Bank Holiday Today: ಇಂದು ಬ್ಯಾಂಕ್‌ಗಳು ರಜೆ ಇವೆಯೇ? ಅ.31ರಂದು ಇಲ್ಲಿಯ ಬ್ಯಾಂಕ್ ಬಂದ್
ಬೆಂಗಳೂರು, ಅಕ್ಟೋಬರ್ 30: ಸಾರ್ವಜನಿಕರು ಸೇರಿದಂತೆ ದೇಶ ಪ್ರತಿ ನಾಗರಿಕರಿಗೆ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳ ಸೇವೆ ಮುಖ್ಯವಾಗಿರುತ್ತದೆ. ಈ ಬ್ಯಾಂಕ್‌ಗಳು ಕಳೆದ ದೀಪಾವಳಿ, ಕಾಳಿ ಪೂಜೆ, ಭಾಯಿ ದೂಜ್, ಭಾಯಿ ಬಿಜ್, ಚಿತ್ರಗುಪ್ತ ಪೂಜೆ, ಲಕ್ಷ್ಮಿ ಪೂಜೆ, ಗೋವರ್ಧನ ಪೂಜೆ, ಬಲಿ ಪ್ರತಿಪದ, ಭತ್ರಿ ದ್ವಿತೀಯ ಸೇರಿದಂತೆ ವಿವಿಧ ಆಚರಣೆಗಳ ಸಂಬಂಧ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಂದ್ ಆಗಿದ್ದವು.
ಸದ್ಯ ಈ ಮೇಲಿನ ಎಲ್ಲ ಹಬ್ಬಗಳು ಮುಕ್ತಾಯಗೊಂಡಿವೆ. ರಾಷ್ಟ್ರೀಯ ಆಚರಣೆಗಳಿಗಾಗಿ ಎಲ್ಲ ಬ್ಯಾಂಕ್‌ಗಳು ಬಂದ್ ಇರುತ್ತವೆ. ಆಯಾ ರಾಜ್ಯಗಳಲ್ಲಿನ ವೈಯಕ್ತಿಕ ಆಚರಣೆಗಳು ಇದ್ದಲ್ಲಿ ಮಾತ್ರವೇ ಅಲ್ಲಿಯ ಸ್ಥಳೀಯ ಬ್ಯಾಂಕ್‌ಗಳು ಮುಚ್ಚುತ್ತಿವೆ. ಇಂದು ಗುರುವಾರ ಅಕ್ಟೋಬರ್ 30 ಬ್ಯಾಂಕ್ ಗಳು ರಜೆ ಇವೆಯಾ? ಇಲ್ಲವೇ ತಿಳಿಯಿರಿ. ರಜೆ ಇದ್ದರೆ ಯಾವ ರಾಜ್ಯದ ಬ್ಯಾಂಕ್‌ಗಳಿಗೆ ರಜೆ ತಿಳಿಯಿರಿ.

ಹಬ್ಬಗಳ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ. ಬ್ಯಾಂಕುಗಳು ಸಹ ಮುಚ್ಚಲ್ಪಟ್ಟಿರುತ್ತವೆ. ಮೊದಲು ಅಕ್ಟೋಬರ್‌ನ ಉಳಿದ ಬ್ಯಾಂಕ್ ರಜಾದಿನಗಳ ಪಟ್ಟಿ ನೀವು ಗಮನಿಸಬಹುದು. ಸ್ಥಳೀಯ ಹಬ್ಬಗಳ ಆಧಾರದಲ್ಲಿ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಇಂದು ಬ್ಯಾಂಕ್ ರಜೆ ಇಲ್ಲ, ಅ.31 ರಜೆ ಇದೆ
ದೇಶಾದ್ಯಂತ ಹಲವು ರಾಜ್ಯಗಳಲ್ಲಿ, ದೀಪಾವಳಿ, ಭಾಯಿ ದೂಜ್, ಭಾಯಿ ಬಿಜ್, ಬಲಿ ಪ್ರತಿಪದ, ಭತ್ರಿ ದ್ವಿತೀಯ, ಚಿತ್ರಗುಪ್ತ ಪೂಜೆ, ಲಕ್ಷ್ಮಿ ಪೂಜೆ, ಗೋವರ್ಧನ ಪೂಜೆ, ನಿಂಗೋಲ್ ಚಕ್ಕೌಬಾ, ಕಾಳಿ ಪೂಜೆ, ಮತ್ತು ಛಠ್ ಪೂಜೆಯಿಂದಾಗಿ ಕಳೆದ ಕೆಲವು ದಿನಗಳಿಂದ ಬ್ಯಾಂಕ್‌ಗಳು ಹಲವಾರು ದಿನಗಳವರೆಗೆ ಮುಚ್ಚಲ್ಪಟ್ಟಿದ್ದವು. ಇಂದು, ಗುರುವಾರ, ಅಕ್ಟೋಬರ್ 30, ರಜಾದಿನ ಅಲ್ಲ. ಇದರರ್ಥ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡಲಿವೆ.
ಈ ತಿಂಗಳ ಅಕ್ಟೋಬರ್ ನಲ್ಲಿನ ಉಳಿದ ಬ್ಯಾಂಕ್ ರಜಾದಿನ ನೋಡುವುದಾದರೆ, ಅಕ್ಟೋಬರ್ 31ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಕಾರಣ ಗುಜರಾತ್‌ನಲ್ಲಿ ಬ್ಯಾಂಕ್ ಗಳು ಮುಚ್ಚಲಿವೆ. ಒಂದು ದಿನ ಹಣಕಾಸು ಸಂಸ್ಥೆಗಳ ವಹೀವಾಟು, ಗ್ರಾಹಕರ ಭೇಟಿ ಸ್ಥಗಿತಗೊಳ್ಳಲಿದೆ. ಕರ್ನಾಟಕ ರಾಜ್ಯದಲ್ಲಿ ಬ್ಯಾಂಕಿಂಗ್ ರಜಾ ದಿನ ಇರುವುದಿಲ್ಲ.
ರಜಾದಿನಗಳಲ್ಲಿಯೂ ಗ್ರಾಹಕರು ನೀವು ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಎಂದಿನಂತೆ ಪಡೆಯಬಹುದು. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಇದ್ದರೆ ಇಲ್ಲವೇ ಅಧಿಕೃತ ಅಧಿಸೂಚನೆ ಇದ್ದಾಗ ಮಾತ್ರವೇ ಹೊರಡಿಸಿದಾಗ ಮಾತ್ರ ಆನ್‌ಲೈನ್ ಸೇವೆಗಳು ಪರಿಣಾಮ ಬೀರುತ್ತವೆ. ನಗದು ಹಣ ಪಡೆಯಲು ಎಟಿಎಂ ಯಂತ್ರ ಬಳಸಬಹುದು. ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಯುಪಿಐ ಸೇವೆ ಸಹ ಇರಲಿವೆ. ಡಿಜಿಟಲ್ ಪಾವತಿ ವೇದಿಕೆಗಳು ರಜಾದಿನಗಳಲ್ಲಿ ಕಾರ್ಯ ನಿರ್ವಹಿಸುತ್ತವೆ.












Click it and Unblock the Notifications