Bank Holidays in May 2023: ಮೇ ತಿಂಗಳಲ್ಲಿ ಬರೋಬ್ಬರಿ 11 ದಿನ ಬ್ಯಾಂಕ್ ರಜೆ!
ನವದೆಹಲಿ, ಏಪ್ರಿಲ್. 26: ಮುಂದಿನ ಮೇ ತಿಂಗಳಲ್ಲಿ ಎಲ್ಲಾ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ 11 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆಯಿದೆ. ಬ್ಯಾಂಕ್‌ಗೆ ಹೋಗಿಯೇ ಕೆಲಸ ಮಾಡಿಸಬೇಕಿರುವ ಗ್ರಾಹಕರು ಈ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ತಮ್ಮ ಕೆಲಸಗಳನ್ನು ಬ್ಯಾಂಕ್ ಕಾರ್ಯನಿರ್ವಹಿಸುವ ದಿನ ಮುಗಿಸಿಕೊಳ್ಳಬೇಕು.
ಮೇ ತಿಂಗಳಲ್ಲಿ ಮಹಾರಾಷ್ಟ್ರ ದಿನ, ಮೇ ದಿನ, ಬುದ್ಧ ಪೂರ್ಣಿಮಾ, ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ ಮತ್ತು ಮಹಾರಾಣಾ ಪ್ರತಾಪ್ ಜಯಂತಿಯಂತಹ ರಜಾದಿನಗಳಿವೆ. ಹೀಗಾಗಿ ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ತೆರಳಿ ಯಾವುದೇ ಹಣಕಾಸು ವಹಿವಾಟು ನಡೆಸಬೇಕೆಂದು ಇದ್ದರೆ, ಈಗಲೇ ಯಾವೆಲ್ಲ ದಿನಗಳು ಬ್ಯಾಂಕ್ ರಜೆ ಇರಲಿದೆ ಎಂದು ತಿಳಿಯುವುದು ಉತ್ತಮ.

ಗ್ರಾಹಕರು ತಮ್ಮ ಬ್ಯಾಂಕ್ ಕೆಲಸವನ್ನು ರಜೆ ದಿನಗಳನ್ನು ನೋಡಿಕೊಂಡು ಪ್ಲ್ಯಾನ್ ಮಾಡಬೇಕು. ಈ ರಜಾದಿನಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನ್ವಯಿಸುವುದಿಲ್ಲ. ಕೆಲವು ರಜಾದಿನಗಳನ್ನು ರಾಷ್ಟ್ರೀಯ ಸಾರ್ವಜನಿಕ ರಜಾದಿನಗಳು ಎಂದು ಗುರುತಿಸಲಾಗಿದೆ. ಮತ್ತೆ ಕೆಲವು ರಜಾದಿನಗಳು ಆಯಾ ರಾಜ್ಯಗಳಿಗೆ ನಿರ್ದಿಷ್ಟವಾಗಿವೆ.
*ಮೇ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ*
* ಮೇ 1 ರಂದು ಮಹಾರಾಷ್ಟ್ರ, ಕರ್ನಾಟಕ, ಅಸ್ಸಾಂ, ಕೇರಳ, ಆಂಧ್ರಪ್ರದೇಶ, ಬಂಗಾಳ, ತಮಿಳುನಾಡು, ಬಿಹಾರ ಮತ್ತು ಗೋವಾದಂತಹ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಮೇ 5 ರಂದು ಬುದ್ಧ ಪೂರ್ಣಿಮೆಯ ಕಾರಣ ನವದೆಹಲಿ, ಉತ್ತರ ಪ್ರದೇಶ, ಚಂಡೀಗಢ, ಮಧ್ಯಪ್ರದೇಶ, ಜಮ್ಮು, ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್, ತ್ರಿಪುರಾ, ಮಿಜೋರಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮೇ 9, ಮೇ 16 ಮತ್ತು ಮೇ 22 ರಂದು ಆಯ್ದ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

* ಈ ವರ್ಷದ ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ*
1. ಮೇ 1 ಮಹಾರಾಷ್ಟ್ರ ದಿನ, ಮೇ ದಿನ: ಮಹಾರಾಷ್ಟ್ರ, ಕರ್ನಾಟಕ, ಅಸ್ಸಾಂ, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ ಮತ್ತು ಗೋವಾದಲ್ಲಿ ಬ್ಯಾಂಕ್ ರಜೆ.
2. ಮೇ 5 ಬುದ್ಧ ಪೂರ್ಣಿಮಾ: ನವದೆಹಲಿ, ಉತ್ತರ ಪ್ರದೇಶ, ಚಂಡೀಗಢ, ಮಧ್ಯಪ್ರದೇಶ, ಜಮ್ಮು, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್, ತ್ರಿಪುರ, ಮಿಜೋರಾಂ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬ್ಯಾಂಕ್ ರಜೆ
3.ಮೇ 7 ಭಾನುವಾರ: ಭಾರತದಾದ್ಯಂತ ಬ್ಯಾಂಕ್ ರಜೆ
4. ಮೇ 9 ರವೀಂದ್ರನಾಥ ಟ್ಯಾಗೋರ್ ಜನ್ಮದಿನ: ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್ ರಜೆ
5. ಮೇ 13 ಎರಡನೇ ಶನಿವಾರ: ಭಾರತದಾದ್ಯಂತ ಬ್ಯಾಂಕ್ ರಜೆ
6. ಮೇ 14 ಭಾನುವಾರ: ಭಾರತದಾದ್ಯಂತ ಬ್ಯಾಂಕ್ ರಜೆ
7. ಮೇ 16 ಸಿಕ್ಕಿಂ ರಾಜ್ಯ ದಿನ: ಸಿಕ್ಕಿಂನಲ್ಲಿ ಬ್ಯಾಂಕ್ ರಜೆ
8. ಮೇ 21 ಭಾನುವಾರ: ಭಾರತದಾದ್ಯಂತ ಬ್ಯಾಂಕ್ ರಜೆ
9. ಮೇ 22 ಮಹಾರಾಣಾ ಪ್ರತಾಪ್ ಜಯಂತಿ: ಶಿಮ್ಲಾದಲ್ಲಿ ಬ್ಯಾಂಕ್ ರಜೆ
10. ಮೇ 27 ನಾಲ್ಕನೇ ಶನಿವಾರ: ಭಾರತದಾದ್ಯಂತ ಬ್ಯಾಂಕ್ ರಜೆ
11. ಮೇ 28 ಭಾನುವಾರ: ಭಾರತದಾದ್ಯಂತ ಬ್ಯಾಂಕ್ ರಜೆ












Click it and Unblock the Notifications