Bank Holiday: ಎಲ್ಲ ಬ್ಯಾಂಕ್‌ಗಳ ರಜೆ ರದ್ದು: RBI ಆದೇಶ

ಬೆಂಗಳೂರು, ಫೆಬ್ರವರಿ 15: ಪ್ರಸಕ್ತ 2024-2025ರ ಆರ್ಥಿಕ ಹಣಕಾಸು ವರ್ಷ ಕೊನೆಯಾಗುವುದು ಮಾರ್ಚ್ 31 ರಂದು. ಈ ದಿನದ ಪ್ರಯುಕ್ತ ಹೊಸ ಆದೇಶವೊಂದನ್ನು ಬಿಡುಗಡೆ ಮಾಡಿರುವ 'ಭಾರತೀಯ ರಿಸರ್ವ್‌ ಬ್ಯಾಂಕ್' ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಶಾಕ್ ನೀಡಿದೆ. ಸರ್ಕಾರಿ, ಹಣ ವ್ಯವಹಾರ, ಲೋನ್, ಸೇರಿದಂತೆ ಬ್ಯಾಂಕ್ ವಹೀವಾಟುಗಳ ಖಚಿತತೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಹಣಕಾಸು ವ್ಯವಹಾರಗಳ ವರದಿಯಲ್ಲಿನ ವ್ಯತ್ಯಾಸ ತಪ್ಪಿಸಲು ಈ ಆದೇಶ ಹೊರಡಿಸಲಾಗಿದೆ. ಪ್ರಸಕ್ತ 2024-25ನೇ ಹಣಕಾಸು ವರ್ಷದಲ್ಲಿನ ಎಲ್ಲ ಬ್ಯಾಂಕಿಂಗ್ ವಹಿವಾಟುಗಳನ್ನು ಅದೇ ಕೊನೆ ದಿನ ಸಲ್ಲಿಸಿ, ಖಚಿತಪಡಿಸಿಕೊಳ್ಳಬೇಕು. ಅಂದು ಯಾವ ವ್ಯವಹಾರಗಳು ಬಾಕಿ ಉಳಿಯಬಾರದು ಎಂಬ ಕಾರಣಕ್ಕೆ ಬ್ಯಾಂಕ್ ರಜೆ ರದ್ದುಗೊಳಿಸಿದೆ. ಅಂದರೆ ಆರ್ಥಿಕ ವರ್ಷಾಂತ್ಯಕ್ಕೆ ಕೊನೆಯ ದಿನ ಮಾರ್ಚ್ 31ರಂದು ಇದ್ದ ಬ್ಯಾಂಕ್ ರಜೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Bank Holiday RBI Cancelled All Bank s Holiday on march 31st Instructed to Stay Open on the day

ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳು ಮತ್ತು ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಬ್ಯಾಂಕ್‌ಗಳು ಮಾರ್ಚ್ 31, 2025 (ಸೋಮವಾರ) ರಂದು ತೆರೆದಿರುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅಂದು ಅನೇಕ ರಜಾದಿನಗಳು ಇದ್ದರೂ ಸಹಿತ ಯಾವ ಕಾರಣಕ್ಕೆ ರಜೆ ಪಡೆಯದಂತೆ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ.

ಮಾರ್ಚ್ 31 ರಜೆ ಇತ್ತಾ?

ಹೌದು, ಮುಂದಿನ ತಿಂಗಳ ಮಾರ್ಚ್ 31ರಂದು ಆರ್ಥಿಕ ವರ್ಷದ ಕೊನೆಯ ದಿನವಾಗಿದೆ. ಆದರೆ ಅದೇ ದಿವಸ ರಂಜಾನ್-ಈದ್ (ಈದ್-ಉಲ್-ಫಿತರ್) ಹಬ್ಬವಿದೆ. ಈ ಸಂಬಂಧ ಹಿಮಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳನ್ನು ಬಿಟ್ಟರೆ ಉಳಿದೆಲ್ಲ ರಾಜ್ಯಗಳಲ್ಲಿ ಬ್ಯಾಂಕುಗಳನ್ನು ಮಾರ್ಚ್ 31 ರಂದು ವಹೀವಾಟು ಸ್ಥಗತಿಗೊಳ್ಳಬೇಕಿತ್ತು.

Bank Holiday RBI Cancelled All Bank s Holiday on march 31st Instructed to Stay Open on the day

ಆದರೆ ಹಣಕಾಸು ವರ್ಷದ ಕೊನೆಯ ದಿನ ಸಾಕಷ್ಟು ಬ್ಯಾಂಕಿಂಗ್, ಪಾವತಿ, ವರದಿ ಸಲ್ಲಿಕೆ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಹಣಕಾಸು ವಹಿವಾಟುಗಳು ನಡೆಯಬೇಕಿರುತ್ತದೆ. ಈ ಕಾರಣದಿಂದ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಹಣಕಾಸು ವಹಿವಾಟುಗಳನ್ನು ಮಾರ್ಚ್ 31 ನಡೆಸುವ ಕಾರಣಕ್ಕೆ, ಲೆಕ್ಕ ಪತ್ರ ಖಚಿತಪಡಿಸಿಕೊಳ್ಳಲು RBI ರಜೆ ರದ್ದು ಮಾಡಿ, ಕಾರ್ಯ ನಿರ್ವಹಿಸುವಂತೆ ಆದೇಶ ನೀಡಿದೆ.

ಯಾವಾಗಲೂ ಮಾರ್ಚ್ 31ಹಣಕಾಸು ವರ್ಷಾಂತ್ಯವನ್ನು ಸೂಚಿಸುತ್ತದೆ. ಹೊಸದಾಗಿ ಏಪ್ರಿಲ್ 1ರಿಂದ ಹೊಸ ಹಣಕಾಸು ಶುರುವಾಗುವ ಮೊದಲು ಹಳೆಯ ಎಲ್ಲ ಸರ್ಕಾರದ ಆದಾಯ, ಪಾವತಿ ಸೇರಿದಂತೆ ಎಲ್ಲ ವಿಧದ ವಹಿವಾಟುಗಳನ್ನು ಪೂರ್ಣಗೊಳಿಸಬೇಕು. ಹೀಗಾಗಿ ಅಂದಿನ ದಿನ ಎಲ್ಲ ಬ್ಯಾಂಕ್ ಗಳು ಕೆಲಸ ಮಾಡಲಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಮಾರ್ಚ್ 31 ಯಾವೆಲ್ಲ ಬ್ಯಾಂಕಿಂಗ್ ಸೇವೆ ಲಭ್ಯ?

ಹಣಕಾಸು ಸಂಬಂಧಿ ಆದಾಯ ತೆರಿಗೆ, ಸರಕು ಸೇವಾ ತೆರಿಗೆ (ಜಿಎಸ್‌ಟಿ), ಕಸ್ಟಮ್ಸ್ ಮತ್ತು ಅಬಕಾರಿ ಸುಂಕಗಳು ಮತ್ತು ಸರ್ಕಾರಿ ತೆರಿಗೆ ಪಾವತಿಗಳು, ಪಿಂಚಣಿ ಪಾವತಿಗಳು ಹಾಗೂ ಸರ್ಕಾರಿ ಸಬ್ಸಿಡಿಗಳು, ವೇತನ, ಭತ್ಯೆಯ ವಿತರಣೆಗಳು ಹಾಗೂ ಸಬ್ಸಿಡಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳು ವಹೀವಾಟು ಮಾರ್ಚ್ 31ರಂದು ಲಭ್ಯ ಇರುತ್ತವೆ.

ಏಪ್ರಿಲ್ 1 ರಂದು ಬ್ಯಾಂಕ್ ರಜೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಛತ್ತೀಸ್‌ಗಢ, ಮಿಜೋರಾಂ, ಮೇಘಾಲಯ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಹಾಗೂ ಮೇಘಾಲಯ ಹೊರತುಪಡಿಸಿ ಬಿಟ್ಟರೆ ಉಳಿದೆಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಪ್ರಿಲ್ 1 ರಂದು ( ಸೋಮವಾರ) ಬ್ಯಾಂಕ್‌ ಗಳು ಇರಲಿವೆ. ಹೀಗಾಗಿ ವಹೀವಾಟು ಸ್ಥಗಿತಗೊಳ್ಳಲಿವೆ.

ಡಿಜಿಟಲ್ ಸೇವೆ ಲಭ್ಯ

ಇನ್ನೂ ಬ್ಯಾಂಕ್‌ ರಜೆ ಇರುವ ದಿನ ಆನ್‌ಲೈನ್ ಬ್ಯಾಂಕಿಂಗ್ ಲಭ್ಯ ಇರುತ್ತದೆ. ಅಗತ್ಯ ಇರುವವರು ಡಿಜಿಟಲ್ ಬ್ಯಾಂಕಿಂಗ್ ಸೇವೆ ಪಡೆಯಬಹುದಾಗಿದೆ. ಈ ಬಗ್ಗೆ ಏನಾದರೂ ಸೂಚನೆಗಳಿದ್ದಲ್ಲಿ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಪರಿಶೀಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+