Bank Holidays in July 2024: ಜುಲೈನಲ್ಲಿ 12 ದಿನ ಬ್ಯಾಂಕ್ ರಜೆ, ಸಂಪೂರ್ಣ ಪಟ್ಟಿ ಇಲ್ಲಿದೆ
ನವದೆಹಲಿ, ಜೂನ್.24: ಪ್ರಾದೇಶಿಕ ರಜಾದಿನಗಳು ಮತ್ತು ವಾರಾಂತ್ಯದ ರಜೆಯಿಂದಾಗಿ ಈ ವರ್ಷದ ಜುಲೈನಲ್ಲಿ ದೇಶದಾದ್ಯಂತದ ಬ್ಯಾಂಕುಗಳು 12 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವರ್ಷದ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆರ್‌ಬಿಐ ರಜಾ ಪಟ್ಟಿಯ ಪ್ರಕಾರ, ಈ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಸೇರಿದಂತೆ ಒಟ್ಟು 12 ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಬ್ಯಾಂಕುಗಳು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಕಾರ್ಯನಿರ್ವಹಿಸುತ್ತವೆ.

ಆದರೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಿರುತ್ತವೆ. ಆದರೆ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಇರುತ್ತವೆ. ಆದರೂ, ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಗ್ರಾಹಕರು ರಜೆ ದಿನಗಳನ್ನು ತಿಳಿದುಕೊಳ್ಳಬೇಕು.
ಜುಲೈ 2024 ರಲ್ಲಿ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ
- ಜುಲೈ 3, 2024: ಶಿಲ್ಲಾಂಗ್‌ನಲ್ಲಿನ ಬ್ಯಾಂಕ್‌ಗಳು ಬೆಹ್ ದಿಯೆಂಕ್ಲಾಮ್‌ಗಾಗಿ ಮುಚ್ಚಲ್ಪಡುತ್ತವೆ.
- ಜುಲೈ 6, 2024: ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
- ಜುಲೈ 7, 2024: ಭಾನುವಾರವಾದ್ದರಿಂದ ರಾಷ್ಟ್ರವ್ಯಾಪಿ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
- ಜುಲೈ 8, 2024: ಕಾಂಗ್ ರಥಜಾತ್ರಾಕ್ಕಾಗಿ ಇಂಫಾಲ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ
- ಜುಲೈ 9, 2024: ಗ್ಯಾಂಗ್‌ಟಾಕ್‌ನಲ್ಲಿ ದ್ರುಕ್ಪಾ ತ್ಶೆ-ಜಿಗಾಗಿ ಬ್ಯಾಂಕ್‌ಗಳಿಗೆ ರಜೆ
- ಜುಲೈ 13, 2024: ಎರಡನೇ ಶನಿವಾರವಾದ್ದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
- ಜುಲೈ 14, 2024: ಭಾನುವಾರವಾದ್ದರಿಂದ ರಾಷ್ಟ್ರವ್ಯಾಪಿ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
- ಜುಲೈ 16, 2024: ಡೆಹ್ರಾಡೂನ್‌ನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
- ಜುಲೈ 17, 2024: ಮೊಹರಂಗಾಗಿ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ . ಅಗರ್ತಲಾ, ಐಜ್ವಾಲ್, ಬೇಲಾಪುರ್, ಕರ್ನಾಟಕ, ಭೋಪಾಲ್, ಚೆನ್ನೈ, ಹೈದರಾಬಾದ್ (ಆಂಧ್ರ ಪ್ರದೇಶ ಮತ್ತು ತೆಲಂಗಾಣ), ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ದೆಹಲಿ, ಪಾಟ್ನಾ, ರಾಂಚಿ, ರಾಯ್ಪುರ್, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರ.

ಇನ್ನು, ಪಣಜಿ, ತಿರುವನಂತಪುರಂ, ಕೊಚ್ಚಿ, ಕೊಹಿಮಾ, ಇಟಾನಗರ, ಇಂಫಾಲ್, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಚಂಡೀಗಢ, ಭುವನೇಶ್ವರ್ ಮತ್ತು ಅಹಮದಾಬಾದ್‌ನಲ್ಲಿ ಬ್ಯಾಂಕ್‌ಗಳು ತೆರೆದಿರುತ್ತವೆ.
- ಜುಲೈ 21, 2024: ಭಾನುವಾರವಾದ್ದರಿಂದ ರಾಷ್ಟ್ರವ್ಯಾಪಿ ಎಲ್ಲಾ ಬ್ಯಾಂಕ್‌ಗಳಿಗೆ ರಜೆ.
- ಜುಲೈ 27, 2024: ಇದು ನಾಲ್ಕನೇ ಶನಿವಾರವಾದ್ದರಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ.
- ಜುಲೈ 28, 2024: ಇದು ತಿಂಗಳ ಕೊನೆಯ ಭಾನುವಾರವಾದ್ದರಿಂದ ರಾಷ್ಟ್ರಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ರಾಜ್ಯ ನಿರ್ದಿಷ್ಟ ರಜಾದಿನಗಳು
ಬ್ಯಾಂಕ್ ರಜಾದಿನಗಳು ರಾಜ್ಯಗಳಲ್ಲಿ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳನ್ನು ಅವಲಂಬಿಸಿ ಪ್ರತಿ ರಾಜ್ಯವು ತನ್ನದೇ ಆದ ರಜಾದಿನಗಳ ಪಟ್ಟಿಯನ್ನು ಹೊಂದಿದೆ.
ಇನ್ನು, ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗಿದ್ದರೂ, ಗ್ರಾಹಕರು ಇನ್ನೂ ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಗ್ರಾಹಕರು ರಜಾದಿನಗಳಲ್ಲಿಯೂ ಸಹ ತಮ್ಮ ಮನೆಯಿಂದಲೆ ಕೆಲಸ ಮಾಡಬಹುದು.












Click it and Unblock the Notifications