Bank Holiday: ಮೇ 1ರಂದು ಬ್ಯಾಂಕ್ ರಜೆ ಇರುತ್ತಾ? ಇರಲ್ಲವಾ? ಇಲ್ಲಿದೆ ಅಪ್ಡೇಟ್ಸ್
Bank Holidays Update: ಏಪ್ರಿಲ್ ಅಂತ್ಯಕ್ಕೆ ಎರಡು ದಿನಗಳು ಬಾಕಿ ಇದ್ದು, ಮೇ ಮೊದಲ ದಿನವೇ ದೇಶದ ರಾಷ್ಟ್ರೀಕೃತ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ರಜೆ ಇರಲಿವೆ. ಪ್ರತಿ ವರ್ಷ 1 ಅನ್ನು ಅಂತಾರಾಷ್ಟ್ರೀಯ ದಿನಾಚರಣೆ ಆಗಿ ಆಚರಿಸಲಾಗುತ್ತದೆ. I ದಿನವನ್ನು ಪ್ರಪಂಚದಾದ್ಯಂತದ ಶ್ರಮಿಕ ವರ್ಗವಾದ ಕಾರ್ಮಿಕರಿಗೆ ಅವರ ಹಕ್ಕುಗಳಿಗೆ ಸಮರ್ಪಿಸಲಾಗಿದೆ. ಹೀಗಾಗಿ ಈ ದಿನ ಮೇ 1 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಇಲ್ಲವಾ ಎಂಬ ಗೊಂದಲ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿದೆ.
ಕೆಲವೊಮ್ಮೆ ಎಂದಿನಂತೆ ಧಾವಂತದಲ್ಲಿ ಸಾರ್ವಜನಿಕ ರಜೆ ಗಮನಸಿದೇ ಬ್ಯಾಂಕಿಗೆ ಹೊರಟುಬಿಡುತ್ತೀರಿ. ಅಲ್ಲಿಗೆ ಹೋದ ಮೇಲೆ ಇವತ್ತು ಬ್ಯಾಂಕ್ ರಜೆ ಎಂದು ಗೊತ್ತಾಗುತ್ತದೆ. ಅದಕ್ಕಾಗಿ ಮೊದಲೇ ಬ್ಯಾಂಕ್ ರಜೆ, ಕಾರಣ ಕುರಿತು ಮಾಹಿತಿ ಇಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಲೂ ರಾಷ್ಟ್ರೀಯ ರಜಾದಿನಗಳಲ್ಲಿ ಮಾತ್ರ ಭಾರತಾದ್ಯಂತ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ. ಅದೇ ರಾಜ್ಯದಲ್ಲಿ ಸ್ಥಳೀಯ ಹಬ್ಬ ಹರಿದಿನಗಳಿಗೆ ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗುತ್ತದೆ. ಅದೇ ರೀತಿ ಮೇ 1 ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿದೆ. ಆದರೆ ಕಡ್ಡಾಯವಾಗಿ ರಾಷ್ಟ್ರ ಎಲ್ಲ ಬ್ಯಾಂಕ್‌ಗಳು ಮುಚ್ಚುತ್ತವೆ ಎಂಬುದಿಲ್ಲ. ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗುತ್ತವೆ.
ಇನ್ನೂ ಗುಜರಾತ್‌ನಲ್ಲಿ ಮೇ 1 ರಂದು ಗುರುವಾರ ಗುಜರಾತ್ ದಿನ ಹಾಗೂ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ದಿನವಾಗಿ ಆಚರಿಸಲಾಗುತ್ತದೆ. ಇದು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಂಸ್ಥಾಪನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಬ್ಯಾಂಕ್ ರಜೆಗಳು ಘೋಷಣೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.
ಕರ್ನಾಟಕ ಸೇರಿ ಇಲ್ಲಿ ಬ್ಯಾಂಕ್‌ಗಳು ಬಂದ್
ಮೇ 1ರಂದು ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿವೆ. ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಅಸ್ಸಾಂ, ಬಿಹಾರ, ಗೋವಾ, ದೆಹಲಿ, ಮಣಿಪುರ, ಪಶ್ಚಿಮ ಬಂಗಾಳ, ಗುಜರಾತ್, ತ್ರಿಪುರ ಹಾಗೂ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ಗಳು ಬಂದ್ ಆಗಲಿವೆ.
ಇನ್ನೂ ಈ ದಿನ ನೀವು ನಿಮ್ಮ ರಾಜ್ಯದಲ್ಲಿ ಆನ್‌ಲೈನ್ ಸೇವೆ, ಇಂಟರ್‌ನೆಟ್ ಬ್ಯಾಂಕಿಂಗ್ ಸೇರಿದಂತೆ ಎಲ್ಲ ಬಗೆಯ ಡಿಜಿಟಲ್ ಬ್ಯಾಂಕಿಂಗ್ ಸೇವೆ ಇರಲಿದೆ. ಈ ಸೇವೆಗೆ ಬ್ಯಾಂಕ್ ರಜೆಯ ಯಾವ ಪರಿಣಾಮ ಬೀರುವುದಿಲ್ಲ.
2025ರ ಬ್ಯಾಂಕ್‌ಗಳ ರಜಾದಿನ ಪಟ್ಟಿ
ಮೇ 01 ಗುರುವಾರ: ಮಹಾರಾಷ್ಟ್ರ ದಿನ
ಆಗಸ್ಟ್ 15 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ / ಪಾರ್ಸಿ ಹೊಸ ವರ್ಷ
ಆಗಸ್ಟ್ 27 ಬುಧವಾರ: ಶ್ರೀ ಗಣೇಶ ಚತುರ್ಥಿ
ಅಕ್ಟೋಬರ್ 02 ಗುರುವಾರ: ಮಹಾತ್ಮ ಗಾಂಧಿ ಜಯಂತಿ / ದಸರಾ
ಅಕ್ಟೋಬರ್ 21 ಮಂಗಳವಾರ: ದೀಪಾವಳಿ ಲಕ್ಷ್ಮಿ ಪೂಜೆ
ಅಕ್ಟೋಬರ್ 22 ಬುಧವಾರ: ಬಲಿಪ್ರತಿಪದ
ನವೆಂಬರ್ 05 ಬುಧವಾರ: ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್
ಡಿಸೆಂಬರ್ 25 ಗುರುವಾರ: ಕ್ರಿಸ್‌ಮಸ್
ಇವೆಲ್ಲವು ರಾಷ್ಟ್ರೀಯ ರಜಾದಿನಗಳಾಗಿದ್ದು, ಇವುಗಳ ಹೊರತುಪಡಿಸಿ ಆಯಾ ರಾಜ್ಯಗಳ ವಿಶೇಷ ದಿನಗಳಂದು ಬ್ಯಾಂಕ್‌ಗಳು ರಜೆ ಇರುತ್ತವೆ. ಅದನ್ನು ನೀವು ಬ್ಯಾಂಕ್ ಕ್ಯಾಲೆಂಡರ್ ನೋಡಿ ತಿಳಿಯಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications