವಾರ ಹಾಗೂ ಭಾನುವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ರಜೆಗಳು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯ ಆಗಲಿವೆ. ಇದನ್ನು ಹೊರತುಪಡಿಸಿ ಹಬ್ಬಗಳ ದಿನದಂದು ಬಹುತೇಕ ಬ್ಯಾಂಕ್‌ಗಳಿಗೆ ರಜೆ ಇದ್ದರೆ, ಕೆಲವೆಡೆ ಈ ರಜೆಗಳನ್ನು ಬದಲಾಯಿಸಿಕೊಳ್ಳಲಾಗುತ್ತದೆ. ಇದು ಆಯಾ ರಾಜ್ಯಗಳು ಅಥವಾ ಪ್ರದೇಶಗಳು ಅನುಸರಿಸುವುದರ ಮೇಲೆ ನಿರ್ಧಾರ ಆಗಲಿದೆ. ಬ್ಯಾಂಕ್‌ಗಳು ಮುಚ್ಚಿದರೂ ಕೂಡ ಗ್ರಾಹಕರು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದು.
ಇನ್ನು ಈ ಬಾರಿ ಮುಂಬೈನಲ್ಲಿ ಈದ್-ಎ-ಮಿಲಾದ್ ಹಬ್ಬದ ರಜೆಯನ್ನು ಸೆಪ್ಟೆಂಬರ್ 5ರ ಬದಲಿಗೆ 8ಕ್ಕೆ ಯಾಕೆ ನೀಡಲಾಯಿತು ಎನ್ನುವ ಪ್ರಶ್ನೇ ಬಹುತೇಕ ಮಂದಿಯಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಕಾರಣ ಇಲ್ಲಿದೆ. ಮುಂಬೈ ಹಾಗೂ ಅದರ ಉಪನಗರಗಳಲ್ಲಿ ಸೆಪ್ಟೆಂಬರ್ 5ರಂದು ನಿಗದಿ ಆಗಿದ್ದ ಈದ್-ಎ-ಮಿಲಾದ್ ರಜೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿಕೆ ಮಾಡಲಾಯಿತು. ಸೆಪ್ಟೆಂಬರ್ 5ರಂದು ಮುಂಬೈನಲ್ಲಿ ಗಣೇಶ ವಿಸರ್ಜನೆಯನ್ನು ಇಟ್ಟುಕೊಳ್ಳಲಾಗಿತ್ತು.
ಗಣೇಶ ವಿಸರ್ಜನೆ ದಿನದಂದು ಯಾವುದೇ ಘರ್ಷಣೆ ಆಗಬಾರದು ಎನ್ನುವ ದೃಷ್ಟಿಯಿಂದ ಮುಸ್ಲಿಂ ಸಮುದಾಯವು ಸೆಪ್ಟೆಂಬರ್ 8ರಂದು ಮೆರವಣಿಗೆ ನಡೆಸಲು ನಿರ್ಧರಿಸಿತ್ತು. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವೇ ಸೆಪ್ಟೆಂಬರ್ 3ರಂದು ಘೋಷಣೆ ಮಾಡಿತ್ತು. ಈ ಬಾರಿ ಬಹುತೇಕ ಭಾಗಗಳಲ್ಲಿ ಈದ್-ಎ-ಮಿಲಾದ್ ದಿನದಂತೆ ಗಣೇಶ ವಿಸರ್ಜನೆ ಇಟ್ಟುಕೊಳ್ಳಲಾಗಿತ್ತು. ಹಾಗೆಯೇ ಮುಂಬೈನಲ್ಲೂ ಸಹ ಇದೇ ದಿನ ವಿಸರ್ಜನೆ ಇಟ್ಟುಕೊಂಡಿದ್ದು, ಈ ಹಿನ್ನೆಲೆ ಈ ಹಬ್ಬದ ರಜೆ ದಿನವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications